Home News Karnataka BJP: ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರಗೆ ಕೋಕ್? ಈ ನಾಯಕನ ಹೆಸರು ಫೈನಲ್?

Karnataka BJP: ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರಗೆ ಕೋಕ್? ಈ ನಾಯಕನ ಹೆಸರು ಫೈನಲ್?

Hindu neighbor gifts plot of land

Hindu neighbour gifts land to Muslim journalist

Karnataka BJP: ರಾಜ್ಯ ಬಿಜೆಪಿಯಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತಿವೆ. ಪಕ್ಷದಲ್ಲಿ ಮೇಜರ್ ಸರ್ಜರಿ ಮಾಡಲಾಗುತ್ತದೆ ಎಂದು ರಾಜ್ಯ ರಾಜಕೀಯವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅಲ್ಲದೆ ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಕೊಕ್ ನೀಡಲು ಹೈಕಮಾಂಡ್ ತೀರ್ಮಾನಿಸಿದ್ದು ಅಧ್ಯಕ್ಷರ ಪಟ್ಟಕ್ಕೆ ಈ ನಾಯಕನ ಹೆಸರನ್ನು ಫೈನಲ್ ಮಾಡಲಾಗಿದೆ ಎಂಬ ವಿಚಾರಗಳು ಕೇಳಿ ಬರುತ್ತಿದೆ.

ಬಿಜೆಪಿಯಲ್ಲಿ ಆಗಾಗ ಸಕ್ರಿಯವಾಗಿರುವ ತಟಸ್ಥ ಬಣ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೇರಿಸುವ ‌ನಿಟ್ಟಿನಲ್ಲಿ ತೀವ್ರ ಪ್ರಯತ್ನವನ್ನೂ ನಡೆಸಿತ್ತು. ಕೇಂದ್ರ ಸಚಿವ ಸ್ಥಾ‌ನದ ಜೊತೆಗೆ ಅಧ್ಯಕ್ಷ ಸ್ಥಾ‌ನ ಎಂದಾದರೆ ಒಪ್ಪಿಕೊಳ್ಳಬಹುದು ಎಂಬ ಮನಸ್ಥಿತಿಗೂ ಸೋಮಣ್ಣ ತಲುಪಿದ್ದರು. ಆದರೆ, ಅವರಿಗೆ ಕೇಂದ್ರ ಸಚಿವರಾಗಿಯೇ ಒಳ್ಳೆಯ ಕೆಲಸ ಮಾಡುವಂತೆ ಹೈಕಮಾಂಡ್ ಸೂಚಿಸಿದ ಕಾರಣ ಆ ಪ್ರಸ್ತಾಪ ಅಲ್ಲಿಗೆ ಕೊನೆಗೊಂಡಂತಾಗಿದೆ.

ಇನ್ನು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿದ್ದೇ ಆದರೆ, ಸ್ಥಾನಕ್ಕೆ ಬಿ.ವೈ.ರಾಘವೇಂದ್ರ ಅವರನ್ನು ನೇಮಿಸಿ, ಅಸಮಾಧಾನವನ್ನು ಶಮನಗೊಳಿಸಲು ಬಿಜೆಪಿ ಯತ್ನಿಸಬಹುದು ಎನ್ನಲಾಗುತ್ತಿದೆ. ಈ ಮೂಲಕ ಅಸಮಾಧಾನಕ್ಕೂ ಮದ್ದು ನೀಡಿ, ಯಡಿಯೂರಪ್ಪ ಕುಟುಂಬಕ್ಕೂ ಗೌರವ ನೀಡಲು, ಯಡಿಯೂರಪ್ಪ ಅವರನ್ನು ದ್ವೇಷಿಸದಂತೆ ಎಚ್ಚರಿಕೆಯ ಹೆಜ್ಜೆ ಇಡಲು ಹೈಕಮಾಂಡ್ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ಅರವಿಂದ್ ಬೆಲ್ಲದ್, ಜಗದೀಶ್ ಶೆಟ್ಟರ್ ಮತ್ತು ಮುರುಗೇಶ್ ನಿರಾಣಿ ಹೆಸರೂ ಕೇಳಿ ಬರುತ್ತಿದೆ. ಆದರೆ ಅವರನ್ನು ಸದ್ಯಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Tiger Death: ವ್ಯಾಘ್ರಗಳ ಸಾವು ಪ್ರಕರಣ: ಇಬ್ಬರ ಬಂಧನ, ವಿಚಾರಣೆ ವೇಳೆ ಸತ್ಯ ಬಯಲು