Home News Elephant: ಆನೆಯನ್ನು ಬಿಟ್ಟು ಹೊರಟ ಮಾಲಿಕ – ‘ಬೇಡ ಒಡೆಯ, ಬಿಟ್ಟುಹೋಗದಿರು’ ಎಂದು ಅಂಗಲಾಚಿದ ಗಜರಾಜ...

Elephant: ಆನೆಯನ್ನು ಬಿಟ್ಟು ಹೊರಟ ಮಾಲಿಕ – ‘ಬೇಡ ಒಡೆಯ, ಬಿಟ್ಟುಹೋಗದಿರು’ ಎಂದು ಅಂಗಲಾಚಿದ ಗಜರಾಜ !! ವೈರಲ್ ಆಯ್ತು ಮನಮಿಡಿಯೋ ವಿಡಿಯೋ

Elephant

Hindu neighbor gifts plot of land

Hindu neighbour gifts land to Muslim journalist

Elephant: ಕೆಲವು ಪ್ರಾಣಿಗಳ ಜೊತೆಗೆ ಮನುಷ್ಯ ಅನ್ಯೋನ್ಯ ವಾಗಿ ಇರುತ್ತಾನೆ. ಇತ್ತೀಚೆಗೆ ಮನುಷ್ಯ ಹಾಗೂ ಪ್ರಾಣಿಗಳ ಒಡನಾಟದ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅಂತೆಯೇ ಇಲ್ಲೊಂದು ಕಡೆ ಮನುಷ್ಯ ಹಾಗೂ ಆನೆಯ ನಡುವಿನ ಮಮತೆಯ ವೀಡಿಯೋವೊಂದು ಇದೀಗ ವೈರಲ್‌ ಆಗಿದೆ.

ಹೌದು, ಆನೆಯೊಂದು (Elephant) ತನ್ನ ಮಾಲೀಕ ತನ್ನ ಬಿಟ್ಟು ಹೋಗದಂತೆ ತಡೆಯುತ್ತಿರುವ ವೀಡಿಯೋ ಇದಾಗಿದೆ. ಒಂದು ನಿಮಿಷ 48 ಸೆಕೆಂಡ್‌ಗಳ ಈ ವಿಡಿಯೋ ದಲ್ಲಿ ಆನೆ ತನ್ನನ್ನು ನೋಡಿಕೊಳ್ಳುವನನ್ನು ಬಿಟ್ಟು ಹೋಗುವುದಕ್ಕೆ ಬಿಡುತ್ತಿಲ್ಲ ಎಂದು ಬರೆದು ಈ ವೀಡಿಯೋವನ್ನು ಅನಂತ್ ರೂಪನಗುಡಿ ಪೋಸ್ಟ್ ಮಾಡಿದ್ದಾರೆ.

ಮೂಲತಃ ರಸ್ತೆಯಲ್ಲಿ ಈ ವೀಡಿಯೋವನ್ನು ಸೆರೆ ಹಿಡಿಯಲಾಗಿದ್ದು, ಆನೆ ಹಾಗೂ ಆನೆಯನ್ನು ನೋಡಿಕೊಳ್ಳುವವ ಹಾಗೂ ಮತ್ತೊರ್ವ ಇದ್ದಾರೆ, ಜೊತೆಗೆ ಒಂದು ಮೊಪೆಡ್ ರೀತಿಯ ಗಾಡಿ ಇದ್ದು, ಓರ್ವ ಈ ಗಾಡಿಯನ್ನು ಸ್ಟಾರ್ಟ್‌ ಮಾಡಿದ್ದರೆ. ಆನೆ ಮಾಲೀಕ ಹಿಂಬದಿ ಸವಾರನಾಗಿ ಗಾಡಿ ಮೇಲೆ ಕೂರಲು ನೋಡುತ್ತಾನೆ. ಆದರೆ ಅಲ್ಲೇ ಇದ್ದ ಆನೆ ಏನು ಮಾಡಿದರು ಮಾಲೀಕ ತನ್ನನ್ನು ಬಿಟ್ಟು ಹೋಗುವುದಕ್ಕೆ ಒಪ್ಪುತ್ತಿಲ್ಲ, ಗಾಡಿ ಮೇಲೆ ಕೂತಿದ್ದ ಆತನನ್ನು ಸೊಂಡಿಲಿನಿಂದ ಎಳೆದು ಕೆಳಗಿಳಿಸಿದ ಆನೆ ಬಳಿಕ ಆತನನ್ನು ತನ್ನ ಬಾಲದಲ್ಲಿ ಸುತ್ತಿ ಹಿಡಿದು ಎಳೆದುಕೊಂಡು ಹೋಗುತ್ತದೆ. ಆದರೂ ಮತ್ತೆ ಆನೆಯಿಂದ ತಪ್ಪಿಸಿಕೊಂಡು ಬರುವ ಮಾಲೀಕ ಮತ್ತೆ ಗಾಡಿ ಮೇಲೆ ಕೂರಲು ಯತ್ನಿಸಿದ್ದು, ಈ ವೇಳೆಯೂ ಆನೆ ಮಾತ್ರ ಆತನನ್ನು ಗಾಡಿ ಏರುವುದಕ್ಕೆ ಏನು ಮಾಡಿದರು ಬಿಡುವುದೇ ಇಲ್ಲ.

ಈ ವೀಡಿಯೋ ನೋಡಿದ ಅನೇಕರು ಇವರಿಬ್ಬರ ಒಡನಾಡ ಬಹಳ ಮಮತೆಯಿಂದ ತುಂಬಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಪ್ರಾಣಿಗಳು ಸ್ವಲ್ಪ ಪ್ರೀತಿ ತೋರಿದರೆ ತನ್ನ ಪ್ರೀತಿಸುವವನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುತ್ತವೆ ಎಂಬುದನ್ನು ಈ ವೀಡಿಯೋ ಸಾಬೀತುಪಡಿಸಿದೆ. ಅಲ್ಲದೇ ಪ್ರಾಣಿಗಳು ಯಜಮಾನನ ಜೀವ ಕಾಪಾಡಿರುವ ನಿದರ್ಶನಗಳು ಎಷ್ಟೋ ಇವೆ ಎಂದು ಕಾಮೆಂಟ್ ಮಾಡಿದ್ದಾರೆ.

 

https://x.com/Ananth_IRAS/status/1707028304354820247?s=20