Home News Uppinangady: ಮತದಾನಕ್ಕೆಂದು ಬಸ್‌ನಲ್ಲಿ ಬರುತ್ತಿದ್ದ ಹಿಂದೂ ಯುವತಿಗೆ ಅನ್ಯಕೋಮಿನ ಯುವಕನಿಂದ ಕಿರುಕುಳ; ದೂರು ದಾಖಲು

Uppinangady: ಮತದಾನಕ್ಕೆಂದು ಬಸ್‌ನಲ್ಲಿ ಬರುತ್ತಿದ್ದ ಹಿಂದೂ ಯುವತಿಗೆ ಅನ್ಯಕೋಮಿನ ಯುವಕನಿಂದ ಕಿರುಕುಳ; ದೂರು ದಾಖಲು

Crime

Hindu neighbor gifts plot of land

Hindu neighbour gifts land to Muslim journalist

Uppinangady: ಮತದಾನಕ್ಕೆಂದು ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ನಲ್ಲಿ ಬರುತ್ತಿದ್ದ ಹಿಂದೂ ಯುವತಿಗೆ ಅನ್ಯಕೋಮಿನ ಯುವಕನೋರ್ವ ಕಿರುಕುಳ ನೀಡಿದ ಕುರಿತು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿರುವ ಘಟನೆಯೊಂದು ನಡೆದಿದೆ.

ಅನ್ಯಕೋಮಿನ ಸಹಪ್ರಯಾಣಿಕ ಹಿಂದೂ ಯುವತಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ಯುವತಿ ರಕ್ಷಣೆಗಾಗಿ ಬಸ್‌ ಚಾಲಕನ ಮೊರೆ ಹೋಗಿದ್ದು, ಆದರೆ ಈ ವೇಳೆ ಯಾವುದೇ ಸ್ಪಂದನೆ ದೊರೆಯದಿದ್ದು, ನಂತರ ಯುವತಿ ಯುವಕನ ಆಧಾರ್‌ ಕಾರ್ಡ್‌ ಕಿತ್ತು, ಯುವಕ ಬಸ್‌ ನಿಧಾನವಾಗುತ್ತಿದ್ದಂತೆ ಬಸ್‌ ಕಿಟಕಿಯಿಂದ ಜಿಗಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಆಧಾರ್‌ಕಾರ್ಡ್‌ನಲ್ಲಿ ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಇಬ್ರಾಹಿಂ ಎಂಬುವವರ ಮಹಮ್ಮದ್‌ ಅಜೀಂ ಎಂಬ ಮಾಹಿತಿ ಇದೆ. ಯುವತಿ ಈ ಕುರಿತು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ಕೇಸು ದಾಖಲು ಮಾಡಿ, ತನಿಖೆ ನಡೆಸುತ್ತಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: ಸೂರ್ಯಾಸ್ತದ ನಂತರ ಆಹಾರವನ್ನು ಮುಟ್ಟದ ಪಕ್ಷಿ, ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಂಡು ಸ್ನಾನ ಮಾಡುವ ಪಕ್ಷಿ; ಯಾವುದು ಗೊತ್ತಾ?