Home News Udupi: ಹಿಂದೂ ಸಮಾಜೋತ್ಸವ ಹಿನ್ನೆಲೆ!ಜಿಲ್ಲೆಗೆ ಪ್ರವೇಶಿಸದಂತೆ ಪೊಲೀಸರಿಂದ ಶರಣ್ ಪಂಪ್ ವೆಲ್ ಗೆ ಹೆಜಮಾಡಿಯಲ್ಲೇ ತಡೆ

Udupi: ಹಿಂದೂ ಸಮಾಜೋತ್ಸವ ಹಿನ್ನೆಲೆ!ಜಿಲ್ಲೆಗೆ ಪ್ರವೇಶಿಸದಂತೆ ಪೊಲೀಸರಿಂದ ಶರಣ್ ಪಂಪ್ ವೆಲ್ ಗೆ ಹೆಜಮಾಡಿಯಲ್ಲೇ ತಡೆ

Udupi

Hindu neighbor gifts plot of land

Hindu neighbour gifts land to Muslim journalist

Udupi: ವಿಶ್ವಹಿಂದೂ ಪರಿಷತ್ ಬಜರಂಗದಳ ವತಿಯಿಂದ ನಡೆಯುತ್ತಿರುವ ಶೌರ್ಯ ಜಾಗರಣ ಯಾತ್ರೆಯ ಸಮಾರೋಪವು ಇಂದು ಉಡುಪಿ ಜಿಲ್ಲೆಯಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದ ವಿ.ಎಚ್.ಪಿ ಮುಖಂಡ ಶರಣ್ ಪಂಪ್ ವೆಲ್ ರನ್ನು ಹೆಜಮಾಡಿಯಲ್ಲಿ ಪೊಲೀಸರು ತಡೆದು ವಾಪಸ್ಸು ಕಳುಹಿಸಿದ ಬಗ್ಗೆ ವರದಿಯಾಗಿದೆ.

ಕಳೆದ ಕೆಲ ಸಮಯಗಳ ಹಿಂದೆ ಉಡುಪಿಯ ಕಾಲೇಜೊಂದರಲ್ಲಿ ನಡೆದಿತ್ತು ಎನ್ನಲಾದ ಶೌಚಾಲಯದ ವಿಡಿಯೋ ಚಿತ್ರೀಕರಣ ಪ್ರಕರಣದ ವಿರುದ್ಧ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಪಂಪ್ ವೆಲ್ ವಿರುದ್ಧ ಪೊಲೀಸರು ಸುಮೊಟೊ ಕೇಸ್ ದಾಖಲಿಸಿದ್ದರು.

ಬಳಿಕ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡ ಪಂಪ್ ವೆಲ್ ರನ್ನು ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಹೊರ ಹೋಗದಂತೆ ಅದೇಶಿಸಿ ಜಾಮೀನು ಮಂಜೂರು ಮಾಡಲಾಗಿತ್ತು. ಆದರೆ ಇಂದು ನಡೆಯುತ್ತಿರುವ ಶೌರ್ಯ ಜಾಗರಣ ಯಾತ್ರೆಯ ಸಮಾರೋಪದಲ್ಲಿ ಭಾಗವಹಿಸಲು ಉಡುಪಿಗೆ ತೆರಳುತ್ತಿರುವ ಮಾಹಿತಿ ಪಡೆದ ಪೊಲೀಸರು ಹೆಜಮಾಡಿಯಲ್ಲೇ ತಡೆದಿದ್ದು, ಆದೇಶ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಉಡುಪಿ (Udupi) ಜಿಲ್ಲಾ ವರಿಷ್ಠಾಧಿಕಾರಿ ಎಚ್ಚರಿಸಿದ್ದಾರೆ.

 

ಇದನ್ನು ಓದಿ: Congress high command: ರಾಜ್ಯ ಕಾಂಗ್ರೆಸ್ಸಿನ ಈ ಶಾಸಕರಿಗೆಲ್ಲಾ ಬಿಗ್ ಶಾಕ್ – ಅರೆ ಹೀಗೆಕೆ ಮಾಡಿತು ಹೈಕಮಾಂಡ್ ?!