Home News H D Revanna: ಸೆಲ್ಫಿ ಕೇಳಿದ ಮಹಿಳೆಗೆ ಎಚ್ ಡಿ ರೇವಣ್ಣ ಏನಂದ್ರು ?

H D Revanna: ಸೆಲ್ಫಿ ಕೇಳಿದ ಮಹಿಳೆಗೆ ಎಚ್ ಡಿ ರೇವಣ್ಣ ಏನಂದ್ರು ?

H D Revanna

Hindu neighbor gifts plot of land

Hindu neighbour gifts land to Muslim journalist

H D Revanna: ಮಕ್ಕಳಿಬ್ಬರ ಲೈಂಗಿಕ ಪ್ರಕರಣದಿಂದ ತಂದೆ ಎಚ್ ಡಿ ರೇವಣ್ಣ ಅವರಿಗೆ ಬಾರಿ ಮುಜುಗರ ಆದಂತೆ ಕಾಣುತ್ತಿದೆ. ಹೀಗಾಗಿ ಯಾವ ವಿಚಾರದಲ್ಲೂ ಅವರು ತಲೆ ಹಾಕುತ್ತಿಲ್ಲ. ಯೋಚನೆ ಮಾಡಿ ಹೆಜ್ಜೆ ಇಡುತ್ತಿದ್ದಾರೆ. ಅಂತೆಯೇ ಇಂದು ರೇವಣ್ಣ(H D Revanna) ಅವರಿಗೆ ಮಹಿಳೆಯೊಬ್ಬರು ಸೆಲ್ಫಿ ಕೇಳಿದ್ದು ಇದಕ್ಕೆ ರೇವಣ್ಣ ‘ಏ ಹಂಗೆಲ್ಲಾ ಬೇಡಮ್ಮ’ ಎಂದು ಸೀದಾ ಕಾರು ಹತ್ತಿ ಹೋಗಿದ್ದಾರೆ.

Water Bill Hike: ರಾಜ್ಯದ ಜನರ ಜೇಬಿಗೆ ಬೀಳಲಿದೆ ಮತ್ತೆ ಕತ್ತರಿ – ಸದ್ಯದಲ್ಲೇ ಇದರ ಬೆಲೆಯೂ ಏರಿಕೆ !!

ಹೌದು, ಮಕ್ಕಳು ಮಾಡುವ ಅವಾಂತರಗಳು ಪೋಷಕರಿಗೆ ತುಂಬಾ ಮುಜುಗರ ನೀಡುತ್ತದೆ. ಅಂತೆಯೇ ಹೋದಲ್ಲೆಲ್ಲಾ ಅಭಿಮಾನಿಗಳೊಂದಿಗೆ, ಕಾರ್ಯಕರ್ತರೊಂದಿಗೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ರೇವಣ್ಣ ಅವರು ಇಂದು ಅದರಿಂದ ದೂರ ಉಳಿದಿದ್ದಾರೆ.

ಬೆಂಗಳೂರಿನಲ್ಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಕಾರು ಹತ್ತುವ ವೇಳೆ ಮಹಿಳಾ ಅಭಿಮಾನಿಯೊಬ್ಬರು ಸರ್, ಸರ್ ಎಂದು ಹಿಂದೆ ಬಂದಿದ್ದಾರೆ. ಆಗ ರೇವಣ್ಣ ಏನಮ್ಮ ಅಂದಿದಕ್ಕೆ, ಸರ್ ನಿಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕು ಬನ್ನಿ ಅಂದಿದಕ್ಕೆ ರೇವಣ್ಣ ಅವರು ಹೇ ಹಂಗೆಲ್ಲಾ ಬೇಡಮ್ಮ, ಫೋಟೋ ಅನ್ನುತ್ತೀರಿ, ನಾಳೆ ಅದು ವಿಡಿಯೋ ಆಗ್ಬೋದು ಅಂತ ಸೀದಾ ಕಾರು ಹತ್ತಿ ಹೋಗಿದ್ದಾರೆ.

ಇಂದಿನ ಈ ಆಧುನಿಕ ಯುಗ, ಸಾಮಾಜಿಕ ಜಾಲತಾಣಗಳು ಏನು ಬೇಕಾದರು ಮಾಡಬಹುದು. ಆಗುತ್ತಿರುವ ಬೆಳವಣಿಗೆಗಳಿಂದ ಏನು ಬೇಕಾದರೂ ಆಗಬಹುದು. ಹೀಗಾಗಿ ಸಮಾಜದಲ್ಲಿ ಗುರುತಿಸಿಕೊಂಡವರು, ರಾಜಕಾರಣಿಗಳು ಕೊಂಚ ಜಾಗ್ರತೆಯ ಹೆಜ್ಜೆ ಇಡುವುದು ಉತ್ತಮ.

Amith Shah: ಯತ್ನಾಳ್ ಬರೆದ ಪತ್ರಕ್ಕೆ ರಿಪ್ಲೇಕೊಟ್ಟ ಅಮಿತ್ ಶಾ – ರಾಜ್ಯದಲ್ಲಿ ಇವರೆಲ್ಲರಿಗೂ ಶುರುವಾಯ್ತು ನಡುಕ !!