Home News Vijayalakshmi: ಜೈಲಿನ ರಾಜಾತಿಥ್ಯ ವಿಡಿಯೋ ಲೀಕ್‌ ನಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕೈವಾಡ? ಸತ್ಯ ಬಾಯಿಬಿಟ್ಟ...

Vijayalakshmi: ಜೈಲಿನ ರಾಜಾತಿಥ್ಯ ವಿಡಿಯೋ ಲೀಕ್‌ ನಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕೈವಾಡ? ಸತ್ಯ ಬಾಯಿಬಿಟ್ಟ ಧನ್ವೀರ್?

Hindu neighbor gifts plot of land

Hindu neighbour gifts land to Muslim journalist

Vijayalakshmi : ಪರಪ್ಪನ ಅಗ್ರಹಾರ ಜೈಲಿನ ವಿಡಿಯೋಗಳ ವೈರಲ್ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೆಸರು ಕೇಳಿಬಂದಿದೆ. ದರ್ಶನ್ ಅವರ ಪರಮಾಪ್ತ ನಟ ಧನ್ವೀರ್, ವಿಜಯಲಕ್ಷ್ಮಿ ಅವರ ಹೆಸರನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ.

ಹೌದು, ಪರಪ್ಪನ ಅಗ್ರಹಾರ ಜೈಲಿಗೆ ಸಂಬಂಧಿಸಿದ ಕೆಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಶಂಕಿತ ಉಗ್ರನಿಗೆ, ವಿಕೃತ ಕಾಮಿ ಉಮೇಶ್ ರೆಡ್ಡಿ ಸೇರಿದಂತೆ ಅನೇಕ ಘೋರ ಅಪರಾಧಗಳನ್ನ ಮಾಡಿ ಜೈಲು ಸೇರಿರುವ ಕೆಲವು ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿಡಿಯೋ ಲೀಕ್ ಮಾಡಿದವರ ಕುರಿತಾಗಿ ತನಿಖೆ ನಡೆಸಿದ ಪೊಲೀಸರು ದರ್ಶನ್ ಅವರ ಆಪ್ತರನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ನಟ ದನ್ವೀರ್ ಅವರು ಕೂಡ ವಿಚಾರಣೆಗೆ ಹಾಜರಾಗಿದ್ದರು. ಆಗ ಪರಪ್ಪನ ಅಗ್ರಹಾರ ಜೈಲಿನ ವೀಡಿಯೋ ಲೀಕ್ ಕೇಸ್ ಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ವಿಚಾರಣೆ ನಡೆಸುವ ವೇಳೆ ಧನ್ವೀರ್ ವಿಜಯಲಕ್ಷ್ಮಿ ಹೆಸರು ಹೇಳಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಲಾಗುತ್ತಿರುವ ವಿಡಿಯೋ ನಾನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ ಎಂದು ನಟ ಧನ್ವೀರ್ ತಿಳಿಸಿದ್ದಾರೆ, ಅಲ್ಲದೇ ನನಗೆ ಯಾರೋ ಲಾಯರ್ ಒಬ್ಬರಿಂದ ಬಂತು, ಅದನ್ನು ನೋಡಿ ನಂತರ ವಿಜಯಲಕ್ಷ್ಮಿ ಅವರಿಗೆ ಕಳುಹಿಸಿದೆ ಎಂದು ಹೇಳಿದ್ದಾರೆ. ನಿಜವಾಗಿಯೂ ನಾನು ಜೈಲು ಒಳಗಿನ ವಿಡಿಯೋವನ್ನು ವೈರಲ್ ಮಾಡಿಲ್ಲ, ಅದೇಗೆ ವೈರಲ್ ಆಯ್ತು ಗೊತ್ತಿಲ್ಲ ಎಂದು ನಟ ಧನ್ವೀರ್ ತಿಳಿಸಿದ್ದಾರೆ. ಇನ್ನು ನಟನ ಹೇಳಿಕೆಯ ಆಧಾರದ ಮೇಲೆ ವಿಜಯಲಕ್ಷ್ಮಿ ಅವರನ್ನು ಕೂಡ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.