Home News Ugrappa: ಕುರುಬ ಸಮುದಾಯವನ್ನು ST ಗೆ ಸೇರಿಸಿದರೆ ಸುಮ್ಮನಿರಲ್ಲ – ಸಿದ್ದರಾಮಯ್ಯ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್...

Ugrappa: ಕುರುಬ ಸಮುದಾಯವನ್ನು ST ಗೆ ಸೇರಿಸಿದರೆ ಸುಮ್ಮನಿರಲ್ಲ – ಸಿದ್ದರಾಮಯ್ಯ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ನಾಯಕ

Hindu neighbor gifts plot of land

Hindu neighbour gifts land to Muslim journalist

Ugrappa: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮುದಾಯವನ್ನು ಎಸ್ ಟಿ ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಬಾರಿ ವಿರೋಧ ಎದುರಾಗಿದ್ದು, ಇದೀಗ ಕಾಂಗ್ರೆಸ್ ನಾಯಕ ಉಗ್ರಪ್ಪ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ರಾಜ್ಯದಲ್ಲಿ ಮೀಸಲಾತಿ ಫೈಟ್ ಜೋರಾಗಿದೆ. ಅದರಲ್ಲೂ ಕುರುಬರನ್ನು ಎಸ್​ಟಿಗೆ ಸೇರಿಸಲು ಭಾರೀ ವಿರೋಧ ವ್ಯಕ್ತವಾಗುತ್ತಿದೆ. ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿಯೂ ಕೂಡ ಇದೇ ವಿಚಾರವಾಗಿ ಚರ್ಚೆಯಾಗಿದ್ದು ಉಗ್ರಪ್ಪನವರು ವೇದಿಕೆಯಲ್ಲಿ ಸಿದ್ದರಾಮಯ್ಯ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ನಮ್ಮ ತಟ್ಟೆಯನ್ನು ಕಿತ್ತುಕೊಳ್ಳೋಕೆ ಹೋಗ್ಬೇಡಿ. ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸಿದರೆ ಸುಮ್ಮನ ಇರುವುದಿಲ್ಲ. ಸಿದ್ದರಾಮಯ್ಯನವರೇ, ನಮ್ಮ ತಟ್ಟೆಯನ್ನು ಕಿತ್ತುಕೊಳ್ಳೋಕೆ ಹೋಗ್ಬೇಡಿ. ನಮ್ಮ ಜೊತೆ ಸಹಪಂಥಿಯಲ್ಲಿ ಕೂರಬೇಕಾದರೆ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ಎಂದು ಉಗ್ರಪ್ಪ ಕಿಡಿ ಕಾರಿದ್ದಾರೆ.

ಈ ಮೂಲಕ ಕುರುಬ ಸಮುದಾಯವನ್ನು ಎಸ್‌.ಟಿ. ಪಟ್ಟಿಗೆ ಸೇರ್ಪಡೆ ಮಾಡಿದರೇ, ಹಾಲಿ ಇರುವ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.7 ರಿಂದ ಶೇ.14 ಕ್ಕೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದರು. ಮೀಸಲಾತಿಯ ಪ್ರಮಾಣವನ್ನು ಶೇ.7 ರಿಂದ ಶೇ. 14 ಕ್ಕೆ ಹೆಚ್ಚಳ ಮಾಡದೇ, ಶೇ.7 ರಲ್ಲೇ ಕುರುಬರಿಗೂ ಎಸ್‌.ಟಿ. ಮೀಸಲಾತಿ ನೀಡಿದರೇ ನಮ್ಮ ಆಕ್ಷೇಪ ಇರುತ್ತೆ. ಅಂಥ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಪರವಾಗಿ ತಾವು ಹೋರಾಟ ಮಾಡುವುದಾಗಿ ವಿ.ಎಸ್.ಉಗ್ರಪ್ಪ ಘೋಷಿಸಿದ್ದಾರೆ.

ಇದನ್ನೂ ಓದಿ;Sun Rain: ಸೂರ್ಯನ ಮೇಲೆ ಮಳೆ ಬೀಳಲು ಕಾರಣ ಏನು? ಹವಾಯಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಪತ್ತೆ