Home News Karnataka BJP: RSS ಹಿನ್ನಲೆಯುಳ್ಳ ಕರಾವಳಿಯ ಈ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?!

Karnataka BJP: RSS ಹಿನ್ನಲೆಯುಳ್ಳ ಕರಾವಳಿಯ ಈ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?!

Hindu neighbor gifts plot of land

Hindu neighbour gifts land to Muslim journalist

Karnataka BJP: ಕರ್ನಾಟಕದ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಾಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಸ್ವಪಕ್ಷದವರೇ ತೊಡೆತಟ್ಟಿದ್ದಾರೆ. ಈ ವಿಚಾರ ದೆಹಲಿಯವರೆಗೂ ತಲುಪಿದ್ದು ಸಮಸ್ಯೆಯ ಸಂಕೋಲೆಯನ್ನು ಬಿಡಿಸಲು ರಾಷ್ಟ್ರೀಯ ಅಧ್ಯಕ್ಷರೇ ಇದೀಗ ರಾಜ್ಯಕ್ಕೆ ಆಗಮಿಸಿದ್ದಾರೆ. ಅಲ್ಲದೆ ಚುನಾವಣೆಯ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂಬ ಸುದ್ದಿ ಕೂಡ ಸದ್ದು ಮಾಡುತ್ತಿದೆ. ಈ ಎಲ್ಲದರ ನಡುವೆ ಮುಂದಿನ ರಾಜ್ಯಾಧ್ಯಕ್ಷರು ಯಾರಾಗಬಹುದು? ವಿಜಯೇಂದ್ರ ಅವರಿಗೆ ಈ ಪಟ್ಟ ಮತ್ತೆ ಒಲಿದು ಬರಲಿದೆಯಾ? ಅಥವಾ ಬೇರೆ ಹೊಸ ಮುಖಕ್ಕೆ ಮಣೆ ಹಾಕಲಾಗುತ್ತದೆಯಾ? ಎಂಬುದು ಸದ್ಯದ ಕುತೂಹಲ. ಹೀಗಿರುವಾಗ ಆರ್ ಎಸ್ ಎಸ್ ಹಿನ್ನಲೆ ಉಳ್ಳ, ಕರಾವಳಿಯ ಈ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ದಕ್ಕಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು, ರಾಜ್ಯದ ಕಮಲ ಕೋಟೆಯಲ್ಲಿನ ಎಲ್ಲಾ ಬೆಳವಣೆಗೆಗಳ ನಡುವೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರು ಆಗಮಿಸಿದ್ದು, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೇ ಹೊಸದಾಗಿ ಯಾರು ರಾಜ್ಯಾಧ್ಯಕ್ಷರಾದರೇ ಪಕ್ಷದಲ್ಲಿನ ನಾಯಕರ ಅಸಮಾಧಾನ ದೂರವಾಗಲಿದೆ ಎನ್ನುವ ಕುರಿತು ಆರ್‌ ಎಸ್‌ಎಸ್‌ ಮುಖಂಡರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ರಾಜ್ಯಾಧ್ಯಕ್ಷ ಪಟ್ಟ ಯಾರಿಗೆ ಧಕ್ಕೆ ಬಹುದು ಎಂಬ ಸುಳಿವು ಒಂದು ದೊರೆತಂತಿದೆ.

ಆರ್‌ಎಸ್‌ಎಸ್‌ ಹಾಗೂ ಕರಾವಳಿ ಹಿನ್ನಲೆಯವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನ ನೀಡುವ ಕುರಿತು ಕಮಲ ಪಾಳಯದಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆರ್‌ ಎಸ್‌ ಎಸ್‌ ಹಿನ್ನೆಲೆಯುಳ್ಳ ಮಾಜಿ ಸಚಿವ ಹಾಗೂ ಶಾಸಕರಾದ ವಿ ಸುನೀಲ್‌ ಕುಮಾರ್‌ ಅವರ ಹೆಸರು ಕೇಳಿ ಬರುತ್ತಿದೆ. ವಿ ಸುನೀಲ್‌ ಕುಮಾರ್‌ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನ ನೀಡಿದ್ರೆ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ವಿರೋಧಿ ಬಣ ಫುಲ್‌ ಸೈಲೆಂಟ್‌ ಆಗುತ್ತದೆ. ಅಲ್ಲದೇ ಕರಾವಳಿ ಭಾಗದಲ್ಲಿ ಪಕ್ಷವನ್ನ ಇನ್ನಷ್ಟು ಸುಭದ್ರಗೊಳಿಸಲು ಹೆಚ್ಚು ಸಹಾಯಕವಾಗಲಿದೆ ಎಂಬುದು ಬಿಜೆಪಿ ಹೈಕಮಾಂಡ್‌ ನಾಯಕರ ಲೆಕ್ಕಾಚಾರವಾಗಿದೆ.