Home News RCB ಗೆ ‘ವಿರಾಟ್’ ವಿದಾಯ – ಕೊಹ್ಲಿ ಸ್ಥಾನಕ್ಕೆ ಶುಭಮನ್ ಗಿಲ್?

RCB ಗೆ ‘ವಿರಾಟ್’ ವಿದಾಯ – ಕೊಹ್ಲಿ ಸ್ಥಾನಕ್ಕೆ ಶುಭಮನ್ ಗಿಲ್?

Hindu neighbor gifts plot of land

Hindu neighbour gifts land to Muslim journalist

 

RCB: ಐಪಿಎಲ್ 2026 ತಯಾರಿಗಳು ಜೋರಾಗಿ ನಡೆಯುತ್ತಿವೆ. ಸದ್ಯದಲ್ಲೇ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಈ ನಡುವೆ ಆರ್‌ಸಿಬಿ ಫ್ರಾಂಚೈಸಿಯ ವಾಣಿಜ್ಯ ಒಪ್ಪಂದ ನವೀಕರಿಸದಿರಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಆರ್‌ಸಿಬಿಯನ್ನು ತೊರೆಯಲಿದ್ದು ಈವರ ಸ್ಥಾನಕ್ಕೆ ಶುಭಮನ್ ಗಿಲ್ ಬರಲಿದ್ದಾರೆ ಎಂಬ ಸುದ್ದಿ ಕೂಡ ವೈರಲಾಗುತ್ತಿದೆ.

 

ಹೌದು, 2008ರಿಂದಲೂ ಆರ್‌ಸಿಬಿ ತಂಡದ ‘ಮುಖ’ವಾಗಿರುವ ವಿರಾಟ್ ಕೊಹ್ಲಿ ಅವರ ಸ್ಥಾನವನ್ನು ತುಂಬಲು, ಫ್ರಾಂಚೈಸಿಯು ಈ ಹಿಂದೆ ಯುವ ತಾರೆ ಶುಭಮನ್ ಗಿಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿತ್ತು ಎಂಬ ಆಸಕ್ತಿದಾಯಕ ವರದಿಯೊಂದು ಇದೀಗ ಹೊರಬಿದ್ದಿದೆ. ಆರ್‌ಸಿಬಿ ತಂಡದ ‘ಬ್ರಾಂಡ್’ ಆಗಿ ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿಯಾಗಿ ಗಿಲ್ ಅವರನ್ನು ತರಲು ಫ್ರಾಂಚೈಸಿ ಮುಂದಾಗಿತ್ತು ಎನ್ನಲಾಗಿದೆ.

 

ಅಂದಹಾಗೆ ವಿರಾಟ್ ಕೊಹ್ಲಿ ಅವರು ನಾಯಕತ್ವ ತ್ಯಜಿಸಿದ ನಂತರ, ಆರ್‌ಸಿಬಿ ತಂಡವು ತಮ್ಮ ಮುಂದಿನ ನಾಯಕನ ಹುಡುಕಾಟದಲ್ಲಿತ್ತು. ಕೊಹ್ಲಿ ನಂತರ ತಂಡದ ‘ಮುಂದಿನ ದೊಡ್ಡ ತಾರೆ’ಯಾಗಬಲ್ಲ ಮತ್ತು ತಂಡದ ‘ಬ್ರಾಂಡ್’ ಮೌಲ್ಯವನ್ನು ಹೆಚ್ಚಿಸಬಲ್ಲ ಆಟಗಾರನ ಅಗತ್ಯ ಆರ್‌ಸಿಬಿಗೆ ಇತ್ತು. “ವಿರಾಟ್ ಕೊಹ್ಲಿ ನಂತರ ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ಬ್ರಾಂಡ್ ಆಗಬಲ್ಲ ಆಟಗಾರ ಎಂದರೆ, ಅದು ಶುಭಮನ್ ಗಿಲ್” ಎಂದು ಜುಗ್ಲಾನ್ ಹೇಳಿದ್ದಾರೆ. ಪ್ರಸಾರಕರು ಮತ್ತು ಎಂಆರ್‌ಎಫ್‌ನಂತಹ ಬ್ರಾಂಡ್‌ಗಳು ಈಗಾಗಲೇ ಗಿಲ್ ಅವರ ಮೇಲೆ ಹೂಡಿಕೆ ಮಾಡಿದ್ದು, ಇದೇ ಅವಕಾಶವನ್ನು ಬಳಸಿಕೊಂಡು ಗಿಲ್ ಅವರನ್ನು ತಂಡಕ್ಕೆ ಸೆಳೆಯಲು ಆರ್‌ಸಿಬಿ ಪ್ರಯತ್ನಿಸಿತ್ತು ಎಂದು ವರದಿಯಾಗಿದೆ.