Home latest ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ಬಳಿ ಟೀ ಕುಡಿಯುತ್ತಿದ್ದವರ ಮೇಲೆಯೇ ಹರಿದು ಹೋದ ಟ್ರ್ಯಾಕ್ಟರ್|ನಾಲ್ವರ ಪರಿಸ್ಥಿತಿ...

ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ಬಳಿ ಟೀ ಕುಡಿಯುತ್ತಿದ್ದವರ ಮೇಲೆಯೇ ಹರಿದು ಹೋದ ಟ್ರ್ಯಾಕ್ಟರ್|ನಾಲ್ವರ ಪರಿಸ್ಥಿತಿ ಗಂಭೀರ

Hindu neighbor gifts plot of land

Hindu neighbour gifts land to Muslim journalist

ತುಮಕೂರು: ಅಂಗಡಿ ಬಳಿ ಟೀ ಕುಡಿಯುತ್ತಿದ್ದವರ ಮೇಲೆ ಟ್ರ್ಯಾಕ್ಟರ್ ಹರಿದು ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಕುಣಿಗಲ್ ಕೊತ್ತಗೆರೆ ಹೋಬಳಿ ಕೆ.ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ನಡೆದಿದೆ

ಆರೀಪ್ ಉಲ್ಲಾ (60 ವ), ನಂಜಪ್ಪ (65 ವ), ಚಲುವರಾಜು (60 ವ), ಪವನ್ ಗೌಡ (21 ವ) ತೀವ್ರವಾಗಿ ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ.

ಟೀ ಅಂಗಡಿಯೊಂದರ ಬಳಿ ಟೀ ಕುಡಿಯುತ್ತಿದ್ದ ವೇಳೆ ಟ್ರ್ಯಾಕ್ಟರೊಂದು ಚಾಲಕನ ನಿಯಂತ್ರಣ ತಪ್ಪಿ ಟೀ ಕುಡಿಯುತ್ತಿದ್ದವರ ಮೇಲೆ ಹರಿದು ಈ ಅವಘಡ ಸಂಭವಿಸಿದೆ.ಅಪಘಾತದಲ್ಲಿ ಆರೀಪ್ ಉಲ್ಲಾ ಎಂಬ ವ್ಯಕ್ತಿಯ ಕಾಲು ತುಂಡಾಗಿದ್ದು, ಚಲುವರಾಜು ಅವರ ಕೈ ಮುರಿದಿದೆ. ಉಳಿದ ಇಬ್ಬರಿಗೆ ಗಾಯವಾಗಿದೆ. ಪ್ರಥಮ ಚಿಕಿತ್ಸೆಯನ್ನು ಕುಣಿಗಲ್ ಪಟ್ಟಣದ ಎಂ.ಎಂ ಆಸ್ಪತ್ರೆಯಲ್ಲಿ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.