Home News Kashmir: ಪಹಲ್ಗಾಂ ದಾಳಿ ಉಗ್ರರಿಗೆ ಆಶ್ರಯ ನೀಡಿದ ಇಬ್ಬರು ಅರೆಸ್ಟ್! ಸ್ಫೋಟಕ ಮಾಹಿತಿ ಬಹಿರಂಗ

Kashmir: ಪಹಲ್ಗಾಂ ದಾಳಿ ಉಗ್ರರಿಗೆ ಆಶ್ರಯ ನೀಡಿದ ಇಬ್ಬರು ಅರೆಸ್ಟ್! ಸ್ಫೋಟಕ ಮಾಹಿತಿ ಬಹಿರಂಗ

Hindu neighbor gifts plot of land

Hindu neighbour gifts land to Muslim journalist

Kashmir: ಪೆಹಲ್ಗಾಂನಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಿದ ನಡೆಸಿದ ಉಗ್ರದಾಳಿ ಕುರಿತ ಮಹತ್ವದ ಮಾಹಿತಿ ಬಯಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಇಬ್ಬರನ್ನು ಬಂಧಿಸಿದೆ. ಬಂಧಿತರಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಹಿಂದೂಗಳ ಟಾರ್ಗೆಟ್ ಮಾಡಿ ಉಗ್ರರು ನಡೆಸಿದ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರು ಮೃತಪಟ್ಟಿದ್ದರು.ಈ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಮೂಲಕ ಉತ್ತರ ನೀಡಿತ್ತು. ಉಗ್ರರ ನೆಲೆ ಧ್ವಂಸಗೊಳಿಸಿತ್ತು. ಇದೀಗ ಈ ಪೆಹಲ್ಗಾಂ ದಾಳಿ ಪ್ರಕರಣದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಉಗ್ರರು ದಾಳಿ ನಡೆಸಲು ಅವರಿಗೆ ನೆರವು ಹಾಗೂ ಆಶ್ರಯ ನೀಡಿದ ಇಬ್ಬರು ಸ್ಥಳೀಯರನ್ನು ಎನ್ಐಎ ಬಂಧಿಸಿದೆ.

ಪೆಹಲ್ಗಾಂನ ನಿವಾಸಿಗಳಾದ ಪರ್ವೈಜ್ ಅಹಮ್ಮದ್ ಜೋಥರ್ ಹಾಗೂ ಬಶೀರ್ ಅಹಮ್ಮದ್ ಜೋಥರ್ ಇಬ್ಬರು ಬಂಧಿತರು. ಪರ್ವೈಜ್ ಪೆಹಲ್ಗಾಂ ಬಾಟ್‌ಕೋಟೆ ಮೂಲದವನಾಗಿದ್ದರೆ, ಬಶೀರ್ ಅಹಮ್ಮದ್ ಪೆಹಲ್ಗಾಂ ಹಿಲ್ ಪಾರ್ಕ್ ನಿವಾಸಿ. ಇಬ್ಬರು ಪೆಹಲ್ಗಾಂನಲ್ಲಿ ದಾಳಿ ನಡೆಸಿದ ಉಗ್ರರಿಗೆ ನೆರವು ನೀಡಿದ್ದ ಆರೋಪದಡಿ ಎನ್ಐಎ ಬಂಧಿಸಿದೆ. ಉಗ್ರರಿಗೆ ಊಟ, ವಸತಿ, ಪೆಹಲ್ಗಾಂ ಸಂಪೂರ್ಣ ಚಿತ್ರಣ, ಕೆಲ ಶಸ್ತ್ರಾಸ್ತ್ರಗಳ ಸಾಗಾಟಕ್ಕೂ ನೆರವು ನೀಡಿದ್ದರು. ಕೆಲ ದಿನಗಳ ಕಾಲ ಈ ಉಗ್ರರು ಇಬ್ಬರ ಜೊತೆ ನೆಲೆಸಿದ್ದರು.

ಪೆಹಲ್ಗಾಂ ದಾಳಿ ಮಾಡಿದ ಉಗ್ರರು ಪಾಕಿಸ್ತಾನ ಮೂಲದವರು. ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಈ ಉಗ್ರರಿಗೆ ಪೆಹಲ್ಗಾಂನ ಸ್ಥಳೀಯ ಇಬ್ಬರು ನೆರವು ನೀಡಿದ್ದರು. ಬಳಿಕ ಪೆಹಲ್ಗಾಂನಲ್ಲಿ ಎಲ್ಲೆಲ್ಲಾ ಭದ್ರತಾ ಪಡಗಳಿವೆ, ಎಲ್ಲಿಂದ ದಾಳಿ ಆರಂಭಿಸಿ, ಎಲ್ಲಿ ಕೊನೆಗೊಳಿಸಬೇಕು, ಎಲ್ಲಿಂದ ಎಸ್ಕೇಪ್ ಆಗಬೇಕು ಅನ್ನೋದರ ಮಾಹಿತಿಯನ್ನು ಸ್ಥಳೀಯರಿದಂ ಪಡೆದುಕೊಂಡು ಪ್ಲಾನ್ ರೂಪಿಸಿದ್ದರು. ಪಾಕಿಸ್ತಾನದ ಮೂಲಕ ಇವರು ಲಷ್ಕರ್ ಇ ತೈಬಾ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಅನ್ನೋ ಮಾಹಿತಿಯನ್ನು ಎನ್ಐಎಗೆ ಬಂಧಿತರು ಹೇಳಿದ್ದಾರೆ.

ಪೆಹಲ್ಗಾಂ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಸ್ಥಳೀಯರಿಗೆ ಈ ಉಗ್ರರು ಭಾರತದಲ್ಲಿ ಅತೀ ದೊಡ್ಡ ದಾಳಿಗೆ ಪ್ಲಾನ್ ಮಾಡಿದ್ದಾರೆ ಅನ್ನೋ ಮಾಹಿತಿ ಕೂಡ ಇತ್ತು. ಇಬ್ಬರೂ ಈ ದಾಳಿಗೆ ನೆರವು ನೀಡಿದ್ದಾರೆ.ಒಟ್ಟು ಮೂವರು ಉಗ್ರರಿಗೆ ಇವರು ಆಶ್ರಯ ನೀಡಿದ್ದರು. ಪೆಹಲ್ಗಾಂನಲ್ಲೇ ದಾಳಿಗೆ ಸಂಚು ರೂಪಿಸಲಾಗಿದೆ ಅನ್ನೋ ಮಾಹಿತಿಯೂ ಈ ಸ್ಥಳೀಯರಿಗೆ ಇತ್ತು ಎಂದು ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ.

ಇದನ್ನೂ ಓದಿ:Bengaluru : ಬೆಂಗಳೂರಲ್ಲಿ ಈ ವ್ಯಕ್ತಿ ವಾಸಿಸೋ ಮನೆ ಬಾಡಿಗೆ ತಿಂಗಳಿಗೆ ಬರೋಬ್ಬರಿ 4 ಲಕ್ಷ !! ವಿಡಿಯೋ ವೈರಲ್