

ಬೆಳ್ತಂಗಡಿ: ರೆಖ್ಯ ಗ್ರಾಮದ ಸರ್ವೆ ನಂಬರ್ 69/1ರಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳು ಸುಮಾರು ನಾಲ್ಕು ವರ್ಷಗಳ ಹಿಂದೆ ನಡೆಸಿದ ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡಿದ್ದು ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಕಂದಾಯ ಭೂಮಿಯನ್ನು ಬೇರ್ಪಡಿಸಿ ರೆಖ್ಯ ಗ್ರಾಮದ ನಿವಾಸಿಗಳಿಗೆ ಒದಗಿಸುವಂತೆ ಶಾಸಕ ಹರೀಶ್ ಪೂಂಜರವರು ಅರಣ್ಯ, ಜೈವಿಕ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆರವರಿಗೆ ಮನವಿ ಸಲ್ಲಿಸಿದ್ದರು.
ಕಡತವು ಸರ್ಕಾರದ ಹಂತದಲ್ಲಿದ್ದು ಈ ಕಾರಣದಿಂದಾಗಿ 94 ಸಿ ಮತ್ತು 94 ಸಿಸಿ ಹಕ್ಕುಪತ್ರವನ್ನು ಸ್ಥಳೀಯ ಗ್ರಾಮವಾಸಿಗಳಿಗೆ ನೀಡಲು ಸಹಕಾರಿಯಾಗುವ ನಿಟ್ಟಿನಲ್ಲಿ ತಾವು ಈ ಕಡತವನ್ನು ಕೂಡಲೇ ಪರಿಶೀಲಿಸಿ ಸೂಕ್ತ ಆದೇಶ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ರೆಖ್ಯ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.














