Home News ಉಪ್ಪಿನಂಗಡಿ : ಹಸಿ ಮೀನು ಮಾರಾಟದ ಶೆಡ್‌ಗೆ ಬೆಂಕಿ | ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಹಿಂ.ಜಾ.ವೇ.ರಾಸ್ತಾ...

ಉಪ್ಪಿನಂಗಡಿ : ಹಸಿ ಮೀನು ಮಾರಾಟದ ಶೆಡ್‌ಗೆ ಬೆಂಕಿ | ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಹಿಂ.ಜಾ.ವೇ.ರಾಸ್ತಾ ರೋಕೋ

Hindu neighbor gifts plot of land

Hindu neighbour gifts land to Muslim journalist

ಉಪ್ಪಿನಂಗಡಿಯ ಹಳೆಗೇಟು ಬಳಿ ಹಸಿ ಮೀನು ಮಾರಾಟದ ಶೆಡ್ ಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಳೆಗೇಟು ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿತು.

ಹಳೇಗೇಟು ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಹಸಿ ಮೀನು ಮಾರಾಟದ ಶೆಡ್‌ ರವಿವಾರ ತಡರಾತ್ರಿ ಬೆಂಕಿಗಾಹುತಿಯಾಗಿದ್ದು, ಇದು ಕಿಡಿಗೇಡಿಗಳ ಕೃತ್ಯ ಎನ್ನಲಾಗಿದ್ದು, ಕೃತ್ಯವನ್ನು ಖಂಡಿಸಿದ್ದ ಹಿಂಜಾವೇ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ರಾಸ್ತಾ ರೋಕೋ ನಡೆಸಿ ಎಚ್ಚರಿಕೆ ನೀಡಿತ್ತು.

ಅದರಂತೆ ಮಂಗಳವಾರ ಮಧ್ಯಾಹ್ನ ಹಳೆಗೇಟು ಬಳಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆ ನಡೆಸಿ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಜಗದೀಶ್ ನೆತ್ತರ್‌ಕೆರೆ, ಪ್ರಶಾಂತ್ ಬಂಟ್ವಾಳ, ಮಲ್ಲೇಶ್ ಆಲಂಕಾರು, ರವೀಂದ್ರದಾಸ್ ಕುಂತೂರು, ಯು.ರಾಮ, ಪ್ರತಾಪ್ ಪೆರಿಯಡ್ಕ, ಸಂದೀಪ್ ಕುಪ್ಪೆಟ್ಟಿ, ಚಿದಾನಂದ ಪಂಚೇರ್, ರವಿ ತೆಕ್ಕಾರ್, ಸುಜೀತ್ ಬೊಳ್ಳಾವು, ರಂಜಿತ್ ಅಡೆಕ್ಕಲ್, ರಕ್ಷಿತ್ ಪೆರಿಯಡ್ಕ, ಅನಿಲ್ ಹಿರೇಬಂಡಾಡಿ, ಧನ್ಯರಾಜ್ ಬೊಳ್ಳಾರ್, ಸುನೀಲ್ ಬೊಳ್ಳಾರ್, ಪ್ರದೀಪ್ ಅಡೆಕ್ಕಲ್, ಸಂತೋಷ್ ಅಡೆಕ್ಕಲ್, ಜಿತೇಶ್ ಕಜೆಕ್ಕಾರ್, ಪವೀತ್ ಸುರ್ಯ, ನಿತೀನ್ ಅಣ್ಣಾಜೆ ಮತ್ತಿತರರು ಉಪಸ್ಥಿತರಿದ್ದರು.

ಉಪ್ಪಿನಂಗಡಿ ಪೊಲೀಸರು ಬಂದೋ ಬಸ್ತ್ ಕಲ್ಪಿಸಿದ್ದರು.