Home News Mosquito: ಸೊಳ್ಳೆಗಳು ಬದುಕದ ಜಗತ್ತಿನ ಏಕೈಕ ದೇಶ ಇದು! ಇಲ್ಲಿ ಸೊಳ್ಳೆಗಳೇ ಬದುಕಲ್ಲ, ಏಕೆ ಗೊತ್ತಾ?

Mosquito: ಸೊಳ್ಳೆಗಳು ಬದುಕದ ಜಗತ್ತಿನ ಏಕೈಕ ದೇಶ ಇದು! ಇಲ್ಲಿ ಸೊಳ್ಳೆಗಳೇ ಬದುಕಲ್ಲ, ಏಕೆ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Mosquito: ಜಗತ್ತಿನಲ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಂಡು ಬದುಕುವುದು ಬಹುತೇಕ ಅಸಾಧ್ಯ. ಈ ಸಣ್ಣ ಕೀಟಗಳು ರಾತ್ರಿಯ ನಿದ್ರೆಗೆ ಭಂಗ ತರುವುದಲ್ಲದೆ ಅಪಾಯಕಾರಿ ರೋಗಗಳನ್ನು ಹರಡುತ್ತವೆ. ಆದರೆ ನಿಮಗೆ ತಿಳಿದಿದೆಯೇ, ಸೊಳ್ಳೆಗಳೇ ಇಲ್ಲದ ಒಂದು ದೇಶವಿದೆಯೇ? ಇಲ್ಲಿ ಜನರು ಸೊಳ್ಳೆ ಪರದೆಗಳಿಲ್ಲದೆ ಆರಾಮವಾಗಿ ಮಲಗುತ್ತಾರೆ ಮತ್ತು ವಿಜ್ಞಾನಿಗಳಿಗೂ ಸಹ ಇದಕ್ಕೆ ಕಾರಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ಜಗತ್ತಿನಲ್ಲಿ ಸೊಳ್ಳೆಗಳ ಭಯ ಎಷ್ಟಿದೆಯೆಂದರೆ, ಇಡೀ ಸರ್ಕಾರವೇ ತಲೆಕೆಡಿಸಿಕೊಳಳುವಷ್ಟು. ಈ ಸಣ್ಣ ಕೀಟದಿಂದ ರಾತ್ರಿಯೆಲ್ಲಾ ನಿದ್ದೆಯಿಲ್ಲದಂತೆ ಮಾಡುತ್ತವೆ. ಅಲ್ಲದೆ ಅನೇಕ ಅಪಾಯಕಾರಿ ಕಾಯಿಲೆಗಳನ್ನು ಹರಡುತ್ತವೆ. ಪ್ರತಿ ವರ್ಷ ಲಕ್ಷಾಂತರ ಜನರು ಅವುಗಳಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ಈ ದೇಶದ ಜನರಿಗೆ ಇದರ ಚಿಂತಯೇ ಇಲ್ಲ.

ಐಸ್ಟ್ಯಾಂಡ್‌ನಲ್ಲಿ ಸೊಳ್ಳೆಗಳೇ ಇಲ್ಲ ಏಕೆ ?

ಐಸ್ಟ್ಯಾಂಡ್‌ ಸೊಳ್ಳೆಗಳೇ ಇಲ್ಲದ ದೇಶವಾಗಿದೆ. ಐಸ್ಟ್ಯಾಂಡ್‌ನ ನೆರೆಯ ನಾರ್ವೆ, ಸ್ಕಾಟ್ಲಂಡ್, ಡೆನ್ಮಾರ್ಕ್ ಮತ್ತು ಗ್ರೀನ್‌ ಲ್ಯಾಂಡ್‌ನಲ್ಲಿ ಸೊಳ್ಳೆಗಳು ಸುಲಭವಾಗಿ ಸಂತಾನೋತ್ಪತ್ತಿ ಮಾಡುತ್ತವೆ, ಆದರೆ ಐಸ್ಟ್ಯಾಂಡ್ ಸಂಪೂರ್ಣವಾಗಿ ಸೊಳ್ಳೆ ಮುಕ್ತವಾಗಿದೆ. ಇಲ್ಲಿನ ಸಮುದ್ರ ಹವಾಮಾನ, ನೀರು ಮತ್ತು ಮಣ್ಣಿನ ರಾಸಾಯನಿಕ ಸಂಯೋಜನೆಯು ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲಕರವಾಗಿಲ್ಲ ಎಂದು ವಿಜ್ಞಾನಿಗಳು ನಂಬುತ್ತಾರೆ. ಹಾಗಾಘಿ ಈ ರಹಸ್ಯ ಇನ್ನೂ ನಿಗೂಢವಾಗೇ ಇದೆ.

ಸೊಳ್ಳೆಗಳ ಇತಿಹಾಸ

ಸೊಳ್ಳೆಗಳು ಭೂಮಿಯಲ್ಲಿ 30 ಮಿಲಿಯನ್ ವರ್ಷಗಳಿಂದ ಅಸ್ತಿತ್ವದಲ್ಲಿವೆ ಮತ್ತು 3,500 ಕ್ಕೂ ಹೆಚ್ಚು ಜಾತಿಗಳಿವೆ. ಗಂಡು ಸೊಳ್ಳೆಗಳು ಕೇವಲ 6-7 ದಿನಗಳು ಮಾತ್ರ ಬದುಕುತ್ತವೆ, ಆದರೆ ಹೆಣ್ಣು ಸೊಳ್ಳೆಗಳು ಮೊಟ್ಟೆಗಳನ್ನು ಇಡುವ ಮೂಲಕ ತಮ್ಮ ಜನಸಂಖ್ಯೆಯನ್ನು ವೇಗವಾಗಿ ಹೆಚ್ಚಿಸುತ್ತವೆ. ಕೇವಲ 6% ಹೆಣ್ಣು ಸೊಳ್ಳೆಗಳು ಮನುಷ್ಯರನ್ನು ಕಚ್ಚುತ್ತವೆ ಮತ್ತು ಅವುಗಳಲ್ಲಿ ಅರ್ಧದಷ್ಟು ರೋಗಗಳನ್ನು ಹರಡುತ್ತವೆ.

Export: ಟ್ರಂಪ್‌ ಸುಂಕ ಹುಚ್ಚಾಟದ ಹೊಡೆತ: ಭಾರತದಿಂದ ಅಮೆರಿಕಕ್ಕೆ ಅತಿ ಹೆಚ್ಚು ರಫ್ತಾಗುವ ವಸ್ತುಗಳು ಯಾವುವು?