Home News Bigg boss: ಧನರಾಜ್​ ಆಚಾರ್​ ಮನೆಗೆ ​ತ್ರಿವಿಕ್ರಮ್ ಸರ್​ಪ್ರೈಸ್ ವಿಸಿಟ್!ಬಂದಿದ್ದೇಕೆ?

Bigg boss: ಧನರಾಜ್​ ಆಚಾರ್​ ಮನೆಗೆ ​ತ್ರಿವಿಕ್ರಮ್ ಸರ್​ಪ್ರೈಸ್ ವಿಸಿಟ್!ಬಂದಿದ್ದೇಕೆ?

Hindu neighbor gifts plot of land

Hindu neighbour gifts land to Muslim journalist

Bigg boss: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ (Bigg boss) ಸೀಸನ್ 11ರ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರೇ, ಇನ್ನೂ ಕೆಲವರು ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ.

ಇನ್ನೂ, ಗಿಚ್ಚಿ ಗಿಲಿಗಿಲಿ ಮೂಲಕ ಫೇಮಸ್ ಆಗಿ ಬಿಗ್​ಬಾಸ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರೋ ಧನರಾಜ್​ ಆಚಾರ್​ ಅವರು ಸದ್ಯ ಮುದ್ದಾದ ಮಗಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ.

ಇದರ ಮಧ್ಯೆ ಸರ್​ಪ್ರೈಸ್​ ಎಂಬಂತೆ ಧನರಾಜ್​ ಆಚಾರ್​ ಮನೆಗೆ ಬಿಗ್​ಬಾಸ್​ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ಧನರಾಜ್ ಆಚಾರ್ ಮನೆಗೆ ಸರ್​ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ. ಹೌದು, ಮಂಗಳೂರಿನ ಪುತ್ತೂರಿನಲ್ಲಿರುವ ಧನರಾಜ್ ಆಚಾರ್​ ಅವರ ಮನೆಗೆ ಸರ್​ಪ್ರೈಸ್​ ​ಎಂಬಂತೆ ತ್ರಿವಿಕ್ರಮ್‌ ಎಂಟ್ರಿ ಕೊಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ಧನರಾಜ್​ ಆಚಾರ್​ ಅವರ ಮನೆಗೆ ತ್ರಿವಿಕ್ರಮ್​ ಭೇಟಿ ಕೊಟ್ಟಿದ್ದಾರೆ. ಅಲ್ಲದೇ ಧನರಾಜ್ ಆಚಾರ್ ಅವರದ್ದು ದೊಡ್ಡ ಕುಟುಂಬ ನೋಡಿ ತ್ರಿವಿಕ್ರಮ್ ಫುಲ್ ಶಾಕ್​ ಆಗಿದ್ದಾರೆ. ಅಲ್ಲದೇ ಕಮಲಜ್ಜಿ ಕುಟುಂಬದ ಎಲ್ಲಾ ಸದಸ್ಯರ ಜೊತೆ ಕಾಲ ಕಳೆದ ತ್ರಿವಿಕ್ರಮ್ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ತ್ರಿವಿಕ್ರಮ್ ಆಗಮನದ ಬಗ್ಗೆ ಖುಷಿ ಹಂಚಿಕೊಂಡಿರುವ ಧನರಾಜ್ ಅವರು, ನಮ್ಮ ಮನೆಯಲ್ಲಿ ಮಾಸ್ಟರ್ ತ್ರಿವಿಕ್ರಮ್. ಲವ್ ಯು ಮಾಸ್ಟರ್ ನೀವು ಬಂದಿದ್ದು ಖುಷಿ ತಂದಿದೆ. ಕಮಲಜ್ಜಿ ಕುಟುಂಬ ಮತ್ತು ವಿಕ್ಕಿ ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಧನರಾಜ್ ಆಚಾರ್ ಪ್ರೀತಿಗೆ ಮಾರು ಹೋದ ತ್ರಿವಿಕ್ರಮ್ ಅವರು ಕೂಡ ಕಮಲಜ್ಜಿ ಕುಟುಂಬದ ಬಗ್ಗೆ ಮಧುರವಾದ ಮಾತುಗಳನ್ನ ಪೋಸ್ಟ್ ಮಾಡಿದ್ದಾರೆ. ಮನೆಯೇ ಮಂತ್ರಾಲಯ ಅಂತಾರೆ. ಆದರೆ ಈ ಮಂತ್ರಾಲಯದಲ್ಲಿ ಹಲವು ಮುಗ್ಧ ಮನಸಿನ ದೈವವನ್ನು ಕಂಡೆ. ಥ್ಯಾಂಕ್ಯು ಮಂಗಳೂರು ಹುಲಿ ಎಂದು ಧನರಾಜ್ ಆಚಾರ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ತ್ರಿವಿಕ್ರಮ್ ಕಂಡು ಕಮಲಜ್ಜಿ ಕುಟುಂಬದ ಸದಸ್ಯರು ಸಂತೋಷವಾಗಿದ್ದು, ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಫೋಟೋಗೆ ಸಖತ್ ಪೋಸ್‌ ಕೊಟ್ಟಿದ್ದಾರೆ.