

Viral Video : ಗೂಡ್ಸ್ ರೈಲು ಕ್ರಾಸಿಂಗ್ ರಸ್ತೆಯಲ್ಲಿ ಕೆಟ್ಟು ನಿಂತಿದ್ದರಿಂದ ಎರಡು ಬದಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಕೆಟ್ಟು ನಿಂತ ರೈಲನ್ನು ರಿಪೇರಿ ಮಾಡಲು ಸುಮಾರು 5 ಗಂಟೆ ಸಮಯ ಹಿಡಿಯಬಹುದು ಎಂದು ರೈಲು ಅಧಿಕಾರಿಗಳು ತಿಳಿಸಿದ್ದರು. ಆದರೆ ಅಲ್ಲೇ ಇದ್ದ ಅಂಕಲ್ ಒಬ್ಬರು ಸೀದಾ ಬಂದು ಸುತ್ತಿಗೆ ಹಿಡಿದು 10 ನಿಮಿಷದಲ್ಲಿ ರೈಲನ್ನು ರಿಪೇರಿ ಮಾಡಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು, ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ ಗೂಡ್ಸ್ ರೈಲು ಕ್ರಾಸಿಂಗ್ ರಸ್ತೆಯಲ್ಲಿ ನಿಂತಿದ್ದು, ಎರಡೂ ಬದಿ ಟ್ರಾಫಿಕ್ ಜಾಮ್ ಉಂಟಾಗಿದೆ. ರೈಲಿನ ಒಂದು ಡಬ್ಬಿಯಲ್ಲಿ (wagon) ಹೊಗೆ ಕಾಣಿಸಿಕೊಂಡಿದ್ದರಿಂದ ಲೋಕೋಪೈಲಟ್ ಟ್ರೈನ್ ನಿಲ್ಲಿಸಿದ್ದರು. ಇದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾದ ಕಾರಣ ಕೂಡಲೇ ರೈಲ್ವೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರೈಲ್ವೆ ಇಲಾಖೆಯ ನುರಿತ ಇಂಜಿನೀಯರ್ ಮತ್ತು ಇತರೆ ಸಿಬ್ಬಂದಿ ಪರಿಶೀಲನೆ ನಡೆಸಿ ರಿಪೇರಿಗೆ ಸುಮಾರು 5 ಗಂಟೆಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ.
A post shared by Himanshu Rajput ( Video Editor ) (@memes.himmu)
5 ಗಂಟೆ ರೈಲು ನಿಂತುಕೊಂಡ್ರೆ ಕಾನ್ಪುರದ ಎಲ್ಲಾ ರಸ್ತೆಗಳಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗುವ ಆತಂಕ ಎದುರಾಗಿತ್ತು. ಈ ಸಂದರ್ಭದಲ್ಲಿ ಆಪತ್ಭಾಂದವನಾಗಿ ಬಂದ ವ್ಯಕ್ತಿಯೊಬ್ಬರು ಈ ಸಮಸ್ಯೆಯನ್ನು ಕೇವಲ 10 ನಿಮಿಷದಲ್ಲಿ ಪರಿಹರಿಸಿದ್ದಾರೆ. ಯಸ್, ಸ್ಥಳದಲ್ಲಿದ್ದ ಮನೋಜ್ ಶುಕ್ಲಾ ಎಂಬುವವ್ರು ರೈಲಿನಲ್ಲಾಗುತ್ತಿರುವ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ನಂತರ ಅಧಿಕಾರಿಗಳ ಬಳಿ ಬಂದ ಮನೋಜ್ ಶುಕ್ಲಾ,ಈ ಸಮಸ್ಯೆಯನ್ನು ನಾನು ಸರಿ ಮಾಡುವೆ ಎಂದು ಅವರ ಬಳಿಯಲ್ಲಿದ್ದ ಸುತ್ತಿಗೆ ತೆಗೆದುಕೊಂಡು ರೈಲಿನ ಕಳೆಗೆ ಹೋಗಿ 10 ನಿಮಿಷದ ನಂತರ ಹೊರಗೆ ಬಂದು ಸಮಸ್ಯೆ ಪರಿಹಾರವಾಗಿದೆ ಎಂದು ಹೇಳಿದ್ದಾರೆ. ನಂತರ ನುರಿತ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಮಸ್ಯೆ ಸರಿಯಾಗಿರೋದನ್ನು ಕಂಡು ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಿಕ್ಕಾಪಟ್ಟೆ ವೀವ್ಸ್ ಪಡೆದುಕೊಂಡಿದೆ.













