Home News Agriculture: ಕೃಷಿ ಪಂಪ್ ಸೆಟ್‌ಗಳಿಗೆ 7 ಗಂಟೆ ಕಾಲ ತ್ರಿಪೇಸ್ ವಿದ್ಯುತ್: ಇಂಧನ ಸಚಿವ ಕೆ.ಜೆ.ಜಾರ್ಜ್

Agriculture: ಕೃಷಿ ಪಂಪ್ ಸೆಟ್‌ಗಳಿಗೆ 7 ಗಂಟೆ ಕಾಲ ತ್ರಿಪೇಸ್ ವಿದ್ಯುತ್: ಇಂಧನ ಸಚಿವ ಕೆ.ಜೆ.ಜಾರ್ಜ್

Hindu neighbor gifts plot of land

Hindu neighbour gifts land to Muslim journalist

Agriculture: ಬೇಸಿಗೆಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಸಿದ್ಧತೆ ನಡೆಸಲಾಗಿದೆ. ಅಂತೆಯೇ ರೈತರ ಕೃಷಿ (Agricultural) ಪಂಪ್ ಸೆಟ್‌ಗಳಿಗೆ ಏಳು ಗಂಟೆಗಳ ಕಾಲ ವಿದ್ಯುತ್‌ ಪೂರೈಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ದಿನೇಶ್ ಗೂಳಿಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ಪಂಪ್ ಸೆಟ್‌ಗಳಿಗೆ ಈಗಾಗಲೇ
ಹಗಲಿನಲ್ಲಿ ನಾಲ್ಕು ಗಂಟೆ ಹಾಗೂ ರಾತ್ರಿ 3 ಗಂಟೆ ಸೇರಿ ಒಟ್ಟು ಏಳು ಗಂಟೆಗಳ ಕಾಲ ತ್ರಿಪೇಸ್‌ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಕೆಲವು ರೈತರು ಒಮ್ಮೆಲೆ ಏಳು ಗಂಟೆ ವಿದ್ಯುತ್‌ ನೀಡಿ ಎಂದು ಹೇಳಿದರೆ ಇನ್ನು ಕೆಲವರು ಈಗಿರುವ ವಿಧಾನ ಸರಿಯಿದೆ. ನಿರಂತರವಾಗಿ ಏಳು ಗಂಟೆ ನೀರು ಹಾಯಿಸುವ ಸಾಮರ್ಥ್ಯ ಪಂಪ್‌ಗಳಿಗಿಲ್ಲ, ಜೊತೆಗೆ ನೀರಿನ ಲಭ್ಯತೆಯೂ ಇರುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.