Home News Sameer MD: ಸಮೀರ್ ‘ಪ್ರಭಾವಿ ವ್ಯಕ್ತಿ’ ಬಗ್ಗೆ ವಿಡಿಯೋ ಮಾಡಿದ್ದಾನೆಂದು ಅರೆಸ್ಟ್ ಮಾಡಲು ಇಷ್ಟು ಅರ್ಜೆಂಟಾ?...

Sameer MD: ಸಮೀರ್ ‘ಪ್ರಭಾವಿ ವ್ಯಕ್ತಿ’ ಬಗ್ಗೆ ವಿಡಿಯೋ ಮಾಡಿದ್ದಾನೆಂದು ಅರೆಸ್ಟ್ ಮಾಡಲು ಇಷ್ಟು ಅರ್ಜೆಂಟಾ? ಪೊಲೀಸರ ಚಳಿ ಬಿಡಿಸಿದ ಜಡ್ಜ್

Hindu neighbor gifts plot of land

Hindu neighbour gifts land to Muslim journalist

Sameer MD: ಸುಮಾರು ಹದಿಮೂರು ವರ್ಷಗಳ ಹಿಂದೆ ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೊನಿಂದಾಗಿ ಇದೀಗ ಬೃಹತ್ ಮಟ್ಟದಲ್ಲಿ ವೈರಲ್ ಆಗಿದೆ. ರಾಜ್ಯಾದ್ಯಂತ ಈ ವಿಡಿಯೋ ಕುರಿತು ಪರ ವಿರೋಧಗಳ ಚರ್ಚೆಯಾಗುತ್ತಿದೆ.

ಸಮೀರ್ ಎಂಡಿ ಅವರು ಸೌಜನ್ಯ ಪ್ರಕರಣದ ಕುರಿತು ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ ವಿವರಣೆ ನೀಡಿ ವಿಡಿಯೋವನ್ನು ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದರು. ಇದು ಕೋಟಿಗಟ್ಟಲೆ ವ್ಯೂ ಕಾಣುವುದರೊಂದಿಗೆ ದೊಡ್ಡಮಟ್ಟದ ಚರ್ಚೆಯನ್ನು ಹುಟ್ಟು ಹಾಕಿತ್ತು. ಈ ಬೆನ್ನಲ್ಲೇ ಇದು ಸಮಾಜದಲ್ಲಿ ಶಾಂತಿಯನ್ನು ಹಾಳುಮಾಡುತ್ತದೆ ಎಂಬ ನಿಟ್ಟಿನಲ್ಲಿ ಎಡಿಜಿಪಿ ಎಲ್ಲಾ ಪೊಲೀಸ್ ಆಯುಕ್ತರಿಗೆ ಹಾಗೂ ವಲಯ ಪೊಲೀಸ್ ಅಧೀಕ್ಷಕರಿಗೆ ಈ ಕುರಿತು ಕಣ್ಣಿಡುವಂತೆ ಪತ್ರದ ಮೂಲಕ ಸೂಚಿಸಿದರು ಹಾಗೂ ಈ ಕುರಿತು ಗಮನಕ್ಕೆ ತರದ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಘಟಕಾಧಿಕಾರಿಗಳು ವಿಫಲರಾಗಿದ್ದಾರೆ ಎಂದೂ ಸಹ ಪತ್ರದಲ್ಲಿ ಉಲ್ಲೇಖಿಸಿದ್ದರು.

ಅಲ್ಲದೇ ಅತ್ತ ಬಳ್ಳಾರಿ ಜಿಲ್ಲೆಯ ಕೌಲ್‌ಬಝಾರ್ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡಿದ್ದರು. ಈ ದೂರಿನ ಕುರಿತು ನಿನ್ನೆ ವಿಚಾರಣೆ ನಡೆಸಿದ ಹೈಕೋರ್ಟ್ ಜಡ್ಜ್ ಪೊಲೀಸರ ಪರ ವಕೀಲರಿಗೆ ಹಾಗೂ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನೋಟಿಸ್ ನೀಡುವಾಗ ಎಫ್‌ಐಆರ್ ಲಗತ್ತಿಸದ ಕಾರಣಕ್ಕೆ ಬೈದ ಜಡ್ಜ್ ಬಳಿಕ ಸಮೀರ್ ಮಾಡಿರುವ ವಿಡಿಯೊ ತಪ್ಪಲ್ಲ, ಅದು ಭಾರತದ ಪ್ರಜೆಗಿರುವ ಮೂಲಭೂತ ಹಕ್ಕುಗಳಲ್ಲೊಂದು. ನೀವು ಆತನನ್ನು ಠಾಣೆಗೂ ಸಹ ಕರೆಸುವ ಹಾಗಿಲ್ಲ, ಇನ್ನು ಬಂಧಸುವುದೆಲ್ಲ ದೂರದ ಮಾತು. ಆತ ಪ್ರಭಾವಿ ವ್ಯಕ್ತಿ ಬಗ್ಗೆ ಮಾತನಾಡಿದ್ದಾನೆ ಎಂದು ಅರೆಸ್ಟ್ ಮಾಡಲು ಅರ್ಜೆಂಟಾ? ನಿಮ್ಮ ತನಿಖಾಧಿಕಾರಿಗೆ ಕೆಲಸ ಬರಿದ್ದರೆ ಅಕ್ಕಪಕ್ಕದವರ ಬಳಿ ನೋಡಿ ಕಲಿಯಲು ಹೇಳಿ, ನಿಮ್ಮ ಉದ್ದೇಶ ಆತನನ್ನು ಬಂಧಿಸಬೇಕು ಎನ್ನುವುದಷ್ಟೇ ಅಲ್ವಾ ಎಂದು ಬೆವರಿಳಿಸಿದ್ದಾರೆ.

ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.