Home News Traffic Rules: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ತಪ್ಪಿಸಿಕೊಳ್ತೀರಾ? ಇನ್ಮೇಲೆ ದಂಡ ಕಟ್ಟಿಸಲು...

Traffic Rules: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ತಪ್ಪಿಸಿಕೊಳ್ತೀರಾ? ಇನ್ಮೇಲೆ ದಂಡ ಕಟ್ಟಿಸಲು ಸರ್ಕಾರದಿಂದ ಹೊಸ ಪ್ಲಾನ್!

Traffic Rules

Hindu neighbor gifts plot of land

Hindu neighbour gifts land to Muslim journalist

Traffic Rules: ನೀವೇನಾದ್ರು ಸಂಚಾರಿ ನಿಯಮ ಉಲ್ಲಂಘಿಸಿ  ದಂಡ ಕಟ್ಟದೆ ತಪ್ಪಿಸಿಕೊಳ್ತೀರಾ? ಹಾಗಿದ್ರೆ ಇನ್ಮೇಲೆ ದಂಡ ಕಟ್ಟಿಸಲು ಸರ್ಕಾರದಿಂದ ಹೊಸ ಪ್ಲಾನ್ ಒಂದನ್ನು ತರಲಾಗಿದೆ. ಹೌದು, ಇನ್ಮುಂದೆ ಸಂಚಾರಿ ನಿಯಮ (Traffic Rules) ಉಲ್ಲಂಘಿಸಿದರೆ ತಕ್ಷಣ ಮೊಬೈಲ್‌ಗೆ ಮೆಸೇಜ್ ಬರುತ್ತೆ. ನೀವು ದಂಡ ಕಟ್ದೇ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ!

Union Budget: ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆ ಯಾವಾಗ? ಬಜೆಟ್ ನಲ್ಲಿ ಏನೇನಿದೆ?!

ಹೌದು, ಸಂಚಾರಿ ನಿಯಮ ಉಲ್ಲಂಘಿಸಿದವರನ್ನು ಪತ್ತೆ ಮಾಡಲು ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಒಟ್ಟು 119 ಕಿಲೋ ಮೀಟರ್ ಉದ್ದಕ್ಕೂ 60 ಕ್ಯಾಮರಾ ಕಣ್ಗಾವಲು ಹಾಕಲಾಗಿದ್ದು, ಒಂದು ವೇಳೆ ನೀವು ರೂಲ್ಸ್ ಫಾಲೋ ಮಾಡದೇ ವಾಹನ ಚಾಲನೆ ಮಾಡಿದ್ರೆ ದಂಡ ಪಾವತಿ ಮಾಡಲೇಬೇಕಾಗುತ್ತದೆ ಎಚ್ಚರವಾಗಿರಿ.

ಮುಖ್ಯವಾಗಿ ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (Mysuru Bengaluru Highway)  275ರಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದರೆ ತಕ್ಷಣವೇ ಮೊಬೈಲ್‌ಗೆ ಅಲರ್ಟ್ ಮೆಸೇಜ್ ಬರಲಿದೆ. AI ಕ್ಯಾಮೆರಾ ಮೂಲಕ ವಾಹನ ಚಾಲಕರಿಗೆ ಮಾಹಿತಿ ರವಾನೆ ಆಗಲಿದೆ. ವಾಹನದ ಸಂಖ್ಯೆ ಮೂಲಕ ನಿಯಮ ಉಲ್ಲಂಘಿಸಿದ ಮಾಲೀಕರನ್ನು ಕೃತಕ ಬುದ್ಧಿಮತ್ತೆ ಹೊಂದಿರುವ ಕ್ಯಾಮೆರಾ ಪತ್ತೆ ಹಚ್ಚಲಿದೆ. ಅಲ್ಲದೆ ನಿಯಮ ಉಲ್ಲಂಘಿಸಿದ ಚಾಲಕನ ಮನೆಗೆ ನೋಟಿಸ್ ಬರಲಿದೆ. ಅಷ್ಟೇ ಅಲ್ಲ ನಿಯಮ ಉಲ್ಲಂಘನೆ ಸ್ಥಳ, ದಿನಾಂಕ, ಸಮಯ ಎಲ್ಲವನ್ನೂ ವಾಹನ ನೋಂದಣಿಯ ಮೊಬೈಲ್ ಸಂಖ್ಯೆಗೆ ರವಾನೆ ಮಾಡಲಾಗುತ್ತಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಈ ವ್ಯವಸ್ಥೆಯಿಂದ ಒಂದೇ ತಿಂಗಳಲ್ಲಿ 8,99 ಕೋಟಿ ದಂಡ ವಸೂಲಿಯಾಗಿದೆ. ಜೂನ್ 1 ರಿಂದ 30ರವರೆಗೆ 1,61,491 ಪ್ರಕರಣ ದಾಖಲಾಗಿದೆ. ಐ.ಟಿ.ಎಂ.ಎಸ್ ಕ್ಯಾಮರಾದಲ್ಲಿ ನಿಯಮ ಉಲ್ಲಂಘನೆ ದಾಖಲಾಗಿದೆ. ಒಂದೇ ತಿಂಗಳಲ್ಲಿ ಪಥ ಶಿಸ್ತು ಉಲ್ಲಂಘನೆ ಪ್ರಕರಣ 12,609, ಟ್ರಿಪ್ಪಲ್ ರೈಡಿಂಗ್ ಪ್ರಕರಣ 1087, ಹೆಲ್ಮೆಟ್ ಧರಿಸದೆ ಇರುವುದು 9079, ಅತೀ ವೇಗ 7671, ವಿರುದ್ಧ ದಿಕ್ಕಿನಲ್ಲಿ ಸಂಚಾರ 07, ನೋ ಎಂಟ್ರಿ 577 ಪ್ರಕರಣಗಳು ದಾಖಲಾಗಿವೆ.

ಒಟ್ಟಿನಲ್ಲಿ ಸೀಟು ಬೆಲ್ಟ್ ಧರಿಸದ ಪ್ರಕರಣಗಳೇ ಹೆಚ್ಚು ಕಂಡುಬಂದಿದೆ ಆದ್ದರಿಂದ ನೀವು  ನಿಮ್ಮ ರಕ್ಷಣೆ ಮತ್ತು ದಂಡ ತಪ್ಪಿಸಲು ಎಚ್ಚರವಾಗಿರುವುದು ಉತ್ತಮ.

Dakshina Kannada: ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭ ಭೂ ಕುಸಿತ; ಮಣ್ಣಿನಡಿಯಲ್ಲಿ ಕಾರ್ಮಿಕರು