

Viral Video : ಯುವಕನೊಬ್ಬ ಹಸುವೊಂದಕ್ಕೆ ಚಿಕನ್ ಮೊಮೊಸ್ ತಿನ್ನಿಸಿದ್ದು, ಇದನ್ನು ಕಂಡು ಕೆರಳಿದ ಬಜರಂಗದಳ ಹೆಸರಿನ ಗುಂಪೊಂದು ಆತನನ್ನು ಥಳಿಸಿ, ಬೀದಿಯಲ್ಲಿ ಮೆರವಣಿಗೆ ನಡೆಸಿ, ಎಫ್‌ಐಆರ್ ದಾಖಲಾಗುವಂತೆ ಮಾಡಿದ ಘಟನೆ ನಡೆದಿದೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾದ ವಿಡಿಯೋ ಒಂದು ವೈರಲ್ ಆಗಿದೆ. ನಿಕ್ಕು ಪಂಡಿತ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ʻ28 ವರ್ಷದ ಯುವಕನೊಬ್ಬನನ್ನು ಐದಕ್ಕೂ ಹೆಚ್ಚು ಮಂದಿ ರಸ್ತೆಯಲ್ಲಿ ಕರೆದುಕೊಂಡು ಮೆರವಣಿಗೆ ಮಾಡುತ್ತಿರುವುದನ್ನು ಕಾಣಬಹುದು. ಜೊತಗೆ ಆತನ ಬಾಯಿಂದ ಜೈ ಶ್ರೀರಾಮ್, ಜೈ ಗೋ ಮಠ ಎಂದು ಹೇಳಿಸುತ್ತಿರುವುದು, ಹಿಗ್ಗಾಮುಗ್ಗ ಕುಕ್ಕಿ, ಎಳೆದಾಡಿ ಹೊಡೆದಿರುವುದು ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿರುವ ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಚಿತ್ರವಾಗಿ ಹಾಗೂ ವಿಕೃತಿಯಾಗಿ ವರ್ತಿಸುತ್ತಿರುವ ಆ ಗುಂಪಿನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಕಮೆಂಟ್ ಮೂಲಕ ಕಿಡಿಕಾರಿದ್ದಾರೆ.













