Home News Coconut Shell: ರಾಜ್ಯದಲ್ಲಿ ತೆಂಗಿನ ಚಿಪ್ಪುಗೂ ಬಂತು ಬೇಡಿಕೆ: 1 ಟನ್ ಚಿಪ್ಪು ₹26,500ಕ್ಕೆ ಮಾರಾಟ

Coconut Shell: ರಾಜ್ಯದಲ್ಲಿ ತೆಂಗಿನ ಚಿಪ್ಪುಗೂ ಬಂತು ಬೇಡಿಕೆ: 1 ಟನ್ ಚಿಪ್ಪು ₹26,500ಕ್ಕೆ ಮಾರಾಟ

Hindu neighbor gifts plot of land

Hindu neighbour gifts land to Muslim journalist

Coconut Shell: ರಾಜ್ಯದಲ್ಲಿ ಒಂದು ಟನ್ ತೆಂಗಿನ ಚಿಪ್ಪು ₹26,500ರವರೆಗೂ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ. ಹಿಂದಿನ ವರ್ಷಗಳಲ್ಲಿ ಟನ್‌ಗೆ ₹7 ಸಾವಿರದಿಂದ ₹8 ಸಾವಿರದವರೆಗೂ ಸಿಗುತಿತ್ತು, ಎರಡು ವರ್ಷದ ಹಿಂದೆ ಟನ್‌ ಗೆ ₹18 ಸಾವಿರಕ್ಕೆ ಹೆಚ್ಚಳವಾಗಿತ್ತು(Rate hike) ಎಂದು ವರದಿ ಹೇಳಿದೆ. ರಾಜ್ಯದ ಚಿಪ್ಪಿನಿಂದ ತಯಾರಿಸಿದ ಇದ್ದಿಲಿನಲ್ಲಿ ಕಾರ್ಬನ್(Carbon) ಅಂಶ ಶೇ.85ರಿಂದ 95ರವರೆಗೂ ಇರುತ್ತದೆ, ಹಾಗಾಗಿ ರಾಜ್ಯದ ಇದ್ದಿಲಿಗೆ ಹೆಚ್ಚು ಬೆಲೆ ಸಿಗುತ್ತದೆ ಎಂದು ವರದಿ ತಿಳಿಸಿದೆ.

ರಾಜ್ಯದಲ್ಲಿ ಇದ್ದಲಿಗೆ ಹೆಚ್ಚಿದ ಬೇಡಿಕೆ: ತೆಂಗು ಬೆಳೆಯುವ ರಾಜ್ಯಗಳಾದ ತಮಿಳುನಾಡು(Tamil Nadu), ಕೇರಳ(Kerala) ರಾಜ್ಯದಲ್ಲಿ ಚಿಪ್ಪಿನ ಉತ್ಪಾದನೆ ಕಡಿಮೆಯಾಗಿದೆ. ಹಾಗಾಗಿ ನಮ್ಮ ರಾಜ್ಯದ ಚಿಪ್ಪಿಗೆ ಬೇಡಿಕೆ ಖುಲಾಯಿಸಿದೆ. ಹೊರ ರಾಜ್ಯದ ತೆಂಗಿನ ಚಿಪ್ಪುವಿನ ಇದ್ದಿಲಿನಲ್ಲಿ ಕಾರ್ಬನ್ ಪ್ರಮಾಣ ಶೇ 80ಕ್ಕಿಂತ ಕಡಿಮೆ ಇರುತ್ತದೆ. ಹಾಗಾಗಿ ರಾಜ್ಯದ ಇದ್ದಿಲಿಗೆ ಹೆಚ್ಚು ಬೆಲೆ ಸಿಗುತ್ತದೆ. ‘ಕಾಯಿ ಚಿಪ್ಪು ತಂದು ಕೊಡಿ, ಹಣ ಗಳಿಸಿ’ ಎಂಬ ಅಭಿಯಾನವೂ ಜಿಲ್ಲೆಯಲ್ಲಿ ನಡೆದಿದೆ. ಅಷ್ಟರ ಮಟ್ಟಿಗೆ ಬೇಡಿಕೆ ಕಂಡುಕೊಂಡಿದೆ.

ಸ್ಥಳೀಯವಾಗಿ ಖರೀದಿಸಿದ ಚಿಪ್ಪನ್ನು ಸುಟ್ಟು ಇದ್ದಿಲು ಮಾಡಲಾಗುತ್ತದೆ. ನಂತರ ಕೇರಳ, ತಮಿಳುನಾಡಿನ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ. ಅಲ್ಲದೆ ರಾಜಸ್ಥಾನ, ಗುಜರಾತ್ ಕಾರ್ಖಾನೆಗಳಿಂದಲೂ ಬೇಡಿಕೆ ಬರುತ್ತಿದೆ. ಕಾರ್ಖಾನೆಗಳಲ್ಲಿ ಇದ್ದಿಲನ್ನು ಚೆನ್ನಾಗಿ ತೊಳೆದು, ಒಣಗಿಸಿ, ಗಾತ್ರಕ್ಕೆ ಅನುಗುಣವಾಗಿ ಕತ್ತರಿಸಲಾಗುತ್ತದೆ. ನಂತರ ಪ್ಯಾಕ್ ಮಾಡಿ ರಫ್ತು ಮಾಡಲಾಗುತ್ತದೆ.
ಪ್ರಮುಖವಾಗಿ ಕಾರ್ಬನ್ ತಯಾರಿಕೆಯ ವಲಯಗಳಲ್ಲಿ ಇದ್ದಿಲುಗಳನ್ನು ಬಳಸಲಾಗುತ್ತಿದೆ. ಅಷ್ಟೆ ಅಲ್ಲದೆ ಸೌಂದರ್ಯವರ್ಧಕ ತಯಾರಿಕೆ, ಮುಖದ ಕ್ರೀಮ್, ವಾಟರ್ ಪೇಂಟ್ ತಯಾರಿಕೆಗೂ ಬಳಸಲಾಗುತ್ತದೆ.