Home News CM Siddaramaiah: ವಾಲ್ಮೀಕಿ ಹಗರಣಕ್ಕೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಗೂ ನಂಟು? ಸಿದ್ದರಾಮಯ್ಯ ಹೇಳಿದ್ದಿಷ್ಟು

CM Siddaramaiah: ವಾಲ್ಮೀಕಿ ಹಗರಣಕ್ಕೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಗೂ ನಂಟು? ಸಿದ್ದರಾಮಯ್ಯ ಹೇಳಿದ್ದಿಷ್ಟು

CM Siddaramaiah

Hindu neighbor gifts plot of land

Hindu neighbour gifts land to Muslim journalist

CM Siddaramaiah: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಾಲ್ಮೀಕಿ ನಿಗಮದಲ್ಲಾದ ಹಗರಣಕ್ಕೂ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್(Nirmala Seetaraman) ಅವರಿಗೂ ನಂಟಿದೆ, ಅವರೇ ಈ ಹಗರಣಕ್ಕೆ ನೇರ ಹೊಣೆ ಎಂದು ನಂಟು ಬೆಸಿದು, ಸಚಿವೆ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯನವರು(CM Siddaramaiah)ಆಗ್ರಹಿಸಿದ್ದಾರೆ.

ಮುಡಾ ಹಗರಣ(Muda Scam) ಹಾಗೂ ವಾಲ್ಮೀಕಿ ನಿಗಮದಲ್ಲಾದ ಹಗರಣಗಳು ಭಾರೀ ಸದ್ದು ಮಾಡುತ್ತಿವೆ. ವಿಧಾನಸಭಾ ಅಧಿವೇಶನದಲ್ಲಂತೂ (Assembly Session) ಈ ಹಗರಣಗಳದ್ದೇ ಸದ್ದು. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಈ ವಿಚಾರಗಳನ್ನು ಇಟ್ಟುಕೊಂಡೇ ಹರಿಹಾಯುತ್ತಿವೆ. ಅದರಲ್ಲೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಸಂಬಂಧಿಸಿದ ವಾಲ್ಮೀಕಿ ಹಗರಣ ವಿಚಾರವೇ ಹೆಚ್ಚು ಹೆಚ್ಚು ಪ್ರತಿಧ್ವನಿಸುತ್ತಿದೆ. ಯಾಕೆಂದರೆ ಮೂಡಾ ಗೀಡಾ ಅಂದರೆ ಜನರಿಗೆ ಗೊತ್ತಾಗಲ್ಲಾ, SC ST ವಿಚಾರ ಅಂದ್ರೆ ಎಲ್ಲರೂ ಗಮನಿಸುತ್ತಾರೆ. ಸರ್ಕಾರದ ವಿರುದ್ಧ ತಿರುಗಿಬೀಳುತ್ತಾರೆ ಎಂಬುದು ಪ್ರತಿಪಕ್ಷಗಳ ಲೆಕ್ಕಾಚಾರ ಇರಬಹುದು. ಹೀಗಾಗಿ ವಾಲ್ಮೀಕಿ ಹಗರಣವೇ ಸದನದಲ್ಲಿ ಹೈಲೇಟ್ ಆಗುತ್ತಿದೆ. ಆದರೀಗ ಎದಿರೇಟು ನೀಡಿರುವ ಸಿದ್ದರಾಮಯ್ಯ ಬಿಜೆಪಿ ಸಂಸದೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ ಅವರೊಂದಿಗೆ ಈ ಹಗರಣದ ನಂಟು ಬೆಸೆದಿದ್ದಾರೆ.

ಹೌದು, ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಸ್ವಾಮ್ಯದ ಯೂನಿಯನ್‌ ಬ್ಯಾಂಕ್‌ನಲ್ಲಿರುವ ಖಾತೆಯಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಹಗರಣದ ಹೊಣೆಯನ್ನು ಹೊತ್ತುಕೊಂಡು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜೀನಾಮೆ ಕೊಡಲಿ. ಯಾಕೆಂದರೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಅಧೀನದಲ್ಲಿದೆ. ಕೇಂದ್ರ ಹಣಕಾಸು ಸಚಿವರು ಈ ಹಗರಣದ ಹೊಣೆ ಹೊರುತ್ತಾರೆಯೇ? ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

₹ 25 ಲಕ್ಷ ಪರಿಹಾರ ಘೋಷಣೆ:
ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧೀಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಪಿ. ಚಂದ್ರಶೇಖರನ್‌ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ₹25 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಚಂದ್ರಶೇಖರನ್‌ ಪತ್ನಿ ಕವಿತಾ ಅವರು ಡೇಟಾ ಎಂಟ್ರಿ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಶಿಕ್ಷಣ ವೆಚ್ಚ ಭರಿಸಲು ಕಷ್ಟವಾಗಿದೆ ಎಂಬುದಾಗಿ ಮನವಿ ಮಾಡಿದ್ದರು. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ₹25 ಲಕ್ಷ ಪರಿಹಾರ ನೀಡಲಾಗುವುದು’ ಎಂದರು.

CM Yogi: ಇನ್ಮುಂದೆ ಅಂಗಡಿಗಳ ಎದುರು ಮಾಲೀಕರು ಹೆಸರನ್ನೂ ನಮೂದಿಸಬೇಕು, ಸಿಎಂ ಯೋಗಿ ಖಡಕ್ ಆದೇಶ !! ಹೆಸರನ್ನೇ ಬದಲಿಸಿದ ಮುಸ್ಲಿಂ ವ್ಯಕ್ತಿ