Home News Punjab: ಭಾರತೀಯ ಸೇನೆಯ ಗುಪ್ತ ಮಾಹಿತಿ ಲೀಕ್ ಮಾಡಿದ ಇಬ್ಬರು ಅರೆಸ್ಟ್!

Punjab: ಭಾರತೀಯ ಸೇನೆಯ ಗುಪ್ತ ಮಾಹಿತಿ ಲೀಕ್ ಮಾಡಿದ ಇಬ್ಬರು ಅರೆಸ್ಟ್!

Hindu neighbor gifts plot of land

Hindu neighbour gifts land to Muslim journalist

Punjab: ಪಾಕಿಸ್ತಾನದೊಂದಿಗಿನ ಅಂತಾರಾಷ್ಟ್ರೀಯ ಗಡಿಯಲ್ಲಿನ ಉದ್ವಿಗ್ನತೆಯ ನಡುವೆಯೂ ಅಮೃತಸರದ ಸೇನಾ ಕಂಟೋನ್ಮಂಟ್ ಪ್ರದೇಶಗಳು ಮತ್ತು ವಾಯುನೆಲೆಗಳ ಸೂಕ್ಷ್ಮ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್‌ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಗಳನ್ನು ಪಾಲಕ್‌ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಎಂದು ಗುರುತಿಸಲಾಗಿದೆ. ಅಮೃತಸರ ಗ್ರಾಮೀಣ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಗಿದೆ. ಪೊಲೀಸ್‌ ಮಹಾನಿರ್ದೇಶಕ ಗೌರವ್ ಯಾದವ್ ಈ ಬಗ್ಗೆ ಎಕ್ಸ್ ನಲ್ಲಿ ಬರೆದಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಇಬ್ಬರನ್ನು ಬಂಧಿಸಲಾಗಿದ್ದು, ಅವರು ಪ್ರಸ್ತುತ ಅಮೃತಸರ ಕೇಂದ್ರ ಜೈಲಿನಲ್ಲಿದ್ದಾರೆ. ಅವರನ್ನು ಶನಿವಾರ ಬಂಧಿಸಲಾಗಿದ್ದು, ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ. ತನಿಖೆ ಆಳವಾಗುತ್ತಿದ್ದಂತೆ ಮತ್ತಷ್ಟು ಮುಖ್ಯ ಮಾಹಿತಿಗಳು ಬಹುರಂಗವಾಗುವ ನಿರೀಕ್ಷೆಯಿದೆ ಎಂದಿದ್ದಾರೆ.