Home News Twitch streamer Paulal: ಯಪ್ಪಾ.. ದೇಹದ ಆ ಭಾಗವನ್ನೇ ಕತ್ತರಿಸಿ, ಬೇಯಿಸಿ ತನ್ನ ಪ್ರಿಯಕರನಿಗೆ ತಿನ್ನಿಸಿದ್ಲು...

Twitch streamer Paulal: ಯಪ್ಪಾ.. ದೇಹದ ಆ ಭಾಗವನ್ನೇ ಕತ್ತರಿಸಿ, ಬೇಯಿಸಿ ತನ್ನ ಪ್ರಿಯಕರನಿಗೆ ತಿನ್ನಿಸಿದ್ಲು ಈ ಪುಣ್ಯಾತ್ಗಿತ್ತಿ!!

Twitch streamer Paulal
Image source- Metro UK, Indy100

Hindu neighbor gifts plot of land

Hindu neighbour gifts land to Muslim journalist

Twitch streamer Paulal: ಪ್ರಿಯತಮ(Lover)ನನ್ನು ತೃಪ್ತಿ ಪಡಿಸಲು, ಸಂತೋಷವಾಗಿರಿಸಲು ಪ್ರಿಯತಮೆಯರು ಏನೆಲ್ಲಾ ಕಸರತ್ತು ನಡೆಸುತ್ತಾರೆಂದು ನಿಮಗೆಲ್ಲಾ ತಿಳಿದೇ ಇದೆ. ವಿವಿಧ ರುಚಿಕಟ್ಟಾದ ಆಹಾರ ಖಾದ್ಯಗಳನ್ನು ತಯಾರಿಸಿ ಉಣಬಡಿಸುವವರೂ ಇದ್ದಾರೆ. ಆದರೆ ಇಲ್ಲೊಬ್ಬಳು ಪುಣ್ಯಾತ್ಗಿತ್ತಿ ತನ್ನ ಪ್ರಿಯಕರನಿಗಾಗಿ ತನ್ನ ದೇಹದ ಆ ಭಾಗದ ಮಾಂಸವನ್ನೇ ತೆಗೆದು, ಬೇಯಿಸಿ ತಿನ್ನಲು ಬಡಿಸಿದ್ದಾಳೆ.

ಹೌದು, ಸ್ಪೇನ್‌ನ(Spain) ನಿವಾಸಿ ಟ್ವಿಚ್ ಸ್ಟ್ರೀಮರ್ ಪೌಲಾ(Twitch streamer Paulal) ಗೋನು ಎಂಬಾಕೆ ತನ್ನ ಮೊಣಕಾಲಿನ(the knee) ಭಾಗವನ್ನು ಬೇಯಿಸಿ ತಾನು ತಿಂದು ಗೆಳೆಯನಿಗೆ ತಿನ್ನಿಸಿ ಸುದ್ದಿಯಾಗಿದ್ದಾಳೆ. ಅಂದಹಾಗೆ ಈಕೆ ಇತ್ತೀಚೆಗೆ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಳು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವಳ ಕಾಲಿನ ಭಾಗದಿಂದ ಒಂದು ಮೂಳೆಯ ಸಣ್ಣ ತುಂಡನ್ನು ತೆಗೆಯಲಾಗಿತ್ತು. ಬಳಿಕ ವೈದ್ಯರು, ತೆಗೆದ ಮೂಳೆಯ ಸಣ್ಣ ಮಾದರಿಯನ್ನು ಜಾರ್‌ನಲ್ಲಿ ಮನೆಗೆ ಕೊಂಡೊಯ್ಯಲು ಬಯಸುತ್ತೀರಾ ಎಂದು ಅವಳನ್ನು ಕೇಳಿದರು. ಅದಕ್ಕೊಪ್ಪಿದ ಯುವತಿ ಮೊಣ ಕಾಲಿನ ಭಾಗವನ್ನು ತೆಗೆದುಕೊಂಡು ಬಂದಿದ್ದಾಳೆ.

ಬಳಿಕ ಶಸ್ತ್ರಚಿಕಿತ್ಸೆಯ ನಂತರ ಪೌಲಾ, ತನ್ನ ಕಾಲಿನ ಮೂಳೆ ತುಂಡನ್ನು ತಿನ್ನುವ ಬಯಕೆಯನ್ನು ಹೊಂದಿದ್ದಳು. ಈ ಕುರಿತಾಗಿ ತನ್ನ ಗೆಳೆಯನೊಂದಿಗೆ ತಮಾಷೆ ಮಾಡಲು ಪ್ರಾರಂಭಿಸಿದಳು. ಆದರೆ ಒಂದು ದಿನ ತನ್ನ ಕಾಲಿನ ಮೂಳೆಯಿಂದ ಪಾಸ್ತಾಕ್ಕೆ ಸೇರಿಸಿ ಒಂದು ಪದಾರ್ಥವನ್ನೇ ತಯಾರಿಸಿ ಸೇವಿಸಿದ್ದಾಳೆ ಈ ಮರಾಯ್ತಿ!

ಈ ಘನಂದಾರಿ ಕೆಲಸದ ಕುರಿತು ಮತಾನಾಡಿ, ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರೋ ಈಕೆ ‘ಅದು ನನ್ನ ದೇಹದ ಭಾಗವಾಗಿದೆ ಮತ್ತು ನಾನು ಅದನ್ನು ಮತ್ತೆ ನನ್ನ ದೇಹದಲ್ಲಿ ಇಡಬೇಕಾಗಿತ್ತು ಹೀಗಾಗಿ ತಿನ್ನಲು ಬಯಸಿದೆ. ನಾನು ಮಂಡಿಚಿಪ್ಪನ್ನು ತಿಂದೆ. ನನ್ನ ಗೆಳೆಯನಿಗೆ ಮೂಳೆಯಿಂದ ತಯಾರಿಸಿದ ಇನ್ನೊಂದು ಪದಾರ್ಥವನ್ನು ನೀಡಿದೆ’ ಎಂದಿದ್ದಾಳೆ.

ಟ್ವಿಚ್ ಸ್ಟ್ರೀಮರ್ ಪೌಲಾ ಅವರು ಸೋಶಿಯಲ್​ ಮೀಡಿಯಾದಲ್ಲಿ 228,000 ಕ್ಕೂ ಹೆಚ್ಚು ಫಾಲೊವರ್ಸ್​​(Followrs) ಹೊಂದಿದ್ದಾರೆ. ಈಕೆ ತನ್ನ ದೇಹದ ಭಾಗವನ್ನು ತಿಂದಿರುವ ವಿಚಾರ ತಿಳಿಸುತ್ತಿದ್ದಂತೆ ನೆಟ್ಟಿಗರು ಯುವತಿಯ ಈ ವಿಚಿತ್ರ ವರ್ತನೆ ಕುರಿತಾಗಿ ಕಾಮೆಂಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇದನ್ನು ಓದಿ: Bollywood Celebrities Photos: ಬಾಲಿವುಡ್ ಸ್ಟಾರ್ ಹೀರೋಗಳು ಮುದುಕರಾದ್ರೆ ಹೇಗೆ ಕಾಣಿಸ್ತಾರೆ ಗೊತ್ತಾ? ಫೋಟೋಸ್ ಇಲ್ಲಿದೆ!!