Home latest ವರುಣನ ಆರ್ಭಟ:ವಿಜಯನಗರ ಜಿಲ್ಲೆಯ ಮೂರು ತಾಲೂಕುಗಳ ಶಾಲೆಗಳಿಗೆ ರಜೆ

ವರುಣನ ಆರ್ಭಟ:ವಿಜಯನಗರ ಜಿಲ್ಲೆಯ ಮೂರು ತಾಲೂಕುಗಳ ಶಾಲೆಗಳಿಗೆ ರಜೆ

Hindu neighbor gifts plot of land

Hindu neighbour gifts land to Muslim journalist

ವಿಜಯನಗರ ಹೊಸಪೇಟೆ ಮೇ೧೯: ಸದಾ ಊರಿಬಿಸಿಲೂರು ಎಂದು ಖ್ಯಾತವಾದ ವಿಜಯನಗರ ಜಿಲ್ಲೆಯಲ್ಲಿ ಮಲೆನಾಡ ಸಂಭ್ರಮ ಮುಂದುವರೆದಿದ್ದು ನಾಲ್ಕನೇ ದಿನವಾದ ಗುರುವಾರವೂ ಹಗಲು ರಾತ್ರಿ ಪೂರ್ತಿ ಮಳೆ ಸುರಿದಿದೆ.


ಆಗಾಗ್ಯ ಸ್ವಲ್ಪ ಸಮಯ ವಿರಾಮ ನೀಡಿದಂತೆ ಕಂಡರೂ ರಾತ್ರಿ ೯ ಗಂಟೆಯಿಂದ ಆರಂಭವಾದ ಮಳೆ ಬೆಳಗಿನ ವರೆಗೂ ಸುರಿದಿದೆ. ಇಂದು ಈಗಿನವರೆಗೂ ಕೊನೆಗೊಂಡಲ್ಲವಾಗಿದ್ದ ಜಿಟಿ ಜಿಟಿ ಮಳೆ ಮುಂದುವರೆದಿದೆ. ಬಹುತೇಕ ಮಲೆನಾಡು ವಾತಾವಣವನ್ನು ನೆನಪಿಸುತ್ತಿದೆ.


ರಾತ್ರಿ ಎಲ್ಲಾ ನಿರಂತರವಾಗಿ ಸುರಿದ ಮಳೆ ಐತಿಹಾಸಿಕ ಹಂಪಿಯ ಪರಿಸರದ ಎದುರು ಬಸವಣ್ಣ ಮಂಟಪ, ಬಡವಿ ಲಿಂಗ, ಕೃಷ್ಣದೇವಸ್ಥಾನ, ಆನೆಸಾಲು ಒಂಟೆ ಸಾಲು, ಲೋಟಸ್ ಮಹಲ್, ವಿರೂಪಾಕ್ಷೇಶ್ವರ ದೇವಾಲಯದ ಒಳಾಂಗಣ ಪ್ರಾಂಗಣ ಸೇರಿದಂತೆ ಎಲ್ಲಡೆ ನೀರು ಬಂದು ಸ್ಮಾರಕಗಳು ಜಲಾವೃತವಾಗಿದ್ದು ಬಹುತೇಕ ಸ್ಮಾರಕಗಳು ಪ್ರತಿಬಿಂಬದಂತೆ ಕಾಣಲಾರಂಭಿಸಿದ್ದು ಒಟ್ಟಾರೆ ಬಿಸಿಲೂರಲ್ಲಿ ಬಿಸಿಲೂ ಕಾಲದಲ್ಲಿ ಮಲೆನಾಡ ವಾತಾವರಣ ನಿರ್ಮಾಣಮಾಗಿದ್ದು ಒಂದು ರೀತಿಯ ಸಂಭ್ರಮವೂ ಆಗಿದೆ.


ಹಾನಿಯ ವಿವರ
ಒಟ್ಟು ವಿಜಯನಗರ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದೆ. ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ ಮಾಹಿತಿ ನೀಡಿದ್ದ ಕಳೆದ ರಾತ್ರಿ ಸೇರಿದಂತೆ ಕಳೆದೆರಡು ತಿಂಗಳಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಮಳೆಯಾಗಿದ್ದು ನಿನ್ನೆ ರಾತ್ರಿಯೂ ಸೇರಿದಂತೆ ಒಟ್ಟು ೨೯೫ಮನೆಗಳು ಹಾಗೂ ೮ ಗುಡಿಸಲುಗಳು ಹಾನಿಯಾದರೆ, ಕೃಷಿಬೆಳೆಗಳು ನಿನ್ನೆ ಒಂದೆ ದಿನ ಅಂದಾಜು ೯೨ ಹೆಕ್ಟರ್ ಆದರೆ ಕಳೆದೆರಡು ತಿಂಗಳಲ್ಲಿ ಅಂದಾಜು ೫೪೨.೪೬ ಹೆಕ್ಟರ್ ಬೆಳೆ ಹಾನಿ ಯಾಗಿದ್ದು ಕಳೆದೆರಡು ತಿಂಗಳಲ್ಲಿ ಅಂದಾಜು ೧೧೮.೮೪ ಹೆಕ್ಟರ್ ತೋಟಗಾರಿಕೆ ಬೆಳೆಗಳು ನಾಶವಾಗಿದೆ.ಈ ವರೆಗೂ ಮಾನವ ಹಾನಿ ೪, ಪ್ರಾಣಿ ಹಾನಿ ೪೧ ಮಳೆಯಿಂದಾಗಿ ಆಗಿದೆ ಎಂದು ತಿಳಿಸಿದ್ದಾರೆ.


ಮೂಂದುವರೆದ ಮಳೆಯ ಹಿನ್ನೆಲೆಯಲ್ಲಿ ರಾತ್ರಿಯಲ್ಲಾ ಎಲ್ಲಡೆಗಳಲ್ಲಿಯೂ ಮಳೆಯಾದ ಕಾರಣ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ಹರಪನಹಳ್ಳಿ, ಹಡಗಲಿ ಹಾಗೂ ಕೂಡ್ಲಗಿ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.


ಈ ಮಧ್ಯ ತುಂಗಭದ್ರಾ ಜಲಾಶಯಕ್ಕೂ ೧ ಟಿಎಂಸಿ ನೀರು ರು ಕಳೆದ ೨೪ ಗಂಟೆಯಲ್ಲಿ ಹರಿದು ಬಂದಿದೆ ಇಂದು ೩೬ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ.