Home News Kumbamela: ಪ್ರೇಯಸಿಗಾಗಿ ಕುಂಭಮೇಳದಲ್ಲಿ ಬೇವಿನ ಕಡ್ಡಿ ಮಾರಿದ ಯುವಕ ಈಗ ಒಬ್ಬೊಂಟಿ – ಇಲ್ಲಿದೆ ನೋಡಿ...

Kumbamela: ಪ್ರೇಯಸಿಗಾಗಿ ಕುಂಭಮೇಳದಲ್ಲಿ ಬೇವಿನ ಕಡ್ಡಿ ಮಾರಿದ ಯುವಕ ಈಗ ಒಬ್ಬೊಂಟಿ – ಇಲ್ಲಿದೆ ನೋಡಿ ಕಣ್ಣೀರ ಕಥೆ!!

Hindu neighbor gifts plot of land

Hindu neighbour gifts land to Muslim journalist

Kumbamela : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳದಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಗೋಸ್ಕರ ಬೇವಿನ ಕಡ್ಡಿ ಮಾರಿ ಎಲ್ಲೆಡೆ ಫೇಮಸ್ ಆಗಿದ್ದ. ಇದೀಗ ಈ ಯುವಕ ಕಣ್ಣೀರಲ್ಲಿ ಕೈ ತೊಳೆಯುವಂತೆ ಆಗಿದೆ. ಯಾಕೆಂದರೆ ಆತನ ಪ್ರೇಯಸಿ ಇದೀಗ ಬೇರೊಬ್ಬನ ಜೊತೆ ಮದುವೆಯಾಗಲು ಮುಂದಾಗಿದ್ದಾಳೆ.

ಹೌದು, ಯುವಕನೊಬ್ಬ ಒಂದು ರೂಪಾಯಿ ಹೂಡಿಕೆಯಿಲ್ಲದೆ ಹಲ್ಲುಜ್ಜುವ ಬೇವಿನ ಕಡ್ಡಿ ಮಾರಾಟ ಮಾಡಿ ಕೇವಲ ಒಂದು ವಾರದಲ್ಲಿ ಬರೋಬ್ಬರಿ 40 ಸಾವಿರ ರೂ. ಗಳಿಸಿದ್ದಾನೆ. ಇದೆಲ್ಲಾ ನನ್ನ ಗರ್ಲ್‌ಫ್ರೆಂಡ್‌ ಐಡಿಯಾ, ಈ ಯಶಸ್ಸಿಗೆ ಆಕೆಯೇ ಕಾರಣ ಎಂದು ಹೇಳಿಕೊಂಡಿದ್ದು, ಯುವಕನ ಈ ಮಾತಿಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.ಆ ಹುಡುಗನ ಹೆಸರು ಆಕಾಶ್ ಯಾದವ್ ಮತ್ತು ಈ ಘಟನೆಯ ನಂತರ, ಅವನು ದೇಶಾದ್ಯಂತ ಎಷ್ಟು ಪ್ರಸಿದ್ಧನಾದನೆಂದರೆ, ಅವನನ್ನು ರಿಯಾಲಿಟಿ ಶೋಗೆ ಕರೆಯಲಾಗಿತ್ತು. ಇಷ್ಟೆಲ್ಲಾ ಆಗುವ ಹೊತ್ತಿಗೆ ಯುವಕನ ಪ್ರೇಯಸಿ ಆತನನ್ನು ತೊರೆದು ಮನೆಯವರ ಒಪ್ಪಿಗೆ ಮೇರೆಗೆ ಬೇರೊಬ್ಬರನ್ನು ಮದುವೆಯಾಗಲು ತಯಾರಿ ನಡೆಸಿದ್ದಾಳೆ.

ಯುವಕನು ಫೋನ್ ಮಾಡಿ ಎಷ್ಟೇ ಪ್ರಯತ್ನಿಸಿದರು ಕೂಡ ಯುವತಿ ಮನವೊಲಿಸಲು ಮುಂದಾಗಿಲ್ಲ. ಯುವಕ ತನ್ನ ಗೆಳೆಯರ ಫೋನಿಂದಲೂ ಕೂಡ ಮಾತನಾಡಲು ಪ್ರಯತ್ನಿಸಿದರು ಯುವತಿ ನನ್ನನ್ನು ಮರೆತು ಬಿಡು ಎಂದಿಗೂ ನಾನು ನಿನಗೆ ಸಿಗುವುದಿಲ್ಲ ಎಂದು ಹೇಳಿ ಆತನನ್ನು ಗೋಳಾಡುವಂತೆ ಮಾಡಿದ್ದಾಳೆ. ಇದೀಗ ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.