Home News Vijayapura: ಅಂತ್ಯಸಂಸ್ಕಾರಕ್ಕೆಂದು ಸ್ವಲ್ಪ ಜಾಗ ನೀಡಿದ್ದರೆ ಇಡೀ ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ದಾಖಲು

Vijayapura: ಅಂತ್ಯಸಂಸ್ಕಾರಕ್ಕೆಂದು ಸ್ವಲ್ಪ ಜಾಗ ನೀಡಿದ್ದರೆ ಇಡೀ ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ದಾಖಲು

Hindu neighbor gifts plot of land

Hindu neighbour gifts land to Muslim journalist

Vijayapura: ವಕ್ಫ್‌ ಮಂಡಳಿಯಿಂದ ರೈತರಿಗೆ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ರೈತರ ಪಹಣಿಯಲ್ಲಿ ವಕ್ಫ್‌ ಹೆಸರು ಉಲ್ಲೇಖ ಮಾಡಿರುವ ವಿಜಯಪುರ ಜಿಲ್ಲೆಯಲ್ಲಿ ರಹಸ್ಯವಾಗಿ ವಕ್ಫ್‌ ಹೆಸರಿನಲ್ಲಿ ಆಸ್ತಿ ಕಬಳಿಕೆ ನಡೆಯುತ್ತಿದೆಯಾ ಎಂಬ ಅನುಮಾನ ಇದೀಗ ಬಲವಾಗಿ ಮೂಡಿದೆ.

ಅಂತ್ಯಸಂಸ್ಕಾರಕ್ಕೆಂದು ಮುಸ್ಲಿಂ ಕುಟುಂಬದವರಿಗೆ ತುಸು ಜಾಗ ನೀಡಿದ್ದ ಹಿಂದೂ ಕುಟುಂಬದ ಇಡೀ ಆಸ್ತಿಯನ್ನು ವಕ್ಫ್‌ ಗೆ ಸೇರಿದ್ದು ಎಂದು ದಾಖಲೆಗಳಲ್ಲಿ ಉಲ್ಲೇಖ ಮಾಡಿರುವ ವಿಚಾರ ಬೆಳಕಿಗೆ ಬಂದಿರುವ ಕುರಿತು ವರದಿಯಾಗಿದೆ.

ರೈತನ ಪಹಣಿ ವಕ್ಫ್‌ ಆಸ್ತಿ 2019 ರಲ್ಲೇ ನಮೂದಿಸಿರುವುದು ತಿಳಿದು ಬಂದಿದೆ. ವಕ್ಫ್‌ ವಿವಾದದ ಬಳಿಕ ಪಹಣಿ ಪತ್ರ ಚೆಕ್‌ ಮಾಡಿದಾಗ ಈ ವಿಚಾರ ತಿಳಿದು ಬಂದಿದೆ. ವಿಜಯಪುರ ಜಿಲ್ಲೆಯ ಹೊನ್ನುಟಗಿ ಗ್ರಾಮದ ಸರ್ವೆ ನಮಬರ್‌ 271 ರ 13 ಎಕರೆ 8 ಗುಂಟೆ ಜಾಗಕ್ಕೆ ವಕ್ಫ್‌ಬೋರ್ಡ್‌ ಎಂದು ನಮೂದು ಮಾಡಲಾಗಿದೆ.

ಹೊನ್ನುಟಗಿ ಗ್ರಾಮದ ಸುರೇಶ್‌ ತೆರದಾಳ್‌ ಹಾಗೂ ಕುಟುಂಬದವರಿಗೆ ಸೇರಿದ ಜಮೀನು ವಿವಾದಕ್ಕೀಡಾಗಿದೆ. ಈ ಕುಟುಂಬದವರು ಮುಸ್ಲಿಂ ಸಮುದಾಯದ ಜನರಿಗೆ ಅಂತ್ಯಸಂಸ್ಕಾರಕ್ಕೆಂದು ತಮ್ಮ ಜಮೀನಿನಲ್ಲಿ ತುಸು ಜಾಗ ನೀಡಿದ್ದರು. ಆದರೆ ದಾಖಲೆಯಲ್ಲಿ ನಮೂದು ಮಾಡಿಲ್ಲ. ಬಳಕೆಯ ಉದ್ದೇಶಕ್ಕೆಂದು ಭೂಮಿ ನೀಡಿದ್ದರು.

ಆದರೆ ಬಳಕೆಗೆಂದು ನೀಡಿದ್ದ ಜಾಗವನ್ನೇ ವಕ್ಫ್‌ ಆಸ್ತಿ ಎಂದು ನಮೂದು ಮಾಡಿದ್ದಲ್ಲದೇ, ಸುರೇಶ್‌ ತೆರದಾಳ್‌ ಅವರ 13.8 ಎಕರೆಯನ್ನು ವಕ್ಫ್‌ ಆಸ್ತಿ ಎಂದು ಉಲ್ಲೇಖ ಮಾಡಲಾಗಿದೆ.