Home News ಕೇರಳದಲ್ಲಿ 24 ಲಕ್ಷಕ್ಕೂ ಹೆಚ್ಚು ಮತದಾರರು ಕರಡು ಮತದಾರರ ಪಟ್ಟಿಯಿಂದ ಕೊಕ್

ಕೇರಳದಲ್ಲಿ 24 ಲಕ್ಷಕ್ಕೂ ಹೆಚ್ಚು ಮತದಾರರು ಕರಡು ಮತದಾರರ ಪಟ್ಟಿಯಿಂದ ಕೊಕ್

Voter ID

Hindu neighbor gifts plot of land

Hindu neighbour gifts land to Muslim journalist

ತಿರುವನಂತಪುರ: ಕೇರಳದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪೂರ್ಣಗೊಳಿಸಿರುವ ಚುನಾವಣಾ ಆಯೋಗ, ಮಂಗಳವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಒಟ್ಟು 24 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಆಯೋಗ ಕೈ ಬಿಟ್ಟಿದೆ.

ಈ ಪೈಕಿ 6,49,885 ಹೆಸರುಗಳನ್ನು ಮತದಾರರ ಸಾವು: 6,43,548 ಹೆಸರುಗಳನ್ನು ಮತದಾರರು ನಾಪತ್ತೆ: 8,16,221 ಹೆಸರುಗಳನ್ನು ಮತದಾರ ಶಾಶ್ವತ ವಲಸೆ ಹಾಗೂ 1,36,029 ಹೆಸರುಗಳನ್ನು ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ ಕಾರಣದಡಿ ಡಿಲೀಟ್ ಮಾಡಲಾಗಿದೆ. ಮುಖ್ಯ ಚುನಾವಣಾ ಅಧಿಕಾರಿ ರತನ್ ಯು ಕೇಲ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಪರಿಷ್ಕರಣೆ ಬಳಿಕ ರಾಜ್ಯದ ಒಟ್ಟು ಮತದಾರರ ಸಂಖ್ಯೆ 2 ಕೋಟಿ 54 ಲಕ್ಷಕ್ಷೆ ಇಳಿದಿದೆ. ‘ಎಸ್ ಐಆರ್’ಗೆ ಮುನ್ನ ಮತದಾರರ ಪಟ್ಟಿಯಲ್ಲಿ 2 ಕೋಟಿ 78 ಲಕ್ಷ ಹೆಸರುಗಳಿದ್ದವು