Home News ಮೃತ ಬಾಲಕ ಸುಮಂತ್ ಮನೆಗೆ ವಿ.ಹಿಂ.ಪ ಪ್ರಮುಖರ ಭೇಟಿ

ಮೃತ ಬಾಲಕ ಸುಮಂತ್ ಮನೆಗೆ ವಿ.ಹಿಂ.ಪ ಪ್ರಮುಖರ ಭೇಟಿ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ, ಗೇರುಕಟ್ಟೆ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ ಅವರ ಮನೆಗೆ ಮಂಗಳವಾರ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆ ಹಾಗೂ ಬೆಳ್ತಂಗಡಿ ಪ್ರಖಂಡದ ಪ್ರಮುಖರು ನಾಳ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್ ಮತ್ತು ಮನೆಯವರಿಗೆ ಸಾಂತ್ವನ ಹೇಳಿ, ಯಾವುದೇ ಸಮಯದಲ್ಲೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಅಲ್ಲದೆ ವಿಶ್ವ ಹಿಂದೂ ಪರಿಷದ್, ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಸುಮಂತ್ ನ ಅಸಹಜ ಸಾವು ಕುರಿತು ಸಮಗ್ರ ತನಿಖೆ ನಡೆಸಿ, ನ್ಯಾಯ ದೊರಕುವಂತೆ ಒತ್ತಾಯಿಸಿದ್ದೇವೆ ಎಂದು ಭೇಟಿ ನೀಡಿದ ಸಂದರ್ಭಪ್ರಮುಖರು ತಿಳಿಸಿದರು.

ವಿ.ಹಿ.ಪ. ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ವಿ.ಹಿಂ.ಪ ಜಿಲ್ಲಾ ಸಹಸಂಯೋಜಕ್ ದಿನೇಶ್ ಚಾರ್ಮಾಡಿ, ಜಿಲ್ಲಾ ಗೋ ರಕ್ಷಾ ಪ್ರಮುಖ್ ಗಣೇಶ್ ಕಳೆಂಜ, ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ ರಮೇಶ್ ಧರ್ಮಸ್ಥಳ, ಸಹ ಕಾರ್ಯದರ್ಶಿ ಸತೀಶ್ ಮರಕಡ, ಬಜರಂಗದಳ ಸಂಯೋಜಕ ಪ್ರಭಾಕರ ಮುದಲಡ್ಕ, ಸಹ ಸಂಯೋಜಕ ಮೋಹನ್ ಕಂಚೇಲು ನಡ, ಪ್ರಮುಖರಾದ ಗಣೇಶ್ ರಾವ್ ಗೇರುಕಟ್ಟೆ, ಪುರಂದರ ಗೇರುಕಟ್ಟೆ, ಯೋಗೀಶ್ ಅಡ್ಡಕೊಡಂಗೆ, ಭುವನೇಶ್ ಗೇರುಕಟ್ಟೆ ಮೊದಲಾದವರು ಇದ್ದರು.