

Udupi: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಶಿಫಾ ಗೌಸ್ ಶೇಕ್ ಅವರ ವಿವಾಹ ಆರೋಪಿ ಪಾಜಿಲ್ ಅಹಮ್ಮದ್ ನೊಂದಿಗೆ 2018ರಲ್ಲಿ ಮಂಗಳೂರಿನ ಕೈಕಂಬದಲ್ಲಿ ನಡೆದಿತ್ತು. ಮದುವೆಯ ಪೂರ್ವದಲ್ಲಿ 2ನೇ ಆರೋಪಿ ಮೊಹಮ್ಮದ್ ಜಾಫರ್ ದರ್ಜಿ ನಿಮ್ಮ ಬಳಿ ಸಾಧ್ಯವಾದಷ್ಟು ಮಾತ್ರ ಚಿನ್ನವನ್ನು ಮಗಳಿಗೆ ಹಾಕಿ ಎಂದು ತಿಳಿಸಿದಂತೆ ಶಿಫಾ ಗೌಸ್ ಅವರ ತಂದೆ ಮದುವೆ ವೇಳೆ ಶಿಫಾಳಿಗೆ 35 ಪವನ್ ಚಿನ್ನಾಭರಣದೊಂದಿಗೆ ಮದುವೆ ಮಾಡಿಸಿದ್ದಾರೆ.
ಮದುವೆಯಾದ ಕೆಲವು ದಿನಗಳ ಅನಂತರ ಚಿನ್ನಾಭರಣ ಕಡಿಮೆ ಆಯಿತೆಂದು ಆರೋಪಿ ಪತಿ ಪಾಜಿಲ್ ಹೇಳಲು ಆರಂಭಿಸಿ, ತಲಾಕ್ ನೀಡಿ ಬೇರೆ ಮದುವೆಯಾಗುವುದಾಗಿ ಬೆದರಿಕೆ ಹಾಕುತ್ತಿದ್ದನು. 3ನೇ ಆರೋಪಿ ನಸೀಮಾ ಜಾಫರ್ ಅವಹೇಳನಕಾರಿಯಾಗಿ ಮಾತನಾಡಿ ಟೀಕಿಸುತ್ತಿದ್ದರು. ವಿಚ್ಛೇದನೆ ನೀಡುವಂತೆ ದೂಷಿಸಿ ಮನೆಬಿಟ್ಟು ಹೋಗು ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಶಿಫಾ ಗೌಸ್ ಶೇಕ್ ಅವರು ಮಹಿಳಾ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.













