

Tomato Price Hike: ದಸರಾ ಹೊತ್ತಲ್ಲೇ ಜನಸಾಮಾನ್ಯನಿಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಯ ಬರೆ ಬೀಳುತ್ತಿದೆ. ಇದುವರೆಗೂ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಜನರ ಕೈ ಸುಡುತ್ತಿತ್ತು. ಈ ಬಳಿಕ ಇದೀಗ ಟೊಮೆಟೊ ದರ(Tomato Price Hike) ಏರಿಕೆಯಾಗಿದೆ.
ಹೌದು, ನವರಾತ್ರಿ ಹಬ್ಬ ಆರಂಭಗೊಳ್ಳುತ್ತಿದ್ದ ಹಾಗೇ ಜನಸಾಮಾನ್ಯರಿಗೆ ದಿನನಿತ್ಯ ಬಳಸುವ ತರಾಕರಿಗಳ ಬೆಲೆ ಮತ್ತುಷ್ಟು ಏರಿಕೆಯಾಗುತ್ತಿದೆ. ಇದೀಗ ಟೊಮೆಟೊ ದರ ಏರಿಕೆಗೆ ಜನ ಸುಸ್ತಾಗಿದ್ದಾರೆ. ಯಾಕೆಂದರೆ ಕೆಜಿ 40ರೂಪಾಯಿ ಇದ್ದ ಟೊಮೆಟೋ ದರ ಇದೀಗ ಏಕಾಏಕಿ 80ರೂಪಾಯಿಗೆ ಏರಿಕೆಯಾಗಿದೆ.
ಅಕಾಲಿಕ ಮಳೆಯಿಂದ (Rain) ಟೊಮೆಟೊ ಇಳುವರಿ ಕುಸಿತಗೊಂಡಿದೆ. ಇದರ ಜೊತೆ ಈಗ ನವರಾತ್ರಿ ಹಬ್ಬ ಆರಂಭಗೊಂಡಿದೆ. ಬೇಡಿಕೆ ಜಾಸ್ತಿ ಇದೆ. ಪೂರೈಕೆ ಕಡಿಮೆ ಇರುವ ಕಾರಣ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಅಂದಹಾಗೆ ಈಗಾಗಲೇ ಅಕಾಲಿಕ ಮಳೆಯಿಂದಾಗಿ 1 ಕೆಜಿ ಈರುಳ್ಳಿ ದರ 70 ರೂ. ದಾಟಿದೆ. 1 ಕೆಜಿ ಬೆಳ್ಳುಳ್ಳಿ ದರ 500 ರೂ. ಆಗಿದೆ. ಈಗ ಟೊಮೆಟೊ ದರ ಏರಿಕೆಯಿಂದಾಗಿ ದಸರಾ ಹಬ್ಬದ ಸಂದರ್ಭದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.













