Home National Uttar Pradesh: ರಾತ್ರೋರಾತ್ರಿ ವಿದ್ಯಾರ್ಥಿಗೆ ಅಶ್ಲೀಲ ಮೆಸೇಜ್ ಮಾಡಿದ ಶಿಕ್ಷಕಿ – ಮರುದಿನ ನಡೆಯಿತು ನಡೆಯಬಾರದ್ದು...

Uttar Pradesh: ರಾತ್ರೋರಾತ್ರಿ ವಿದ್ಯಾರ್ಥಿಗೆ ಅಶ್ಲೀಲ ಮೆಸೇಜ್ ಮಾಡಿದ ಶಿಕ್ಷಕಿ – ಮರುದಿನ ನಡೆಯಿತು ನಡೆಯಬಾರದ್ದು !!

Uttar Pradesh

Hindu neighbor gifts plot of land

Hindu neighbour gifts land to Muslim journalist

Uttar Pradesh: ಶಿಕ್ಷಕಿ ರಾತ್ರೋರಾತ್ರಿ ವಿದ್ಯಾರ್ಥಿಗೆ ಅಶ್ಲೀಲ ಮೆಸೇಜ್ ಮಾಡಿ ತನ್ನೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾಗುವಂತೆ ಒತ್ತಾಯಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ. ವಿದ್ಯಾರ್ಥಿಯನ್ನು ಉನ್ನಾವೋ ಮೂಲದವರು ಎಂದು ಹೇಳಲಾಗಿದೆ. ಈತ ಕಾನ್ಪುರದ ಕಂಟೋನ್ಮೆಂಟ್‌ ಪ್ರದೇಶದ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾನೆ.

ವಿದ್ಯಾರ್ಥಿ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ಪೊಲೀಸ್‌ ಠಾಣೆಗೆ ತೆರಳಿ ದೂರು ದಾಲಿಸಿದ್ದಾರೆ.
ಬಾಲಕನಿಗೆ ಶಿಕ್ಷಕಿ ನಡುರಾತ್ರಿಯ ವೇಳೆ ಅಶ್ಲೀಲ ಮೆಸೇಜ್ ಕಳಿಸಿದ್ದಲ್ಲದೆ ಶಿಕ್ಷಕಿಯ ಪತಿ ಮತ್ತು ಸಹೋದರ ಕೂಡ ಇದೇ ಶಾಲೆಯಲ್ಲಿ ನಿಯೋಜನೆಗೊಂಡಿದ್ದು, ಮೂವರೂ ಸೇರಿ ವಿದ್ಯಾರ್ಥಿಯನ್ನು ಬೇರೆ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ ಮಾಡುತ್ತಿದ್ದರು ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.

ವಿದ್ಯಾರ್ಥಿಯ ತಂದೆ ಶಿಕ್ಷಕಿಗೆ ಈ ಕುರಿತಾಗಿ ಫೋನ್‌ ಮಾಡಿ ಕೂಡ ವಿಚಾರಿಸಿದ್ದಾರೆ. ಈ ವೇಳೆ ಶಿಕ್ಷಕಿ ಆಗಿದ್ದೆಲ್ಲವನ್ನೂ ಒಪ್ಪಿಕೊಂಡಿದ್ದಾರೆ. ನಂತರ ಈ ವಿಷಯವನ್ನು ಆಕೆಯ ಕುಟುಂಬದ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಲಾಗಿದೆ. ಶಿಕ್ಷಕಿಯ ಪತಿ ಮತ್ತು ಆಕೆಯ ಸಹೋದರ ಕೂಡ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ ನಮ್ಮ ಕುಟುಂಬಕ್ಕೆ ಹಾನಿ ಮಾಡುವ ಆತಂಕ ಎದುರಾಗಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಯ ತಂದೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಹೊರಬೀಳುವ ಸತ್ಯಾಸತ್ಯತೆಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ: New rule for husbands: ಗಂಡಂದಿರೆ ಬಂತು ನಿಮಗೆ ಹೊಸ ರೂಲ್ಸ್- ನೀವಿನ್ನು ಇದನ್ನು ಮಾಡ್ಬೇಕಂದ್ರೆ ಬೇಕೇಬೇಕು ಹೆಂಡತಿಯ ಪರ್ಮಿಷನ್