Home News Central Gvt: ಹಾಸನದ ಸರಣಿ ಹೃದಯಘಾತಕ್ಕೂ, ಕೋವಿಡ್ ಲಸಿಕೆಗೂ ಯಾವ ಸಂಬಂಧವೂ ಇಲ್ಲ – ಕೇಂದ್ರ...

Central Gvt: ಹಾಸನದ ಸರಣಿ ಹೃದಯಘಾತಕ್ಕೂ, ಕೋವಿಡ್ ಲಸಿಕೆಗೂ ಯಾವ ಸಂಬಂಧವೂ ಇಲ್ಲ – ಕೇಂದ್ರ ಸರ್ಕಾರದ ಸ್ಪಷ್ಟನೆ

Hindu neighbor gifts plot of land

Hindu neighbour gifts land to Muslim journalist

Central Gvt: : ಹಾಸನದಲ್ಲಿ ಹೃದಯಘಾತದ ಸಾವು ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಈ ಹಾಸನ ಸರಣಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆಯೂ ಕಾರಣ ಇರಬಹುದು ಎಂದು ಸಿಎಂ ಸಿದ್ದರಾಮಯ್ಯ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನಲ್ಲೇ ಕೇಂದ್ರ ಸರ್ಕಾರವು ಹಾಸನದ ಸರಣಿ ಹೃದಯಘಾತ ಪ್ರಕರಣಕ್ಕೆ ಮತ್ತು ಕೋವಿಡ್ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.

ಹೌದು, ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾರಣಗಳಿಂದ ಸಾವಿನ ಸಂಖ್ಯೆ ಅಧಿಕವಾಗಿ ಸಂಭವಿಸಿದ್ದು, ಇದಕ್ಕೆ ಕೋವಿಡ್ ಲಸಿಕೆ ಕಾರಣವಾಗಿರಬಹುದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂದೇಹ ವ್ಯಕ್ತಪಡಿಸಿರುವುದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ದೆಹಲಿ(AIIMS) ಸ್ಪಷ್ಟನೆ ನೀಡಿದೆ.

ಈ ಎರಡೂ ಸಂಸ್ಥೆಗಳು ನಡೆಸಿದ ವ್ಯಾಪಕ ಅಧ್ಯಯನಗಳು ಕೊರೊನಾವೈರಸ್ ಲಸಿಕೆಗಳು ಮತ್ತು ಹಠಾತ್ ಸಾವುಗಳ ನಡುವೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: C M Siddaramiah : ಹಾಸನದ ಸರಣಿ ಹೃದಯಘಾತಕ್ಕೆ ಕೋವಿಡ್ ಲಸಿಕೆಯೂ ಕಾರಣ – ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ