Home News Unusual Case: ಬಿರಿಯಾನಿ ತಿಂದ ಮಹಿಳೆಗೆ ನಡೆಯಿತು ಸತತ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ!

Unusual Case: ಬಿರಿಯಾನಿ ತಿಂದ ಮಹಿಳೆಗೆ ನಡೆಯಿತು ಸತತ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ!

Muzzaffarnagar

Hindu neighbor gifts plot of land

Hindu neighbour gifts land to Muslim journalist

Unusual Case: ರುಬಿ ಶೇಖ್‌ ಎಂಬ 34 ವರ್ಷದ ಮಹಿಳೆಯೋರ್ವಳು ತನ್ನ ಕುಟುಂಬ ಸಮೇತ ಸ್ಥಳೀಯ ರೆಸ್ಟೋರೆಂಟ್‌ವೊಂದಕ್ಕೆ ಹೋಗಿದ್ದು, ಅಲ್ಲಿ ಚಿಕನ್‌ ಬಿರಿಯಾನಿ ಆರ್ಡರ್‌ ಮಾಡಿದ್ದಾರೆ. ಆದರೆ ಚಿಕನ್‌ ಬಿರಿಯಾನಿ ತಿನ್ನುವಾಗ 3.2 ಸೆಂ.ಮೀ ಉದ್ದದ ಚಿಕನ್‌ ಮೂಳೆಯೊಂದು ಅವರ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಬೇಕಾಗಿ ಬಂತು.

ರುಬಿ ಶೇಖ್‌ ಅವರಿಗೆ ಮೂಳೆ ಸಿಲುಕಿಕೊಂಡ ಪರಿಣಾಮ ಉಸಿರುಗಟ್ಟಿದಂತಾಗಿದೆ. ಕ್ರಿಟಿಕೇಟರ್‌ ಏಷ್ಯಾ ಆಸ್ಪತ್ರೆಗೆ ಆಕೆಯನ್ನು ದಾಖಲು ಮಾಡಲಾಯಿತು. ಅಲ್ಲಿ ಎಕ್ಸ್‌-ರೇಯಲ್ಲಿ ಸಿ4-ಸಿ5 ಕಶೇರುಖಂಡಗಳ ಬಳಿ ಮೂಳೆ ಸಿಲುಕಿರುವುದು ಕಂಡು ಬಂದಿದೆ. ಫೆ.8 ರಂದು ಶಸ್ತ್ರಚಿಕಿತ್ಸೆ ಪ್ರಾರಂಭವಾಗಿದೆ. ಸತತ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದೆ. ಈ ಮೂಳೆ ಆಹಾರ ಪೈಪ್‌ ಮೂಲಕ ಹೇಗೆ ಸಿಲುಕಿತು ಎನ್ನುವುದು ಮಾತ್ರ ವೈದ್ಯರಿಗೆ ಆಶ್ಚರ್ಯ ಉಂಟು ಮಾಡಿದೆ.

ರುಬಿ ಶೇಖ್‌ ಅವರು ಮನೆಯಲ್ಲಿ ಚೇತರಿಕೆ ಮಾಡಿಕೊಳ್ಳುತ್ತಿದ್ದು, ಇನ್ನು ಮುಂದೆ ಬಿರಿಯಾನಿ ತಿನ್ನುವುದಿಲ್ಲ ಎಂದು ಹೇಳಿದ್ದಾರೆ.