Home News Whale Death: ದೋಣಿಗೆ ಡಿಕ್ಕಿ ಹೊಡೆದು ತಿಮಿಂಗಿಲ ಸಾವು – Video Viral

Whale Death: ದೋಣಿಗೆ ಡಿಕ್ಕಿ ಹೊಡೆದು ತಿಮಿಂಗಿಲ ಸಾವು – Video Viral

Hindu neighbor gifts plot of land

Hindu neighbour gifts land to Muslim journalist

Whale Death: ಸಮುದ್ರದಲ್ಲಿ ಬೋಟ್‌ಗೆ ಡಿಕ್ಕಿ ಹೊಡೆದು 20 ಅಡಿ ಉದ್ದದ ತಿಮಿಂಗಿಲವೊಂದು ಸಾವನ್ನಪಿದ ಘಟನೆ ನಡೆದಿದೆ, ಅದರ ವೀಡಿಯೋ ವೈರಲ್ ಆಗಿದೆ.

ಅಮೆರಿಕಾದ ನ್ಯೂಜೆರ್ಸಿಯ ಬರ್ನೆಗಟ್ ಕೊಲ್ಲಿಯಲ್ಲಿ ಸಣ್ಣ ದೋಣಿಯೊಂದು ಡಿಕ್ಕಿ ಹೊಡೆದ ನಂತರ ಘಟನೆ ನಡೆದಿದೆ ಎನ್ನಲಾಗಿದೆ. ಈ ಘಟನೆಯನ್ನು ಹತ್ತಿರದ ಮತ್ತೊಂದು ದೋಣಿಯಲ್ಲಿದ್ದ ಪ್ರಯಾಣಿಕರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಅಂದಹಾಗೆ ಅಪಘಾತ ಸಂಭವಿಸುವ 50 ನಿಮಿಷಗಳ ಮೊದಲು, ಸಮುದ್ರ ಸಸ್ತನಿ ಕಡಲು ನಿಯಂತ್ರಣ ಕೇಂದ್ರವು, ಬರ್ನೆಗಟ್ ಕೊಲ್ಲಿಯಲ್ಲಿ ತಿಮಿಂಗಿಲ ಕಾಣಿಸಿಕೊಂಡಿದೆ ಎಂಬ ಸಂದೇಶವು ಬಂದಿತ್ತು ಆದರೆ ಇದಾಗಿ ಕೆಲ ನಿಮಿಷಗಳಲ್ಲಿ ದುರಂತ ಸಂಭವಿಸಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಘಟನೆಯ ಬಳಿಕ ಆಳವಿಲ್ಲದ ನೀರಿನ ಮರಳು ದಿಬ್ಬದ ಮೇಲೆ ತಿಮಿಂಗಿಲ ಬಿದ್ದ ನಂತರ ಅದು ಸಾವಿಗೀಡಾಗಿರುವುದು ಖಚಿತವಾಗಿದೆ. ಮಧ್ಯಾಹ್ನ ಸುಮಾರು 3:40 ರ ಸುಮಾರಿಗೆ, ಆ ಪ್ರದೇಶದ ದೋಣಿ ಸವಾರನೊಬ್ಬ ತಿಮಿಂಗಿಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಹಡಗು ಬಹುತೇಕ ಮಗುಚಿ ಬಿದ್ದಿತು ಮತ್ತು ಅದರಲ್ಲಿದ್ದ ಪ್ರಯಾಣಿಕನೋರ್ವ ಸಮುದ್ರಕ್ಕೆ ಬಿದ್ದಿದ್ದಾನೆ. ನೀರಿಗೆ ಬಿದ್ದ ವ್ಯಕ್ತಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: Holiday : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ- ನಾಳೆ ಶಾಲಾ, ಕಾಲೇಜುಗಳಿಗೆ ರಜೆ ?