Home News ಅಗ್ಗದ 7-ಸೀಟರ್ ಕಾರು ಇಲ್ಲಿದೆ | ವೈಶಿಷ್ಟ್ಯ ಮಾತ್ರ ನಿಮ್ಮ ಊಹೆಗಿಂತಲೂ ಸೂಪರ್!!!

ಅಗ್ಗದ 7-ಸೀಟರ್ ಕಾರು ಇಲ್ಲಿದೆ | ವೈಶಿಷ್ಟ್ಯ ಮಾತ್ರ ನಿಮ್ಮ ಊಹೆಗಿಂತಲೂ ಸೂಪರ್!!!

Hindu neighbor gifts plot of land

Hindu neighbour gifts land to Muslim journalist

ಮಾರುಕಟ್ಟೆಯಲ್ಲಿ ನೂತನ ಕಾರುಗಳು ಬಿಡುಗಡೆಯಾಗುತ್ತಿದ್ದು, ಸದ್ಯ ನಿಸ್ಸಾನ್ ಇಂಡಿಯಾ ತನ್ನ UV ಪ್ರಾಡಕ್ಟ್ ಪೋರ್ಟ್ಫೋಲಿಯೊವನ್ನು ವಿಸ್ತರಿಸುವ ಯೋಜನೆಯಲ್ಲಿದ್ದು, ಪ್ರಸ್ತುತ ಪರೀಕ್ಷಾ ಹಂತದಲ್ಲಿವೆ. ನಿಸ್ಸಾನ್ ಎಕ್ಸ್-ಟ್ರಯಲ್ 2023 ರಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಅಲ್ಲದೆ, ಕಂಪನಿಯು ಹೊಸ ನಿಸ್ಸಾನ್ 7-ಸೀಟರ್ MPV ಅನ್ನು ಕೂಡಾ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

7-ಸೀಟರ್ MPV ರೆನಾಲ್ಟ್ ಟೈಬರ್ ಅನ್ನು ಆಧರಿಸಿದ್ದು, ಈ ಮಾಡೆಲ್ ಅನ್ನು CMF-A+ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುತ್ತದೆ. MPV ಕಾರು 1.0L, 3-ಸಿಲಿಂಡರ್, ನ್ಯಾಚುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, ಇದು 71bhp ಪವರ್ ಮತ್ತು 96Nm ಟಾರ್ಕ್ ಅನ್ನು ಜನರೆಟ್ ಮಾಡುತ್ತದೆ. MPV ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, ಮ್ಯಾನ್ಯುವಲ್ ಮತ್ತು AMT ಗೇರ್ ಬಾಕ್ಸ್ ಎರಡೂ ಇರಲಿದೆ.

ಇನ್ನು ಈ ಕಾರಿನ ವಿನ್ಯಾಸದ ಬಗ್ಗೆ ಹೇಳಬೇಕಾದರೆ, ಹೊಸ ನಿಸ್ಸಾನ್ 7-ಸೀಟರ್ MPV ರೆನಾಲ್ಟ್ ಟೈಬರ್‌ಗಿಂತ ಭಿನ್ನವಾಗಿದ್ದು, ಇದರ ವಿನ್ಯಾಸ ಮ್ಯಾಗ್ನೆಟ್ ನಿಂದ ಕೂಡಿರಬಹುದು ಎನ್ನಲಾಗಿದ್ದು, ಆಯಾಮಗಳ ವಿಷಯದಲ್ಲಿ ಇದು ಟ್ರೈಬರ್‌ನಂತೆಯೇ ಇರಲಿದೆ. ಈ ಕಾರು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ರಿಮುವೇಬಲ್ ಥರ್ಡ್ ರೋ, ಪುಶ್-ಬಟನ್ ಸ್ಟಾರ್ಟ್, ಎಲ್‌ಇಡಿ ಲೈಟಿಂಗ್ ಸೆಟಪ್, ಸೆಕೆಂಡ್ ರೋ ರಿಕ್ಲೈನ್ ​​ಮತ್ತು ರೂಫ್ ಮೌಂಟೆಡ್ ಎಸಿ ವೆಂಟ್‌ ನಂತಹ ವೈಶಿಷ್ಟ್ಯಗಳೊಂದಿಗೆ ಬರಲಿದೆ.

ನಿಸ್ಸಾನ್ 7-ಸೀಟರ್ MPV ಕಾರಿನ ಆರಂಭಿಕ ಬೆಲೆ ಮಾರುತಿ ಎರ್ಟಿಗಾಕ್ಕಿಂತ ಕಡಿಮೆಯಿರಬಹುದು ಎಂದು ಅಂದಾಜಿಸಲಾಗಿದೆ. ಶೀಘ್ರದಲ್ಲೇ ಈ ಕಾರು ಮಾರುಕಟ್ಟೆಗೆ ಎಂಟ್ರಿ ನೀಡಲಿದ್ದು, ಗ್ರಾಹಕರಿಗೆ ಲಭ್ಯವಾಗಲಿದೆ.