Home News Pimple: ಮುಖದ ಮೇಲೆ ಮೊಡವೆ ಕಾಣಿಸಿದ್ದಕ್ಕೆ ಕೆಲಸ ಬಿಟ್ಟ ಉದ್ಯೋಗಿ!

Pimple: ಮುಖದ ಮೇಲೆ ಮೊಡವೆ ಕಾಣಿಸಿದ್ದಕ್ಕೆ ಕೆಲಸ ಬಿಟ್ಟ ಉದ್ಯೋಗಿ!

Hindu neighbor gifts plot of land

Hindu neighbour gifts land to Muslim journalist

Pimple: ತನ್ನ ಮುಖದ ಮೇಲೆ ಮೊಡವೆ ಕಾಣಿಸಿದೆ ಎನ್ನುವ ಕಾರಣಕ್ಕೆ ಇಲ್ಲೊಬ್ಬ ಉದ್ಯೋಗಿ ಕೆಲಸ ಬಿಟ್ಟಿರುವ ಘಟನೆ ನಡೆದಿದೆ. ಎಥೆನಾಲ್‌ ಬಳಸಿ ಶುಚಿಗೊಳಿಸುವ ಯಂತ್ರಗಳಿಂದ ಆಕೆಯ ಮುಖದಲ್ಲಿ ಮೊಡವೆ ಕಾಣಿಸಿಕೊಂಡಿದೆ. ಆದರೆ ಆಕೆ ಇದನ್ನು ಆರೋಗ್ಯದ ತುರ್ತು ಪರಿಸ್ಥಿತಿ ಎನ್ನುವ ಕಾರಣ ನೀಡಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾಳೆ.

ಈ ಕುರಿತು ಪೋಸ್ಟ್‌ವೊಂದು ರೆಡ್ಡಿಡ್‌ನಲ್ಲಿ ವೈರಲ್‌ ಆಗಿದೆ. ಈ ವರೆಗೆ ನನ್ನ ಉಖದಲ್ಲಿ ಮೊಡವೆ, ಕಲೆಯಾಗಲಿ ಇರಲಿಲ್ಲ. ನಾನು ಕಾರ್ಖಾನೆಗೆ ಸೇರಿದ ಮೇಲೆ ನನ್ನ ಮುಖದ ಮೇಲೆ ಮೊಡವೆ ಕಾಣಿಸಿಕೊಂಡಿದೆ. ಇದಕ್ಕೆ ಕಾರ್ಖಾನೆಯಲ್ಲಿ ಬಳಸುವ ರಾಸಾಯನಿಕ ಕಾರಣ. ಹೀಗಾಗಿ ರಾಜೀನಾಮೆ ನೀಡಿದ್ದೇವೆ ಎಂದು ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಹಿಳೆ ಪೋಸ್ಟ್‌ ಮಾಡಿದ್ದಾಳೆ.

ಆದರೆ ಕಂಪನಿ ಹೇಳುವ ಪ್ರಕಾರ ನಮ್ಮಲ್ಲಿ ಎಲ್ಲಾ ಸುರಕ್ಷಿತ ಮಾನದಂಡಗಳನ್ನು ಪಾಲಿಸುತ್ತೇವೆ. ಯಾವುದೇ ರಾಸಾಯನಿಕ ವಸ್ತು ಬಳಕೆ ವೇಳೆ ಸಿಬ್ಬಂದಿ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ. ಈವರೆಗೆ ಈ ರೀತಿಯ ಆರೋಪಗಳನ್ನು ಯಾವುದೇ ಉದ್ಯೋಗಿ ಮಾಡಿಲ್ಲ ಎಂದು ಕಂಪನಿ ಹೇಳಿದೆ.