Home News ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2020-21ನೇ ಸಾಲಿನ ಚಿಗುರು ವಾರ್ಷಿಕ ಸಂಚಿಕೆ ಅನಾವರಣ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2020-21ನೇ ಸಾಲಿನ ಚಿಗುರು ವಾರ್ಷಿಕ ಸಂಚಿಕೆ ಅನಾವರಣ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2020-21 ನೇ ಸಾಲಿನ ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ನೀಡುವ ವೇದಿಕೆಯಾದ ಚಿಗುರು ವಾರ್ಷಿಕ ಸಂಚಿಕೆ ಬಿಡುಗಡೆಯ ಸಮಾರಂಭವು ನಡೆಯಿತು. ಆಡಳಿತ ಮಂಡಳಿಯ ಸದಸ್ಯೆ ವತ್ಸಲಾರಾಜ್ಞಿ ಚಿಗುರು ವಾರ್ಷಿಕ ಸಂಚಿಕೆಯನ್ನು ಅನಾವರಣಗೊಳಿಸಿ, ಸಂಚಿಕೆಯು ಸುಂದರವಾಗಿ ಮೂಡಿಬರಲು ಕಾರಣಕರ್ತರಾದ ಚಿಗುರು ಸಮಿತಿ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಸಂತೋಷ್ ಬಿ, ಸದಸ್ಯ ರವಿ ಮುಂಗ್ಲಿಮನೆ, ಪ್ರಾಂಶುಪಾಲ ಮಹೇಶ ನಿಟಿಲಾಪುರ, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಹಾಜರಿದ್ದರು. ಚಿಗುರು ಸಂಚಿಕೆಯ ಸಂಪಾದಕಿ ಚಿನ್ಮಯಿಮಯ್ಯ ಸ್ವಾಗತಿಸಿ ವಂದಿಸಿದರು.