Home News Ullala: ಉಳ್ಳಾಲ: ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಮಗು: ಚಿಕ್ಕಪ್ಪ, ಸ್ಥಳೀಯ ಯುವಕನ ಪ್ರಜ್ಞೆಯಿಂದ...

Ullala: ಉಳ್ಳಾಲ: ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಮಗು: ಚಿಕ್ಕಪ್ಪ, ಸ್ಥಳೀಯ ಯುವಕನ ಪ್ರಜ್ಞೆಯಿಂದ ಮಗುವಿನ ರಕ್ಷಣೆ

Hindu neighbor gifts plot of land

Hindu neighbour gifts land to Muslim journalist

Ullala: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಹೆಣ್ಣು ಮಗುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ಕೊಣಾಜೆ, ಬೆಳ್ಮ ಸಮೀಪದ ಮಾರಿಯಮ್ಮ ಗೋಳಿ ದೈವಸ್ಥಾನದ ಬಳಿ ಭಾನುವಾರ ಸಂಜೆ ನಡೆದಿದೆ. ಕೂಡಲೇ ಮಗುವಿನ ಚಿಕ್ಕಪ್ಪ ಹಾಗೂ ಸ್ಥಳೀಯ ಯುವಕ ಸೇರಿ ಮಗುವನ್ನು ರಕ್ಷಣೆ ಮಾಡಿದ ಘಟನೆ ಕೂಡಾ ನಡೆದಿದೆ.

ಮನೆ ಆವರಣದ ಹದಿನೈದು ಅಡಿ ಆಳದ ತೆರೆದ ಬಾವಿಯೊಳಗೆ ಬಿದ್ದಿದೆ. ಮಗು ಬಾವಿಗೆ ಬಿದ್ದಿದ್ದನ್ನು ಕಂಡ ಮನೆ ಮಂದಿ ಚೀರಾಡಿದ್ದು, ಈ ವೇಳೆ ಕೂಡಲೇ ಸಮಯ ಪ್ರಜ್ಞೆ ಮೆರೆದ ಮಗುವಿನ ಚಿಕ್ಕಪ್ಪ ಜೀವನ್‌ ಅವರು ತಡಮಾಡದೆ ಬಾವಿಗೆ ಇಳಿದು ಮಗುವನ್ನು ರಕ್ಷಣೆ ಮಾಡಿದ್ದಾರೆ. ನಂತರ ಸ್ಥಳೀಯ ಯುವಕ ವಿವೇಕ್‌ ಪೂಜಾರಿ ಬಾವಿಗಿಳಿದು ಮಗು ಮತ್ತು ಜೀವನ್‌ ಅವರನ್ನು ಬಾವಿಯಿಂದ ಮೇಲೆಕ್ಕೆತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಮಗುವಿನ ಪ್ರಾಣ ರಕ್ಷಣೆ ಮಾಡಿದ ಇವರಿಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.