Home News A R Rahman : ಎ ಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು !! 29 ವರ್ಷಗಳ...

A R Rahman : ಎ ಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು !! 29 ವರ್ಷಗಳ ಸಂಬಂಧಕ್ಕೆ ಅಂತ್ಯ ಹಾಡಿದ ಸಂಗೀತ ಮಾಂತ್ರಿಕ

Hindu neighbor gifts plot of land

Hindu neighbour gifts land to Muslim journalist

A R Rahman: ಆಸ್ಕರ್ ಪ್ರಶಸ್ತಿ ವಿಜೇತ ಹಾಗೂ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪತ್ನಿ ಸೈರಾ ಬಾನು ಪತಿಯೊಂದಿಗೆ ಬೇರೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ನಿನ್ನೆ ರಾತ್ರಿ (ನವೆಂಬರ್ 19) ಎ ಆರ್ ರೆಹಮಾನ್ ಪತ್ನಿ ಹೇಳಿಯೊಂದನ್ನು ಬಿಡುಗಡೆ ಮಾಡಿದ್ದು, ಪತಿ ಎಆರ್ ರೆಹಮಾನ್‌ರೊಂದಿಗೆ ವಿಚ್ಛೇದನ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಸುದ್ದಿಯಿಂದ ಚಿತ್ರರಂಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ.

ಹೌದು, ಸಂಗೀತ ಮಾಂತ್ರಿಕ ಎ.ಆರ್‌.ರೆಹಮಾನ್‌ (A.R. Rahman) ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಎ.ಆರ್.ರೆಹಮಾನ್ ಅವರ ಪತ್ನಿ ಸೈರಾ ಬಾನು (Saira Banu) ಸುಮಾರು 3 ದಶಕಗಳ ದಾಂಪತ್ಯ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಎ.ಆರ್.ರೆಹಮಾನ್ 1995ರಲ್ಲಿ ಸೈರಾ ಬಾನು ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ. ಪತಿ ಮತ್ತು ಪತ್ನಿ ನಡುವೆ ಪ್ರೀತಿ ಇದ್ದರೂ ಇಬ್ಬರ ಸಂಬಂಧದಲ್ಲಿ ಬಿರುಕು ಮಾಡಿದೆ. ಹೀಗಾಗಿ ಸೈರಾ ಅವರು ಪತಿ ರೆಹಮಾನ್‌ ಅವರಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

“ಮದುವೆಯಾದ ಹಲವು ವರ್ಷಗಳ ನಂತರ, ಶ್ರೀಮತಿ ಸೈರಾ ತನ್ನ ಪತಿ ಶ್ರೀ ಎ ಆರ್ ರೆಹಮಾನ್ ಅವರಿಂದ ಬೇರ್ಪಡುವ ಕಠಿಣ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಅವರ ಸಂಬಂಧದಲ್ಲಿ ಗಮನಾರ್ಹ ಭಾವನಾತ್ಮಕ ಒತ್ತಡದ ನಂತರ ಈ ನಿರ್ಧಾರ ಬಂದಿದೆ. ಪರಸ್ಪರರ ಬಗ್ಗೆ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗಳು ಉದ್ವಿಗ್ನತೆ ಮತ್ತು ತೊಂದರೆಗಳು ತಮ್ಮ ನಡುವೆ ಪರಿಹರಿಸಲಾಗದ ಅಂತರವನ್ನು ಸೃಷ್ಟಿಸಿವೆ ಎಂದು ಕಂಡುಕೊಂಡಿದ್ದಾರೆ, ಈ ಸಮಯದಲ್ಲಿ ಎರಡೂ ಪಕ್ಷಗಳು ಅದನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ. ಶ್ರೀಮತಿ ಸೈರಾ ಅವರು ನೋವು ಮತ್ತು ಯಾತನೆಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಒತ್ತಿ ಹೇಳಿದರು. ಶ್ರೀಮತಿ ಸೈರಾ ಈ ಸವಾಲಿನ ಸಮಯದಲ್ಲಿ ಸಾರ್ವಜನಿಕರಿಂದ ಗೌಪ್ಯತೆ ಮತ್ತು ತಿಳುವಳಿಕೆಯನ್ನ ವಿನಂತಿಸುತ್ತಾರೆ, ಏಕೆಂದರೆ ಅವರು ತಮ್ಮ ಜೀವನದ ಈ ಕಷ್ಟಕರ ಅಧ್ಯಾಯವನ್ನು ನ್ಯಾವಿಗೇಟ್ ಮಾಡುತ್ತಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ರೆಹಮಾನ್ ಪುತ್ರ ಅಮೀನ್ ಕೂಡ ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.