Home Crime Alahabad Court: ಅತ್ಯಾಚಾರಕ್ಕೆ ಸಂತ್ರಸ್ತೆಯೇ ಕಾರಣ – ಹೈಕೋರ್ಟ್ ಅಚ್ಚರಿ ತೀರ್ಪು

Alahabad Court: ಅತ್ಯಾಚಾರಕ್ಕೆ ಸಂತ್ರಸ್ತೆಯೇ ಕಾರಣ – ಹೈಕೋರ್ಟ್ ಅಚ್ಚರಿ ತೀರ್ಪು

Hindu neighbor gifts plot of land

Hindu neighbour gifts land to Muslim journalist

Alahabad Court: ಅಲಹಾಬಾದ್ ಹೈಕೋರ್ಟು ಇತ್ತೀಚಿಗೆ ತನ್ನ ಕೆಲವು ವಿಶೇಷ ತೀರ್ಪುಗಳ ಮುಖಾಂತರ ಸುದ್ದಿಯಾಗುತ್ತಿದೆ. ಇತ್ತೀಚಿಗಷ್ಟೇ ಮಹಿಳೆಯರ ಸ್ಥನ ಮುಟ್ಟುವುದು ಪ್ಯಾಂಟ್ ಎಳೆಯುವುದು ಅತ್ಯಾಚಾರ ಆಗುವುದಿಲ್ಲ ಎಂದು ಇದೇ ಕೋರ್ಟ್ ಆದೇಶಿಸಿತ್ತು. ಇದೀಗ ಈ ಬೆನ್ನಲ್ಲೇ ಯುವತಿಯೊಬ್ಬರ ಮೇಲೆ ನಡೆದ ಅತ್ಯಾಚಾರಕ್ಕೆ ಅವರೇ ಕಾರಣ ಎಂಬಂತೆ ಅಲಹಾಬಾದ್ ಹೈಕೋರ್ಟ್ ಅಘಾತಕಾರಿ ತೀರ್ಪೊಂದನ್ನು ನೀಡಿದೆ.

ಹೌದು, 2024 ರಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯ ಬಗ್ಗೆ ”ಮಹಿಳೆಯೆ ಸಮಸ್ಯೆಯನ್ನು ಮೈಗೆಳೆದುಕೊಂಡಿದ್ದಾರೆ” ಎಂದು ಎಂದು ಹೇಳಿದ್ದು, ಅವರ ವಿರುದ್ಧ ನಡೆದ ಅಪರಾಧಕ್ಕೆ ಅವರೇ ಕಾರಣರಾಗಿದ್ದಾರೆ ಎಂದು ಆರೋಪಿಗೆ ಜಾಮೀನು ನೀಡುವಾಗ ತೀರ್ಪು ನೀಡಿದೆ.

ಏನಿದು ಪ್ರಕರಣ?
ಸಂತ್ರಸ್ತೆಯು ತನ್ನ ಮೂವರು ಮಹಿಳಾ ಸ್ನೇಹಿತರೊಂದಿಗೆ ದೆಹಲಿಯಲ್ಲಿನ ಬಾರ್​ವೊಂದಕ್ಕೆ ಹೋಗಿ ಅಲ್ಲಿ ಮದ್ಯ ಸೇವಿಸಿದ್ದರು. ಬೆಳಗಿನ ಜಾವ 3 ಗಂಟೆಯವರೆಗೆ ಅತಿಯಾದ ಮದ್ಯ ಸೇವನೆ ಮಾಡಿದ್ದರಿಂದ ಅಲ್ಲಿಯೆ ಇರಬೇಕಾಯಿತು ಎಂದು ಸಂತ್ರಸ್ತೆ ಹೇಳಿದ್ದಾಳೆ ಎಂದು ವರದಿಯಾಗಿತ್ತು. ಇವರ ಬಳಿ ಇದ್ದ ಆರೋಪಿಯು ಮನೆಗೆ ಹೋಗಲು ಆಕೆಯನ್ನು ಒತ್ತಾಯಿಸಿದ್ದಾನೆ.

ಬೆಳಗಿನ ಜಾವ ಕಾರಣದಿಂದ ಆರೋಪಿ ಜತೆ ಮನೆಗೆ ಹೋಗಲು ವಿಶ್ರಾಂತಿಗೆ ಹೋಗಲು ಒಪ್ಪಿದ್ದಾಳೆ. ಆರೋಪಿಯು ಪ್ರಯಾಣದ ಸಮಯದಲ್ಲಿ ಅನುಚಿತವಾಗಿ ಸ್ಪರ್ಶಿಸಿ ನೋಯ್ಡಾದಲ್ಲಿರುವ ತನ್ನ ಸ್ವಂತ ಮನೆಗೆ ಬದಲಾಗಿ ಗುರಗಾಂವ್‌ನಲ್ಲಿರುವ ತನ್ನ ಸಂಬಂಧಿಕರ ಫ್ಲಾಟ್‌ಗೆ ಕರೆದೊಯ್ದಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ಅಲ್ಲಿ ಆರೋಪಿಯು ತನ್ನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಹೀಗಾಗಿ ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಇದ್ದ ಪೀಠ , ‘ಸಂತ್ರಸ್ತಳ ಆರೋಪ ನಿಜವೆಂದು ಒಪ್ಪಿಕೊಂಡರೂ ಸಹ, ಆಕೆಯೇ ತೊಂದರೆಗೆ ಆಹ್ವಾನ ನೀಡಿದ್ದಾಳೆ ಮತ್ತು ಅದಕ್ಕೆ ಕಾರಣಳಾಗಿದ್ದಾಳೆ ಎಂದು ತೀರ್ಮಾನಿಸಬಹುದು ಎಂದು ಈ ನ್ಯಾಯಾಲಯ ಅಭಿಪ್ರಾಯಪಟ್ಟಿದೆ’.
ಸಂತ್ರಸ್ತೆಯೂ ತನ್ನ ಹೇಳಿಕೆಯಲ್ಲಿ ಇದೇ ರೀತಿಯ ನಿಲುವನ್ನು ತೆಗೆದುಕೊಂಡಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ವೈದ್ಯರು ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಅಭಿಪ್ರಾಯವನ್ನು ನೀಡಿಲ್ಲ’ ಎಂದು ಹೇಳಿದ್ದಾರೆ.