Home News Mumbai: ಯುವತಿಯ ಗುಪ್ತಾಂಗದಲ್ಲಿ ಬ್ಲೇಡ್ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ತನ್ನ ಗುಪ್ತಾಂಗದಲ್ಲಿ ತಾನೇ...

Mumbai: ಯುವತಿಯ ಗುಪ್ತಾಂಗದಲ್ಲಿ ಬ್ಲೇಡ್ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ತನ್ನ ಗುಪ್ತಾಂಗದಲ್ಲಿ ತಾನೇ ಬ್ಲೇಡ್​ ಇಟ್ಟ ಯುವತಿ !!

Hindu neighbor gifts plot of land

Hindu neighbour gifts land to Muslim journalist

Mumbai : 20 ವರ್ಷದ ಯುವತಿಯೊಬ್ಬಳು ಪ್ರಜ್ಞಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿಕಿತ್ಸೆಗೆ ಒಳಪಡಿಸಿದಾಗ ಆಕೆಯ ಗುಪ್ತಾಂಗದಲ್ಲಿ ಕಲ್ಲು ಹಾಗೂ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಬ್ಲೇಡ್ ಕಂಡುಬಂದಂತಹ ಪ್ರಕರಣ ಮುಂಬೈ ನಗರದಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ರಸ್ಟ್ ಸಿಕ್ಕಿದೆ.

ಹೌದು, ಸುಮಾರು 20 ವರ್ಷದ ಯುವತಿಯೊಬ್ಬಳು ಮುಂಬೈನ ಗೋರೆಗಾಂವ್‌ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ಚಿಕಿತ್ಸೆಗೆ ಒಳಪಡಿಸಿ ನೋಡಿದಾಗ ಅವಳ ಗುಪ್ತಾಂಗದಲ್ಲಿ ಸರ್ಜಿಕಲ್‌ ಬ್ಲೇಡ್‌ಗಳು ಪತ್ತೆಯಾಗಿ ಆಘಾತ ಮೂಡಿಸಿತ್ತು. ಇದೀಗ ಆಕೆಯ ಗುಪ್ತಾಂಗದಲ್ಲಿ ಕಲ್ಲುಗಳು, ಪ್ಲಾಸ್ಟಿಕ್​ನಲ್ಲಿ ಸುತ್ತಿದ್ದ ಬ್ಲೇಡ್ ಪತ್ತೆಯಾಗಿತ್ತು. ಆದರೆ ಅದೆಲ್ಲವನ್ನೂ ಆಕೆಯೇ ಹಾಕಿಕೊಂಡಿದ್ದಾಳೆ ಎಂಬುದು ತಿಳಿದುಬಂದಿದೆ. ಆಕೆಯ ಮೇಲೆ ಆಟೋ ರಿಕ್ಷಾ ಡ್ರೈವರ್ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದರೆ ಕುಟುಂಬದವರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂದು ಹೆದರಿ ಈ ಕೆಲಸ ಮಾಡಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಅಷ್ಟಕ್ಕೂ ಆಗಿದ್ದೇನು?
ಪೊಲೀಸರು ಹೇಳುವ ಪ್ರಕಾರ ‘ಯುವತಿಯು ತನ್ನ ಕುಟುಂಬದೊಂದಿಗೆ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಟೌನ್‌ಶಿಪ್‌ನ ನಲಸೊಪಾರಾದಲ್ಲಿ ವಾಸಿಸುತ್ತಿದ್ದಾಳೆ. ಈಕೆ ಆಟೋ ರಿಕ್ಷಾ ಚಾಲಕಕನೊಂದಿಗೆ ತನ್ನ ಮನೆಯಿಂದ ಸುಮಾರು 12 ಕಿಮೀ ದೂರದಲ್ಲಿರುವ ಅರ್ನಾಲಾ ಬೀಚ್‌ಗೆ ಹೋಗಿದ್ದಳು. ಅಲ್ಲಿ ರಾತ್ರಿ ಕಳೆಯಲು ಯೋಜಿಸಿದರು. ಅವರ ಬಳಿ ಗುರುತಿನ ಚೀಟಿ ಇಲ್ಲದ ಕಾರಣ, ಹೋಟೆಲ್ ಕೊಠಡಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಸಮುದ್ರತೀರದಲ್ಲಿ ರಾತ್ರಿ ಕಳೆದರು. ಆಗ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ನಂಬಿದ್ದಾರೆ. ನಂತರ ಆಟೋ-ರಿಕ್ಷಾ ಚಾಲಕ ಅಪರಾಧದ ಸ್ಥಳದಿಂದ ಪರಾರಿಯಾಗಿದ್ದಾನೆ.

ನಂತರ ಯುವತಿ ನಲಸೋಪಾರ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದು ಮನೆಗೆ ಹಿಂದಿರುಗುವ ಆಲೋಚನೆಯಿಂದ ಗಾಬರಿಗೊಂಡ ಯುವತಿ, ರಾತ್ರಿಯನ್ನು ಕಳೆದು ಅತ್ಯಾಚಾರವನ್ನು ಒಪ್ಪಿಕೊಂಡ ನಂತರ, ಸರ್ಜಿಕಲ್ ಬ್ಲೇಡ್ ಖರೀದಿಸಿ ಆಕೆಯೇ ಗುಪ್ತಾಂಗದಲ್ಲಿ ಇರಿಸಿಕೊಂಡಿದ್ದಳು. ಸ್ವಲ್ಪ ಸಮಯದ ನಂತರ, ಅವಳು ನೋವು ಮತ್ತು ರಕ್ತಸ್ರಾವವನ್ನು ಅನುಭವಿಸಿದಾಗ ಸ್ಥಳೀಯರನ್ನು ಸಂಪರ್ಕಿಸಿದ್ದಾಳೆ. ಆಗ ಅವಳನ್ನು ಕರೆದೊಯ್ದು ಆಟೋ ರಿಕ್ಷಾ ಚಾಲಕನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಲಾಗಿದೆ ಎಂದು ತಿಳಿದು ಬಂದಿದೆ.

ಸಧ್ಯ ರೈಲ್ವೆ ನಿಲ್ದಾಣದಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ.