Home News Tragic Story: ಮಗನ ಶವ ಕೊಳೆಯುತ್ತಿದ್ದರೂ ಮಲಗಿದ್ದಾನೆಂದು ಮನೆಯಲ್ಲೇ ಇರಿಸಿಕೊಂಡಿದ್ದ ತಾಯಿ-ಮಗಳು!

Tragic Story: ಮಗನ ಶವ ಕೊಳೆಯುತ್ತಿದ್ದರೂ ಮಲಗಿದ್ದಾನೆಂದು ಮನೆಯಲ್ಲೇ ಇರಿಸಿಕೊಂಡಿದ್ದ ತಾಯಿ-ಮಗಳು!

Tragic Story

Hindu neighbor gifts plot of land

Hindu neighbour gifts land to Muslim journalist

Tragic Story: ಹೆತ್ತ ತಾಯಿಗೆ ತನ್ನ ಮಗು ಸತ್ತಿದೆ ಎಂದು ಒಪ್ಪಿಕೊಳ್ಳುವುದಕ್ಕೆ ಕಷ್ಟ ಆಗುತ್ತೆ ಅನ್ನೋದು ನಿಜ. ನಂತರ ಕಾಲ ಕ್ರಮೇಣ ನೋವನ್ನು ಮರೆಯಲೇ ಬೇಕು. ಆದ್ರೆ ಇಲ್ಲಿ ತಾಯಿಯೊಬ್ಬಳು ತನ್ನ 13 ವರ್ಷದ ಮಗನ ಸಾವನ್ನು (Son Death) ಸಹಿಸಲಾಗದೆ ಅವನ ಮೃತ ದೇಹವನ್ನು ತನ್ನ ಫ್ಲ್ಯಾಟ್‍ನಲ್ಲಿ ಹಲವು ದಿನಗಳವರೆಗೆ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ವಿಚಿತ್ರ (Tragic Story) ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ತಾಯಿ ಕೋಮಲ್ ಜೈನ್ ಮತ್ತು ಸಹೋದರಿ ಕಾವ್ಯಾ ಮೃತ ಬಾಲಕ ತೇಜಸ್ ಜೈನ್ ಶವವನ್ನು ಇಟ್ಟುಕೊಂಡು ಚಂದ್ರನಗರ ಕಾಲೋನಿಯಲ್ಲಿ ವಾಸಿಸುತ್ತಿದ್ದರು.

ವರ್ಷದ ಹಿಂದೆ ಕೋಮಲ್ ಅವರ ಪತಿ ನಿಧನರಾದಾಗಿನಿಂದ ಕೋಮಲ್ ಮತ್ತು ಕಾವ್ಯಾ ಇಬ್ಬರೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕಾವ್ಯಾ, ಅನಾರೋಗ್ಯದ ಕಾರಣ 12ನೇ ತರಗತಿಯ ನಂತರ ತನ್ನ ಅಧ್ಯಯನವನ್ನು ನಿಲ್ಲಿಸಬೇಕಾಯಿತು. ದೆಹಲಿಯ ಚೌರಿ ಬಜಾರ್‌ನಲ್ಲಿ ವಾಸಿಸುವ ಕೋಮಲ್ ಅವರ ಸಹೋದರ ಪ್ರಶಾಂತ್ ಜೈನ್ ಇವರ ಕುಟುಂಬದ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದರು. ಈಗ ಮಗನು ಸಾವನಪ್ಪಿದ ಕಾರಣ ಅವರ ಮಾನಸಿಕ ಸಮಸ್ಯೆ ಹೆಚ್ಚಾಗಿ ಹೀಗೆ ಮಾಡಿರಬಹುದು ಎನ್ನಲಾಗಿದೆ.

ಫ್ಲ್ಯಾಟ್‍ನಿಂದ ಹೊರಬರುವ ಕೆಟ್ಟ ವಾಸನೆಯಿಂದ ತೊಂದರೆಗೊಳಗಾದ ನೆರೆಹೊರೆಯವರು ಭಾನುವಾರ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ತಾಯಿ ಮತ್ತು ಮಗಳು ತಮ್ಮ ಮನೆಯ ಲೈಟ್‌ಗಳನ್ನು ಆಫ್ ಮಾಡಿದ್ದರು ಮತ್ತು ಕಾಲೋನಿಯಲ್ಲಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ಪೊಲೀಸರು ಫ್ಲ್ಯಾಟ್‍ಗೆ ಬಂದು ಅವರ ಮನೆಯೊಳಗೆ ಹೋಗಿ ನೋಡಿದಾಗ ತೇಜಸ್ ನೆಲದ ಮೇಲೆ ಬಿದ್ದಿರುವುದನ್ನು ನೋಡಿದಾಗ, ಕೋಮಲ್ ಮತ್ತು ಕಾವ್ಯಾ ಈ ಶವದ ಬಳಿ ಕುಳಿತಿದ್ದರು. ತೇಜಸ್ ನಿದ್ದೆ ಮಾಡುತ್ತಿದ್ದಾನೆ ಎಂದು ಭಾವಿಸಿದ್ದಾಗಿ ಇಬ್ಬರೂ ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ತೇಜಸ್ ಸೆಪ್ಟಿಸೆಮಿಯಾದಿಂದ ಮೃತಪಟ್ಟಿದ್ದಾನೆ ಎಂದು ಮಂಗಳವಾರ ಶವಪರೀಕ್ಷೆ ಮೂಲಕ ದೃಢಪಡಿಸಿವೆ.