Home Latest Health Updates Kannada Vastu Tips : ಮನೆಯ ಈ ದಿಕ್ಕಿಗೆ ಕಾಲು ಹಾಕಿ ಮಲಗಬೇಡಿ |

Vastu Tips : ಮನೆಯ ಈ ದಿಕ್ಕಿಗೆ ಕಾಲು ಹಾಕಿ ಮಲಗಬೇಡಿ |

Hindu neighbor gifts plot of land

Hindu neighbour gifts land to Muslim journalist

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿಕ್ಕಿಗೂ ತನ್ನದೇ ಆದ ವಿಶೇಷ ಮಹತ್ವವಿದೆ. ಜ್ಯೋತಿಷ್ಯದ ಪ್ರಕಾರ, ನೀವು ಯಾವುದೇ ಕಾರ್ಯ ಚಟುವಟಿಕೆ ಮಾಡುವ ಮುಂಚೆ ನೀವು ದಿಕ್ಕನ್ನು ನೋಡಿಕೊಳ್ಳದಿದ್ದರೆ ಹಲವಾರು ಸಮಸ್ಯೆಗಳು ನಿಮ್ಮನ್ನು ಸುತ್ತುವರೆಯುತ್ತವೆ. ಹೌದು ಮುಖ್ಯವಾಗಿ ನಿಮ್ಮ ಪಾದಗಳನ್ನು ಯಾವ ದಿಕ್ಕಿಗೆ ಇಟ್ಟು ಮಲಗಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಮೂಲಕ ತಿಳಿಸಲಾಗಿದೆ.

ಜನರು ತಮ್ಮ ಪಾದಗಳನ್ನು ತಪ್ಪು ದಿಕ್ಕಿನಲ್ಲಿ ಇಟ್ಟು ಮಲಗುತ್ತಾರೆ. ಈ ಕುರಿತಂತೆ ನೀವು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಮತ್ತು ನಷ್ಟಗಳನ್ನು ಎದುರಿಸುವುದನ್ನು ತಪ್ಪಿಸಿಕೊಳ್ಳಲು ಈ ಕೆಳಗಿನ ಸಲಹೆಯನ್ನು ಪಾಲಿಸುವುದು ಸೂಕ್ತ.

  • ಪಾದಗಳನ್ನು ಆಗ್ನೇಯ ದಿಕ್ಕಿಗೆ ಮಾಡಿ ಮಲಗಿದರೆ, ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. ಅಲ್ಲದೆ, ತಪ್ಪು ದಿಕ್ಕಿನಲ್ಲಿ ಕಾಲುಗಳನ್ನು ಮಾಡಿ ಮಲಗುವುದು ಕೆಟ್ಟ ಕನಸುಗಳಿಗೆ ಕಾರಣವಾಗುತ್ತದೆ, ಕೆಟ್ಟ ಆಲೋಚನೆಗಳು ಮತ್ತು ನಿರಾಶೆ ಮನಸ್ಸಿನಲ್ಲಿ ಉಂಟಾಗುತ್ತದೆ.
  • ಯಮದೂತ, ಯಮ ಮತ್ತು ದುಷ್ಟರು ದಕ್ಷಿಣ ದಿಕ್ಕಿನಲ್ಲಿ ನೆಲೆಸಿದ್ದಾರೆ. ಹೀಗಾಗಿ, ತಪ್ಪಾಗಿಯೂ ಮಲಗುವಾಗ ಈ ದಿಕ್ಕಿನಲ್ಲಿ ಹೆಜ್ಜೆ ಇಡಬಾರದು. ಅದಲ್ಲದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ಕಾಲು ಇಟ್ಟು ಮಲಗುವುದು ತಪ್ಪು ಎಂದು ಸೂಚಿಸಲಾಗಿದೆ.
  • ದಕ್ಷಿಣ ದಿಕ್ಕಿಗೆ ಕಾಲಿಟ್ಟು ಮಲಗುವುದು ತಪ್ಪು. ಏಕೆಂದರೆ ಈ ದಿಕ್ಕನ್ನು ಮೃತದೇಹವನ್ನು ಇಡಲು ಬಳಸಲಾಗುತ್ತದೆ. ಅಲ್ಲದೆ, ಈ ದಿಕ್ಕಿಗೆ ಪಾದಗಳನ್ನು ಮಾಡಿ ಮಲಗುವುದರಿಂದ ನಿಮ್ಮ ದೇಹದಿಂದ ಎಲ್ಲಾ ಶಕ್ತಿಯು ಹೊರಬರುತ್ತದೆ. ಅದಕ್ಕೇ ಅಪ್ಪಿತಪ್ಪಿಯೂ ಇಂತಹ ತಪ್ಪನ್ನು ಮಾಡಬೇಡಿ.
  • ಪೂರ್ವ ದಿಕ್ಕಿಗೆ ಪಾದಗಳನ್ನು ಇಟ್ಟು ಮಲಗಬಾರದು. ಸೂರ್ಯನ ಶಕ್ತಿಯು ಪೂರ್ವದಲ್ಲಿ ಪ್ರಭಾವ ಬೀರುವುದರಿಂದ ಮತ್ತು ಈ ದಿಕ್ಕಿನಲ್ಲಿ ಪಾದಗಳನ್ನು ಇಟ್ಟು ಮಲಗುವುದು ಅಶುಭವೆಂದು ಪರಿಗಣಿಸಲಾಗಿದೆ.

ಈ ಮೇಲಿನಂತೆ ಕೆಲವು ದಿಕ್ಕಿಗೆ ನಿಮ್ಮ ಪಾದಗಳನ್ನು ಚಾಚಿ ಮಲವುದು ಸೂಕ್ತವಲ್ಲ ಇದರಿಂದಾಗಿ ಹಲವಾರು ಸಮಸ್ಯೆ ಎದುರಾಗುತ್ತದೆ ಎಂದು ತಿಳಿಸಲಾಗಿದೆ.