Home News BIFFS: ಸಿನೆಮಾದವರ ನಟ್ಟು, ಬೋಲ್ಟ್‌ ಟೈಟ್‌ ಮಾಡೋದು ಗೊತ್ತು-ಡಿಕೆಶಿ

BIFFS: ಸಿನೆಮಾದವರ ನಟ್ಟು, ಬೋಲ್ಟ್‌ ಟೈಟ್‌ ಮಾಡೋದು ಗೊತ್ತು-ಡಿಕೆಶಿ

Hindu neighbor gifts plot of land

Hindu neighbour gifts land to Muslim journalist

BIFFS: ನಮ್ಮ ನೀರು ನಮ್ಮ ಹಕ್ಕು ಹೋರಾಟದಲ್ಲಿ ಹತ್ತಕ್ಕಿಂತ ಹೆಚ್ಚು ನಟ ನಟಿಯರು ಭಾಗವಹಿಸಿಲ್ಲ. ನನಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಸಿನೆಮಾ ನಟರ ಬಗ್ಗೆ ಸಿಟ್ಟು ಬಂದಿದೆ. ನಿಮ್ಮ ಚಲನವಲನ, ಹಾವಭಾವ ಎಲ್ಲವನ್ನೂ ಗಮನಿಸುತ್ತಿರುತ್ತೇನೆ. ಯರ್ಯಾರಿಗೆ ಎಲ್ಲೆಲ್ಲ ನಟ್ಟು ಬೋಲ್ಟ್‌ ಟೈಟ್‌ ಮಾಡಬೇಕು ಎಲ್ಲಾ ನನಗೂ ಗೊತ್ತಿದೆ. ಇದನ್ನು ಎಚ್ಚರಿಕೆ ಎಂದಾದರೂ ತೆಗೆದುಕೊಳ್ಳಿ. ಮನವಿ ಎಂದಾದರೂ ತೆಗೆದುಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಗುಡುಗಿದ್ದಾರೆ.

ಇಂದಿನ ಕಾರ್ಯಕ್ರಮದಲ್ಲಿಯೇ ನೋಡಿ, ಹತ್ತು ಜನಕ್ಕಿಂತ ಹೆಚ್ಚು ಯಾರೂ ಇಲ್ಲ. ಇದು ನಮ್ಮ ಅಥವಾ ಸಿದ್ದರಾಮಯ್ಯ ಅವರ ಮನೆ ಕಾರ್ಯಕ್ರಮವಲ್ಲ. ನೀವೇ ಬರದಿದ್ದರೆ ನಾವು ಏಕೆ ಈ ಕಾರ್ಯಕ್ರಮ ಮಾಡಬೇಕು? ನಾವು ಚಿತ್ರೀಕರಣಕ್ಕೆ ಅನುಮತಿ ಕೊಡಬೇಡಿ ಎಂದರೆ ಚಿತ್ರೀಕರಣ ನಡೆಯುವುದೇ ಇಲ್ಲ. ಆಗ ಏನು ಮಾಡುತ್ತೀರಿ? ಯಾರ್ಯಾರಿಗೆ ಎಲ್ಲೆಲ್ಲಿ ನಟ್ಟು ಬೋಲ್ಟ್‌ ಟೈಟ್‌ ಮಾಡಬೇಕು ಎಂದು ನನಗೂ ಗೊತ್ತಿದೆ ಎಂದು ಹೇಳಿದರು.

ಇತ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ ಆರ್.‌ ಅಶೋಕ್‌ ಅವರು ಸಮಾಜದಲ್ಲಿ ಎಲ್ಲರೂ ತಮಗೆ ಮತ್ತು ತಮ್ಮ ಪಕ್ಷಕ್ಕೆ ಸೆಲ್ಯೂಟ್ ಹೊಡೆದು, ತಮ್ಮ ಅಡಿಯಾಳುಗಳಂತೆ ನಡೆದುಕೊಳ್ಳಬೇಕು ಎನ್ನುವ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬನ್ನಿ. ಕಲಾವಿದರು ಯಾರ ಸ್ವತ್ತೂ ಅಲ್ಲ. ಕಲಾವಿದರಿಗೆ ಅವರ ವಿವೇಚನೆಗೆ ತಕ್ಕಂತೆ ನಡೆದುಕೊಳ್ಳುವ, ಯಾರ ಜೊತೆ ಬೇಕಾದರೂ ಗುರುತಿಸಿಕೊಳ್ಳುವ ಅಥವಾ ಗುರುತಿಸಿಕೊಳ್ಳದಿರುವ ಸ್ವಾತಂತ್ರ್ಯವಿದೆ, ಹಕ್ಕಿದೆ ಎಂದು ಬರೆದಿದ್ದಾರೆ.