Home News ಉಪ್ಪಿನಂಗಡಿ: ಮನೆಯ ಅಂಗಳದಲ್ಲಿಟ್ಟಿದ್ದ ಕಲ್ಲಿನ ಅಟ್ಟಿ ಮಗುಚಿಬಿದ್ದು ಮಗು ಸಾವು

ಉಪ್ಪಿನಂಗಡಿ: ಮನೆಯ ಅಂಗಳದಲ್ಲಿಟ್ಟಿದ್ದ ಕಲ್ಲಿನ ಅಟ್ಟಿ ಮಗುಚಿಬಿದ್ದು ಮಗು ಸಾವು

Hindu neighbor gifts plot of land

Hindu neighbour gifts land to Muslim journalist

ಉಪ್ಪಿನಂಗಡಿ:ಅಂಗಳದಲ್ಲಿ ಇರಿಸಲಾಗಿದ್ದ ಕೆಂಪು ಕಲ್ಲಿನ ಅಟ್ಟಿ ಮಗುಚಿ ಬಿದ್ದು ಮೂರೂವರೆ ವರ್ಷ ಪ್ರಾಯದ ಗಂಡು ಮಗುವೊಂದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಬಾಯ್ತಾರು ಎಂಬಲ್ಲಿ ಫೆ.28ರಂದು ಸಾಯಂಕಾಲ ಸಂಭವಿಸಿದೆ.

ಅಶ್ರಫ್ ಮತ್ತು ಸಮೀಮಾ ದಪತಿಯ ಮಗ ಮೊಹಮ್ಮದ್ ನೌಶೀರ್ ಮೃತಪಟ್ಟ ಮಗು ಎಂದು ತಿಳಿದು ಬ೦ದಿದೆ. ಕಟ್ಟಡ ನಿರ್ಮಾಣಕ್ಕೆ೦ದು ಮನೆಯಂಗಳದಲ್ಲಿ ತಂದಿರಿಸಲಾಗಿದ್ದ ಕೆಂಪು ಕಲ್ಲಿನ ಅಟ್ಟಿಯ ಬಳಿ ಮಗು ನೌಶೀರ್ ಆಟವಾಡುತ್ತಿದ್ದ ವೇಳೆ ಕಲ್ಲಿನ ಅಟ್ಟಿಯು ಮಗುಚಿ ಆತನ ಮೇಲೆಯೇ ಬಿದ್ದಿತ್ತು. ಪರಿಸರದಲ್ಲಿ ಆಟವಾಡುತ್ತಿದ್ದ ಮಗು ಕಾಣದಾದಾಗ ಮನೆ ಮಂದಿ ಹುಡುಕಾಟ ನಡೆಸಿದರು.ಈ ವೇಳೆ ಅಂಗಳದಲ್ಲಿಟ್ಟಿದ್ದ ಕಲ್ಲಿನ ಅಟ್ಟಿಯು ಬಿದ್ದಿರುವುದನ್ನು ಕಂಡು ಅಲ್ಲಿ ಶೋಧಿಸಿದಾಗ ಮಗು ಕಲ್ಲಿನ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವುದು ಕ೦ಡು ಬಂದಿತ್ತು. ಮೃತ ಬಾಲಕ ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.