Home News Roman treasures: ಏನಿದು ಆಶ್ಚರ್ಯ! – ಮೋಜು-ಮಸ್ತಿ ಮಾಡಲು ಹೋದ ಗುಂಪು – ಮಡಕೆಯಲ್ಲಿ ಸಿಕ್ಕವು...

Roman treasures: ಏನಿದು ಆಶ್ಚರ್ಯ! – ಮೋಜು-ಮಸ್ತಿ ಮಾಡಲು ಹೋದ ಗುಂಪು – ಮಡಕೆಯಲ್ಲಿ ಸಿಕ್ಕವು 631 ನಾಣ್ಯಗಳು, 222 ಗ್ರಾಂ ಚಿನ್ನದ ಹಾರ

Hindu neighbor gifts plot of land

Hindu neighbour gifts land to Muslim journalist

Roman treasures: ಡೆನಾರ್ ಕಾಲಿಸ್ಟ್ ಎಂಬ ಗುಂಪು ಪೋಲೆಂಡ್‌ನ ಗೋಡ್ಡಿಯೆಕ್ ಕಾಡಿನಲ್ಲಿ ತಮಾಷೆಗಾಗಿ ನಿಧಿಯನ್ನು ಹುಡುಕಲು ಹೊರಟಾಗ ಅವರಿಗೆ ನಿಧಿ ಸಿಕ್ಕಿದೆ. ಆ ಗುಂಪು ಮೊದಲು ಯೋಧನ ಅವಶೇಷಗಳನ್ನು ಹೊಂದಿರುವ ರೋಮನ್ ಯುಗದ ಸಮಾಧಿಯನ್ನು ಪತ್ತೆ ಹಚ್ಚಿತು. ಹೀಗೆ ಹುಡುಕಾಟ ಮುಂದುವರೆಸಿದ ತಂಡಕ್ಕೆ ಕೆಲವು ದಿನಗಳ ನಂತರ, ಅವರು ಮಣ್ಣಿನ ಪಾತ್ರೆಯಲ್ಲಿ 631 ನಾಣ್ಯಗಳು ಮತ್ತು 222 ಗ್ರಾಂ ತೂಕದ 5ನೇ ಶತಮಾನದ ಚಿನ್ನದ ಹಾರವೂ ಪತ್ತೆಯಾಗಿದೆ.

ಜೂನ್ ಆರಂಭದಲ್ಲಿ ಪ್ರೆಜ್ವರ್ಸ್ಕ್ ಸಂಸ್ಕೃತಿಗೆ ಸಂಬಂಧಿಸಿದ ರೋಮನ್ ಯುಗದ ಸಮಾಧಿ ಸ್ಥಳದ ಆವಿಷ್ಕಾರದೊಂದಿಗೆ ಪರಿಶೋಧನೆ ಪ್ರಾರಂಭವಾಯಿತು. ಒಂದು ಸಮಾಧಿಯಲ್ಲಿ ಯೋಧನ ಅವಶೇಷಗಳನ್ನು ಅವನ ಈಟಿಯ ತಲೆ ಮತ್ತು ಗುರಾಣಿಯೊಂದಿಗೆ ಸಮಾಧಿ ಮಾಡಲಾಗಿತ್ತು. ಇದು ಆ ಕಾಲದ ಸಮರ ಸಂಪ್ರದಾಯಗಳಿಗೆ ಸಾಕ್ಷಿಯಾಗಿದೆ.

ಕೆಲವು ದಿನಗಳ ನಂತರ, 11 ನೇ ಶತಮಾನದ ನಾಣ್ಯ ಮತ್ತು ಸಣ್ಣ ಸೆರಾಮಿಕ್ ಪಾತ್ರೆಯನ್ನು ಹೊರತೆಗೆಯಲಾಯಿತು. ಮೊಹರು ಮಾಡಿದ ಪಾತ್ರೆಯನ್ನು ಕಾಲಿಸ್ಜ್‌ನ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪರಿಶೀಲಿಸಲಾಯಿತು. ಒಳಗೆ, ಪುರಾತತ್ತ್ವಜ್ಞರು 631 ನಾಣ್ಯಗಳು ಮತ್ತು ಇನ್ನಿತರ ತುಣುಕುಗಳನ್ನು ಪತ್ತೆಹಚ್ಚಿದರು, ಇದು ಹಿಂದಿನ ಬಿಡಿ ನಾಣ್ಯಗಳ ಗುಪ್ತ ಸಂಗ್ರಹದ ಬಗ್ಗೆ ಸುಳಿವು ನೀಡಿದೆ ಎಂದು ದೃಢಪಡಿಸಿದೆ.

ಜೂನ್ ಅಂತ್ಯದ ವೇಳೆಗೆ, ನಾಣ್ಯಗಳಿಂದ ತುಂಬಿದ ಎರಡನೇ ಸೆರಾಮಿಕ್ ಮಡಕೆ ಪತ್ತೆಯಾಗಿತ್ತು. ಆದರೆ ಜುಲೈ 12 ರಂದು ಡೆನಾರ್ ಕಾಲಿಸ್ಜ್ ಸದಸ್ಯ ಮಾಟೆಯುಸ್ಜ್ ಲಚೋವಿಚ್ ಅವರು ಮೊದಲು ಚಿನ್ನದ ಬಳೆಯಂತೆ ಕಾಣುವ ತುಂಡನ್ನು ಹೊರತೆಗೆದಾಗ ದೊಡ್ಡ ಸುದ್ದಿ ಹರಿದಾಡಿತ್ತು.

5 ನೇ ಶತಮಾನಕ್ಕೆ ಸೇರಿದ ಸಂಪೂರ್ಣ ಚಿನ್ನದ ಟಾರ್ಕ್ ಅಥವಾ ಗಟ್ಟಿಮುಟ್ಟಾದ ಹಾರ. ಮಡಕೆಯೊಳಗೆ ಹೊಂದಿಕೊಳ್ಳಲು ಬಾಗಿಸಿ ಮಡಿಸಿ ಇಡಲಾಗಿತ್ತು. 222 ಗ್ರಾಂ ತೂಕವಿದ್ದು, ಬಹುತೇಕ ಶುದ್ದ ಚಿನ್ನದಿಂದ ಮಾಡಿದ್ದಾಗಿದೆ. ಹಾರವು ಅಸಾಮಾನ್ಯ ಮತ್ತು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ. ವಲಸೆ ಅವಧಿಯಲ್ಲಿ ಆಧುನಿಕ ಪೋಲೆಂಡ್‌ನ ಕೆಲವು ಭಾಗಗಳಲ್ಲಿ ವಾಸಿಸುತ್ತಿದ್ದ ಗೋಥಿಕ್ ಸಂಸ್ಕೃತಿಗೆ ಸೇರಿದ ಜನರಿಗೆ ಇದು ಸಂಬಂಧಿಸಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

Weather Repoprt: ಕರ್ನಾಟಕ ಹವಾಮಾನ ಮುನ್ಸೂಚನೆ: ಆಗಸ್ಟ್ 20ರ ತನಕವೂ ಬಿಟ್ಟು ಬಿಟ್ಟು ಮಳೆ ಸಾಧ್ಯತೆ