Home News Tomato Price Hike: ಟೊಮೆಟೋ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆ – ಮೊನ್ನೆ 10 ರೂ ಗೂ...

Tomato Price Hike: ಟೊಮೆಟೋ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆ – ಮೊನ್ನೆ 10 ರೂ ಗೂ ಕೇಳೋರಿರ್ಲಿಲ್ಲ, ಇಂದು ಕೆಜಿಗೆ 60-80 ರೂ !!

Hindu neighbor gifts plot of land

Hindu neighbour gifts land to Muslim journalist

Tomato Price Hike: ಕೆಲವು ದಿನಗಳ ಹಿಂದೆ ಕೇಳುವವರ ಗತಿಯಿಲ್ಲದೆ ಹತ್ತು ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೊಟೊ ಎಂದು ದಿಡೀರನೆ ಏರಿಕೆ ಕಂಡಿದ್ದು ಒಂದು ಕೆಜಿಗೆ 60 ರಿಂದ 80 ಇದರ ನಿಗದಿಯಾಗಿದೆ.

ಹೌದು, ಟೊಮ್ಯಾಟೊ ಬೆಲೆ ಭಾರೀ ಏರಿಕೆ ಕಂಡಿದೆ. ರಾಜ್ಯದಲ್ಲಿ ಕಳೆದ ವರ್ಷ ಟೊಮ್ಯಾಟೊ ಬೆಲೆ ಭಾರೀ ಏರಿಕೆ ಕಂಡಿತ್ತು. ಇದೀಗ ಮತ್ತೆ ಕಳೆದ ತಿಂಗಳು 10 ರೂ. ಕೆ.ಜಿ ಇದ್ದ ಜವಾರಿ ಟೊಮೆಟೊ ಬೆಲೆ ದಿಢೀರ್‌ ಏರಿಕೆಯಾಗಿದ್ದು, ಕೆ.ಜಿ.ಗೆ 70-80 ರೂ. ಮಾರಾಟವಾಗುತ್ತಿದೆ.

ಕಳೆದ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿಸುರಿದ ಭಾರಿ ಮಳೆಯಿಂದ ಟೊಮೆಟೊ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ. ರಾಜ್ಯದ ಟೊಮೆಟೊ ತವರು ಎಂದು ಕರೆಯುವ ಕೋಲಾರದಲ್ಲಿಯೂ ಕೂಡ ಟೊಮೆಟೊ ಆವಕ ಬಹಳಷ್ಟು ಪ್ರಮಾಣದಲ್ಲಿ ಕುಸಿದಿದೆ. ಇದು ಸಹ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಒಟ್ನಲ್ಲಿ ಟೊಮ್ಯಾಟೊ ಬೆಲೆ ಹೆಚ್ಚಳವಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆಯಾದರೂ.ಗ್ರಾಹಕರಿಗೆ ಇನ್ನಷ್ಟು ಬೆಲೆ ಹೆಚ್ಚಳವಾಗಲಿದೆಯೇ ಎನ್ನುವ ಆತಂಕ ಶುರುವಾಗಿದೆ.