Home News PM Modi: ಕಿರುಚಿ ಕಿರುಚಿ ದಣಿದಿದ್ದೀರಿ, ತಗೊಳ್ಳಿ ನೀರು ಕುಡಿಯಿರಿ – ಸಂಸತ್ತಿನಲ್ಲಿ ತನ್ನ ವಿರುದ್ಧ...

PM Modi: ಕಿರುಚಿ ಕಿರುಚಿ ದಣಿದಿದ್ದೀರಿ, ತಗೊಳ್ಳಿ ನೀರು ಕುಡಿಯಿರಿ – ಸಂಸತ್ತಿನಲ್ಲಿ ತನ್ನ ವಿರುದ್ಧ ಪ್ರತಿಭಟಿಸಿದ ಸಂಸದರಿಗೆ ನೀರು ಕೊಟ್ಟ ಮೋದಿ !!

PM Modi

Hindu neighbor gifts plot of land

Hindu neighbour gifts land to Muslim journalist

PM Modi: 18ನೇ ಲೋಕಸಭೆಯ(Lokasabhe) ಮೊದಲ ಅಧಿವೇಶನ ಭಾರೀ ಕಾವೇರಿದೆ. ಹಲವು ಮಹತ್ವದ ಚರ್ಚೆಗಳು ಚರ್ಚಿತವಾಗುವ ಜೊತೆಗೆ ಕೋಲಾಹಲ, ಗದ್ದಲಗಳಿಗೂ ಸಾಕ್ಷಿಯಾಗಿದೆ. ವಿಪಕ್ಷಳು ಸರ್ಕಾರದ ವಿರುದ್ಧ, ಪ್ರಧಾನಿ ಮೋದಿ(PM Modi) ವಿರುದ್ಧ ರೊಚ್ಚಿಗೆದ್ದಿದ್ದು, ಪ್ರತಿಭಟನೆ ನಡೆಸುತ್ತಿವೆ. ಹೀಗೆ ವಿಪಕ್ಷಗಳು ಸಂಸತ್ತಿನೊಳಗೆ ಪ್ರತಿಭಟಿಸುವಾಗ ಅಪರೂಪದ ಪ್ರಸಂಗವೊಂದು ನಡೆದಿದೆ.

Mangaluru: ಸುಪಾರಿ ನೀಡಿ ಪತಿ ಹತ್ಯೆ ಪ್ರಕರಣ; ಪತ್ನಿ ಸಹಿತ ಐವರಿಗೆ ಜೀವಾವಧಿ ಶಿಕ್ಷೆ

ನರೇಂದ್ರ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ(President Address) ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡುವಾಗ ವಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದವು. ಈ ವೇಳೆ ನರೇಂದ್ರ ಮೋದಿಯವರು ತಮ್ಮ ಮುಂದೆಯೇ ನಿಂತು ತನ್ನ ವಿರುದ್ಧ ಕಿರುಚಿ ಕಿರುಚಿ ಪ್ರತಿಭಟಿಸುತ್ತಿದ್ದ ಸಂಸದರಿಗೆ ಕುಡಿಯಲು ನೀರು ನೀಡಿದಂತ ಘಟನೆ ನಡೆದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಹೌದು, ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಸದನದ ಬಾವಿಗಿಳಿದು ಕಿರುಚಿ ಬೊಬ್ಬೆ ಹೊಡೆದು ತಮ್ಮ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದ ವಿಪಕ್ಷಗಳ ನಾಯಕರಿಗೆ ಮೋದಿ ಕುಡಿಯಲು ನೀರು ನೀಡಿದ ಅಪರೂಪದ ಘಟನೆ ನಡೆದಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬರು ನೀರು ನಿರಾಕರಿಸಿದರೆ, ಮತ್ತೊಬ್ಬರು ನೀರು ಕುಡಿದು ದಾಹ ತೀರಿಸಿಕೊಂಡರು.

ಅಂದಹಾಗೆ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗ ಈ ವೇಳೆ ವಿಪಕ್ಷ ನಾಯಕರು ಪದೇ ಮಣಿಪುರ್‌ ಗೋ, ಮಣಿಪುರ್‌ ವಾಂಟ್‌ ಜಸ್ಟಿಸ್‌,ನೀಟ್‌ ಜಸ್ಟಿಸ್‌, ಅಗ್ನಿವೀರ್, ಚುನಾವಣಾ ಆಯೋಗ ಇತ್ಯಾದಿ ಘೋಷಣೆಗಳನ್ನು ಕೂಗುತ್ತಲೇ ಪದೇ ಅಡ್ಡಿ ಮಾಡಿದರು. ಆದರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ಯಾವುದಕ್ಕೂ ಗಮನ ನೀಡದೇ ತಮ್ಮ ಪಾಡಿಗೆ ತಾವು ಸುಮಾರು 2.5 ತಾಸಿನ ಭಾಷಣ ಮಾಡಿದರು.

NEET Exam: ಜುಲೈ ತಿಂಗಳಲ್ಲಿ NEET-PG ಪರೀಕ್ಷೆ; 2 ಗಂಟೆ ಮುಂಚೆ ಸಿದ್ಧಗೊಳ್ಳಲಿದೆ ಪ್ರಶ್ನೆ ಪತ್ರಿಕೆ!