Home News Mangaluru : ಉಳ್ಳಾಲ ಬ್ಯಾಂಕಿನಲ್ಲಿ ದರೋಡೆ ಪ್ರಕರಣ – 12 ಕೋಟಿ ದರೋಡೆ ಬಗ್ಗೆ ಪೊಲೀಸರಿಗೆ...

Mangaluru : ಉಳ್ಳಾಲ ಬ್ಯಾಂಕಿನಲ್ಲಿ ದರೋಡೆ ಪ್ರಕರಣ – 12 ಕೋಟಿ ದರೋಡೆ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೇ ಈ ಮಹಿಳೆ!!

Hindu neighbor gifts plot of land

Hindu neighbour gifts land to Muslim journalist

Mangaluru : ಮಂಗಳೂರಿನಲ್ಲಿ ನಿನ್ನೆ ದಿನ ಹಾಡ ಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದ್ದು ಬ್ಯಾಂಕ್ ಸಿಬ್ಬಂದಿಗೆ ​ಬಂದೂಕು ತೋರಿಸಿದ ಆಗಂತುಕರು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಈ ಬೆನ್ನಲ್ಲೇ ಈ ಪ್ರಕರಣದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಸ್ಥಳೀಯ ಮಹಿಳೆ ಎನ್ನಲಾಗಿದೆ.

ಹೌದು, ದಕ್ಷಿಣ ಕನ್ನಡ(Dakshina Kannada)ಜಿಲ್ಲೆಯ ಉಳ್ಳಾಲ ತಾಲ್ಲೂಕಿನ ಕೋಟೆಕಾರು ಬ್ಯಾಂಕ್ ಕೆ ಸಿ ರೋಡ್‌ ಶಾಖೆಗೆ ನೀಲಿ ಫಿಯಟ್ ಕಾರಿನಲ್ಲಿ ಆಗಮಿಸಿದ ಐವರು ಖದೀಮರ ತಂಡ ಭಾರೀ ದರೋಡೆ ನಡೆಸಿ ಎಸ್ಕೇಪ್ ಆಗಿದ್ದಾರೆ. ದರೋಡೆಕೋರರು ಬಂದೂಕು ತೋರಿಸಿ ಹಣ ದೋಚಿದ್ದು, ಈ ವೇಳೆ 12 ಕೋಟಿಗೂ ಅಧಿಕ ಹಣ ದರೋಡೆ ಮಾಡಿದ್ದಾರೆ. ನಾಲ್ಕೈದು ಚೀಲದಲ್ಲಿ ಹಣ ತುಂಬಿಸಿ ದರೋಡೆ ಮಾಡಲಾಗಿದೆ ಎನ್ನಲಾಗಿದ್ದು, ಪಕ್ಕಾ ಪ್ಲ್ಯಾನ್ ಮಾಡಿ ದರೋಡೆಕೋರರು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ದರೋಡೆಕೋರರ ಕೈಯಲ್ಲಿ ತಲ್ವಾರ್ ಹಾಗೂ ಬಂದೂಕು ಸಹ ಹಿಡಿದುಕೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ. ಇನ್ನೂ ಘಟನೆ ಕುರಿತು ಪೊಲೀಸರಿಗೆ ಮೊದಲು ಮಾಹಿತಿ ತಿಳಿಸಿದ್ದು ಬ್ಯಾಂಕ್ ಎದುರು ಮನೆಯ ಮಹಿಳೆ ಉಷಾ ಎಂಬುವವರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ‘ನನ್ನ ಸೊಸೆ ಮನೆಯ ಎದುರಿನ ಬ್ಯಾಂಕ್ ನಲ್ಲೇ ಕೆಲಸ ಮಾಡುತ್ತಿದ್ದಾಳೆ. ಮಧ್ಯಾಹ್ನ ಆದರೂ ಯಾಕೆ ಮನೆಗೆ ಬಂದಿಲ್ಲ ಅಂತ ಬ್ಯಾಂಕಿನತ್ತ ನೋಡಿದೆ. ಆಗ ಹಣದ ಮೂಟೆ ಹಿಡ್ಕೊಂಡು ಕಳ್ಳರು ಕೆಳಗೆ ಬರುತ್ತಿದ್ದರು. ಮೂಟೆಯನ್ನು ಎಳೆದುಕೊಂಡೇ ಬರುತ್ತಿದ್ದರು. ಯಾರಾದರೂ ಪೊಲೀಸ್‌ಗೆ ಹೇಳಿ ಅಂತಾ ಓಡಿದೆ. ಶುಕ್ರವಾರ ಆದ ಕಾರಣ ಯಾರೂ ಇರಲಿಲ್ಲ. ಬಳಿಕ ಮಗನಿಂದ ಪೊಲೀಸ್ ಕಂಟ್ರೋಲ್ ರೂಮ್‌ಗೆ ಫೋನ್ ಮಾಡಿಸಿದೆ ಎಂದರು. ದರೋಡೆಕೋರರು ಮಾಸ್ಕ್ ಧರಿಸಿದ್ದರು. ಹೀಗೆ ಮಧ್ಯಾಹ್ನವೇ ದರೋಡೆಯಾಗಿರುವುದರಿಂದ ಮನೆಯಲ್ಲಿ ಇರೋಕೆ ಭಯ ಆಗ್ತಿದೆ ಎಂದು ಬ್ಯಾಂಕ್ ಎದುರು ಮನೆಯ ಉಷಾ ಆತಂಕ ಹೊರಹಾಕಿದ್ದಾರೆ.